ಅಥವಾ
(9) (5) (2) (1) (4) (0) (0) (0) (2) (0) (0) (0) (0) (0) ಅಂ (3) ಅಃ (3) (8) (0) (0) (0) (0) (0) (0) (3) (0) (0) (0) (0) (0) (0) (0) (9) (0) (2) (1) (2) (4) (0) (6) (5) (9) (0) (2) (0) (3) (1) (3) (1) (6) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತನ್ನ ಪರಿಸ್ಪಂದವ ಸಾಕುವುದಕ್ಕೆ ಗುರು ಲಿಂಗಜಂಗಮಕ್ಕೆಂದು ಬೇಡಿ ಒಡಲ ಹೊರೆವ ಪರಿ. ಇನ್ನೆಂತುಂಟಯ್ಯಾ? ಗುರುವಿಂಗೆಂದಲ್ಲಿ ಅಂಗದಾಸೆಯಿಲ್ಲದೆ, ಲಿಂಗಕ್ಕೆಂದಲ್ಲಿ ಸಂದು ಸಂಶಯವಿಲ್ಲದೆ, ಜಂಗಮಕ್ಕೆಂದಲ್ಲಿ ಇಂದು ನಾಳೆಯೆಂಬ ಸಂದೇಹವ ಹರಿದು ಮಾಡುವನ ಇರವೆ ಷಡುಸ್ಥಲ ಬ್ರಹ್ಮಮೂರ್ತಿ. ಆತ ಇಹದಲ್ಲಿ ಸುಖಿ, ಪರದಲ್ಲಿ ಪರಿಣಾಮಿ, ಆತ ಕಾಲಾಂತಕಲಿಂಗವು ತಾನೆ.
--------------
ಡಕ್ಕೆಯ ಬೊಮ್ಮಣ್ಣ
ತ್ರಿವಿಧ ದೇವ ಕುಲಜಾತಿಗಾದಡೂ ಆಗಲಿ ಪಂಡಿತ ವಿದಗ್ಧ ಜಾಣ ಗಾಂಬ್ಥೀರ ಸಂಪದನಾದಡೂ ಆಗಲಿ ಯಾಚಕತನದಲ್ಲಿ ಘಾತಕತನದಿಂದ ಬೇಡುವುದೆ ಜೀವನ. ಆ ಜೀವನವ ಮರೆದು ಒರಗಿದುದೆ ಮಾರಿ. ಆ ಮರವೆಯ ಹರಿದುದೆ ಕಾಲಾಂತಕ ಬ್ಥೀಮೇಶ್ವರಲಿಂಗವು.
--------------
ಡಕ್ಕೆಯ ಬೊಮ್ಮಣ್ಣ
ತುಂಬಿದ ಹರುಗುಲದಲ್ಲಿ ಒಬ್ಬಂಬಿಗನ ಆಸೆಯಿಂದ ಬೆಂಬಳಿಯಲ್ಲಿ ಹೋಹರಂತೆ ಸಕಲೇಂದ್ರಿಯವೆಂಬ ಅಂಗದ ಹರಿಗುಲದಲ್ಲಿ ಲಿಂಗವೆಂಬ ಅಂಬಿಗನ ದೆಸೆಯಲ್ಲಿ ಹೋಹ ಬೆಂಬಳಿಯತೋರಯ್ಯಾ, ಕಾಲಾಂತಕ ಭೀಮೇಶ್ವರಲಿಂಗವೆ.
--------------
ಡಕ್ಕೆಯ ಬೊಮ್ಮಣ್ಣ
ತನುವೆಂಬಂಗವ ತಾಳಿ ಬಂದಾಗವೆ ಮನವೆಂಬ ಮಾರಿ ಒಡಲ ಹೊಕ್ಕಿತ್ತು. ಉಭಯದೊಡಲ ಕೊಂಡು ಬಂದೆ. ಬಲದ ಕೈಯಲ್ಲಿ ಜಗ ಪೂಜಿಸುವ ಶಕ್ತಿ. ಎನ್ನ ಮನದ ಕೊನೆಯಲ್ಲಿ ಕಾಲಾಂತಕ ಭೀಮೇಶ್ವರಲಿಂಗವಲ್ಲದಿಲ್ಲಾ ಎಂಬ ಭಾಷೆ.
--------------
ಡಕ್ಕೆಯ ಬೊಮ್ಮಣ್ಣ
ತರುವಾಗ ಹುಟ್ಟಿ ವಾಯುವಿಗೆ ಎಡೆಗೊಡದಿರಬಹುದೆ? ತನುವೆಂಬುದ ಹೊತ್ತು ಲಿಂಗವ ಪೂಜಿಸದಿರಬಹುದೆ? ಅಂಗವಿಲ್ಲದ ಸಂಗವಂಟೆ? ಸಂಗವಿಲ್ಲದ ಸುಖವುಂಟೆ? ಸುಖವಿಲ್ಲದ ಕಳೆ ರಸವುಂಟೆ? ಇಂತೀ ಅಂಗದಲ್ಲಿದ್ದಂತೆ ಲಿಂಗವನರಿದು, ಲಿಂಗದಲ್ಲಿದಂತೆ ಸಕಲ ಪ್ರಪಂಚಿಕವ ಮುರಿದು ನಿಂದಲ್ಲಿ ಕಾಲಾಂತಕ ಭೀಮೇಶ್ವರಲಿಂಗವು ತಾನೆ.
--------------
ಡಕ್ಕೆಯ ಬೊಮ್ಮಣ್ಣ
ತನುವೆಂಬ ಮೊರದಲ್ಲಿ ಮಾಯಾಗುಣವೆಂಬ ಮಾರಿಯ ಹಿಡಿದು ರಾಜಸ ತಾಮಸವೆಂಬ ಬಾಳು ಬಟ್ಟಲು ಕೈಯಲ್ಲಿ. ಪ್ರಳಯ ಸಂಹಾರವೆಂಬ ಬಳೆಯ ಕೈಯಲಿಕ್ಕಿ, ಅಂಗದ ಮನೆಯ ಬಾಗಿಲಲ್ಲಿ ಕೊಂಡು ಬಂದಿದೇನೆ. ಬಲ್ಲವರಿಕ್ಕಿ, ಅರಿಯದವರೆಲ್ಲರೂ ಸುಮ್ಮನಿರಿ. ಡಕ್ಕೆಯ ಉಲುಹಡಗುವುದಕ್ಕೆ ಮುನ್ನವೆ ನಿಶ್ಚೆ ೈಸಿ, ನಿಜತತ್ವವನರಿ, ಕಾಲಾಂತಕ ಭೀಮೇಶ್ವರಲಿಂಗವನರಿಯಬಲ್ಲಡೆ.
--------------
ಡಕ್ಕೆಯ ಬೊಮ್ಮಣ್ಣ
ತಾತಂದ ತನುವೆಲ್ಲವು ದೋಷ, ಆ ತನುವಿನಲ್ಲಿ ಬಂದ ಮನವೆಲ್ಲವು ಪ್ರಕೃತಿ. ಅದಕ್ಕೆ ಇದಿರಿಟ್ಟು ತೋರಿದ ತ್ರಿವಿಧ ಮೂರ್ತಿಯ ಪರುಷ ಪಾಷಾಣವನಿದಿರಿಟ್ಟಂತೆ ತಮ ಜ್ಯೋತಿಯನಿದಿರಿಟ್ಟಂತೆ ಅರಿವು ಮರವೆಯನರಿವುದಕ್ಕೆ ಇದಿರಿಟ್ಟುಕುರುಹ ಕೊಂಡು ಬಂದೆ. ಮರೆಯದಿರಕ್ಕನೆ, ಮರವೆಯಲ್ಲಿ ಡಕ್ಕೆ ಧಿಕ್ಕರಿಸುತ್ತದೆ. ಕಾಲಾಂತಕ ಭೀಮೇಶ್ವರಲಿಂಗವನರಿಯಹೇಳಿ.
--------------
ಡಕ್ಕೆಯ ಬೊಮ್ಮಣ್ಣ
ತಾನರಿಯದೆ ಮಾಡಿದ ದೋಷಕ್ಕೆ ತನಗೆ ಅಘೋರವಿಲ್ಲ. ಅದು ಜಗದ ಹುದುಗು. ತಾನರಿದು ಅಲ್ಲ ಅಹುದೆಂದು ಎಲ್ಲರಿಗೆ ಹೇಳಿ ಪರಧನದಲ್ಲಿ ಪರಸತಿಯಲ್ಲಿ ಅನ್ಯರ ನಿಂದೆಯಲ್ಲಿ ವ್ರತಾಚಾರಭಂಗಿತರಲ್ಲಿ ಇದನರಿದು ಅನುಸರಣೆಯ ಮಾಡಿದಡೆ ಕುಂಭೀನರಕದಲ್ಲಿ ಹಿಂಗದಿರ್ಪನು. ಕಾಲಾಂತಕ ಭೀಮೇಶ್ವರಲಿಂಗಕ್ಕೆ ಸ್ವಪ್ನದಲ್ಲಿ ದೂರಸ್ಥನು.
--------------
ಡಕ್ಕೆಯ ಬೊಮ್ಮಣ್ಣ
ತನಗೆ ಇದಿರಿಟ್ಟು ಕಾಬುದೆಲ್ಲವು ತನಗೆ ಅನ್ಯದೈವ. ತಾ ಕುರುಹಳಿದು ತನಗೆ ಅನ್ಯವೆಂಬುದೊಂದಿಲ್ಲವಾಗಿ ಅದು ತನಗೆ ಭಿನ್ನವಿಲ್ಲದ ದೈವ. ಅಹಂಕಾರವೆಂಬ ಆತ್ಮಘಟದ ಮಾರಿಯ ಹೊತ್ತು ಉಲುವೆಂಬ ಡಕ್ಕೆಯ ಹಿಡಿದು ಭವಭವವೆಂಬ ಬಾಗಿಲಲ್ಲಿ ತಿರುಗಾಡುತ್ತಿದ್ದೇನೆ, ಡಕ್ಕೆಯ ದನಿಯ ಬಿಡಿಸು, ಕಾಲಾಂತಕ ಭೀಮೇಶ್ವರಲಿಂಗ.
--------------
ಡಕ್ಕೆಯ ಬೊಮ್ಮಣ್ಣ