ಅಥವಾ
(9) (5) (2) (1) (4) (0) (0) (0) (2) (0) (0) (0) (0) (0) ಅಂ (3) ಅಃ (3) (8) (0) (0) (0) (0) (0) (0) (3) (0) (0) (0) (0) (0) (0) (0) (9) (0) (2) (1) (2) (4) (0) (6) (5) (9) (0) (2) (0) (3) (1) (3) (1) (6) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಾಯಾಗುಣ ರೂಪಾದಲ್ಲಿ ಮಲಕ್ಕೊಡಲಾಯಿತ್ತು ಮಲಸ್ಥರೂಪವಾಗಿ ನಿಂದಲ್ಲಿ ಬಲವಂತರೆಲ್ಲರು ಮಲದ ಬೆಂಬಳಿಯಲ್ಲಿ ಮರುಳಾದರು. ಮರುಳಾಟದಲ್ಲಿ ಮಾರಿ ಒಲವರವಾಗಿ ಮನ ಶುದ್ಧವಿಲ್ಲದವರ ಮನೆ ಮನೆಯಲ್ಲಿ ತನುವಿಕಾರವನಾಡಿಸುತ್ತೈದಾಳೆ. ಮಾರಿಯ ಮುರಿದು ದಾರಾವತಿಯ ಕೆಡಿಸಿ ಕೈಯ ಡಕ್ಕೆಯ ಗತಿಯ ಹಿಂಗಿ ಮಾಯೆಯ ಬಾಗಿಲ ಭ್ರಾಂತಿಯ ಬಿಟ್ಟಲ್ಲಿ ಕಾಲಾಂತಕ ಬ್ಥೀಮೇಶ್ವರಲಿಂಗವನರಿದುದು.
--------------
ಡಕ್ಕೆಯ ಬೊಮ್ಮಣ್ಣ
ಮರೆದವರ ಮನದಲ್ಲೆಲ್ಲವೂ ಮಾರಿ. ಅರಿದವರ ಮನದಲ್ಲೆಲ್ಲವೂ ಸ್ವಯಂಜ್ಯೋತಿ. ಡಕ್ಕೆಯ ದನಿ ಉಳ್ಳನ್ನಕ್ಕ ನಿಶ್ಚೆ ೈಸಿಕೊಳ್ಳಿ, ಕಾಲಾಂತಕ ಬ್ಥೀಮೇಶ್ವರಲಿಂಗವನರಿವುದಕ್ಕೆ.
--------------
ಡಕ್ಕೆಯ ಬೊಮ್ಮಣ್ಣ
ಮರೆಯಲ್ಲಿದ್ದ ಸಂಚ ತೆರ ದರುಶನವಾಗಲಾಗಿ ಆಶ್ಚರಿಯೆಂಬುದು ಬಿಟ್ಟಿತ್ತು. ಅಂಗದ ಮೇಲಣ ಲಿಂಗ ನೆನಹಿಂಗೆ ನಿಲಲಾಗಿ ಕುರುಹೆಂಬಭಾವವಡಗಿತ್ತು. ಸರ್ವೇಂದ್ರಿಯಂಗಳು ಹಿಂಗಿ ಏಕಭಾವ ಸಲೆಸಂದು ಉಭಯದಂಗ ಲೇಪವಾದುದು ಕಾಲಾಂತಕ ಭೀಮೇಶ್ವರಲಿಂಗ ದ್ವಂದ್ವವಳಿದು ನಿಂದಸ್ಥಲ.
--------------
ಡಕ್ಕೆಯ ಬೊಮ್ಮಣ್ಣ
ಮತ್ತಾರನೂ ನುಡಿಯದೆ ತಾನಾರೈದು ಮಾಡುವ ಪರಿಯಿನ್ನೆಂತು? ಸಜ್ಜನ ಶರಣರಲ್ಲಿ ಭಕ್ತಿ, ಅಸಜ್ಜನ ದುರ್ವೃತ್ತರಲ್ಲಿ ಧಿಕ್ಕಾರ. ಬಿಡುಮುಡಿಯಲ್ಲಿ ನಿಜತತ್ವವನರಿದು ಮಾಡುವುದುಮಾಡಿಸಿಕೊಂಬುದು ಕಾಲಾಂತಕ ಭೀಮೇಶ್ವರಲಿಂಗಕ್ಕೆ ಸಮರ್ಪಿತ.
--------------
ಡಕ್ಕೆಯ ಬೊಮ್ಮಣ್ಣ
ಮಾತ ಅಲೇಖದ ಮೇಲಕೆ ಕುರುಹಿಟ್ಟಲ್ಲದೆ ನೀತಿಲಕ್ಷಣವ ಕಾಣಬಾರದು. ಚಿತ್ತ ತಾ ಪೂಜಿಸುವ ವಸ್ತುವಿನಲ್ಲಿ ಲಕ್ಷಿಸಿಯಲ್ಲದೆ ಮೇಲಣ ಅಲಕ್ಷವ ಕಾಣಬಾರದು. ಕಾಬನ್ನಕ್ಕ, ಉಭಯದ ಆಚರಣೆ ತಾನುಳ್ಳನ್ನಕ್ಕ, ಕಾಲಾಂತಕ ಭೀಮೇಶ್ವರಲಿಂಗವ ಪೂಜಿಸಬೇಕು.
--------------
ಡಕ್ಕೆಯ ಬೊಮ್ಮಣ್ಣ
ಮಹಾಕಾಳಾಂಧರ ಹಿಂಗಿ ಕಾಲಂಗಳಹಾಗ ಮಾಯಾಂಗನೆ ಮಹಾದೇವನ ಮರೆದವರಿಗೆ ಮಾರಿಯಾದಳು. ಸತ್ಕಿ ್ರೀಸಜ್ಜನಯುಕ್ತಿಯಿಂದ ಸದಾಶಿವನನರಿಯಲಾಗಿ ಉಮಾದೇವಿಯಾದಳು. ಇಂತೀ ಗುಣವ ಮರೆದಡೆ ಮಾಯೆಯಾಗಿ ಅರಿದಡೆ ಸ್ವಯವಾಗಿ ತನ್ನಲ್ಲಿ ಅನ್ಯಭಿನ್ನವಿಲ್ಲದೆ ಡಕ್ಕೆಯ ಉಲುಹಡಗುವುದಕ್ಕೆ ಮೊದಲೆ ಕಾಲಾಂತಕ ಭೀಮೇಶ್ವರಲಿಂಗವನರಿಯಬೇಕು.
--------------
ಡಕ್ಕೆಯ ಬೊಮ್ಮಣ್ಣ
ಮರವೆಗೆ ಅರಿವು ಸಂಬಂಧವಹಲ್ಲಿ ಮನ ತುಂಬಿದ ತಮಕ್ಕೆ ಜ್ಯೋತಿ ಒಂದೆ ಅವಗವಿಸಿದಂತೆ, ಪ್ರಕೃತಿ ಚಿತ್ತವನರಿವುದಕ್ಕೆ ಮತ್ತಗಜವ ಹಾರೆಯಲ್ಲಿ ಒತ್ತೆ, ಮೇಲಿದ್ದವನ ಚಿತ್ತನರಿದಡಗುವಂತೆ ಸಂಸಾರಯುಕ್ತಿಯನರಿವವನ ಮಥನ. ಲೋಹ ಘನವಾಗಿ, ಸಿದ್ದಿಯ ಸಾರ ಅಲ್ಪವಾಗಿ ವೇಧಿಸುವಂತೆ ಘನ ಶೈಲಕ್ಕೆ ಅಂಗುಲದೊಳಗಡಗಿದ ಕುಲಿಶದಂತೆ, ಮರೆದಲ್ಲಿ ಅರಿದು ಎಚ್ಚತ್ತು ಅರಿವವನ ವಿವರ; ಪೂಜಿಸಿ ಪುಣ್ಯವನರಿವ ಭಾವಶುದ್ಧಾತ್ಮನ ಭಾವಸ್ಥಲ; ಕಾಲಾಂತಕ ಭೀಮೇಶ್ವರಲಿಂಗವನರಿವುದಕ್ಕೆ ಉಭಯ ನಾಮತೆರನಿಲ್ಲದ ತೆರ.
--------------
ಡಕ್ಕೆಯ ಬೊಮ್ಮಣ್ಣ
ಮಲ ಅಮಲವೆಂಬ ಉಭಯವ ವಿಚಾರಿಸುವಲ್ಲಿ, ಕ್ರೀ ನಿಃಕ್ರೀಯೆಂದು ಭಾರಿಸುವಲ್ಲಿ, ಅಳಿವುದೇನು ಉಳಿದೇನು ಎಂಬುದ ತಾನರಿದಲ್ಲಿ, ಅಂಗದ ಮೇಲೊಂದು ಲಿಂಗವುಂಟೆಂದು ಮನದ ಮೇಲೊಂದು ಲಿಂಗವುಂಟೆಂದು ಭಿನ್ನಭಾವದಿಂದ ಕಾಬಲ್ಲಿ ಅಂಗಕ್ಕೂ ಮನಕ್ಕೂ ಲಿಂಗವೊಂದಲ್ಲದೆ, ಆತ್ಮ ಹಲವಿಲ್ಲ ಲಿಂಗ ಕೆಲವಿಲ್ಲ. ಗಿಂಡೆಯ ಉದಕ ಉಭಯ ಸಂಧಿಯಲ್ಲಿ ಬಾಹಂತೆ, ತುಂಬುವ ಘಟವೊಂದು ಸೂಸುವ ಜೂಳಿ ಬೇರಾದಂತೆ, ಅಂಗ ಪ್ರಾಣಲಿಂಗ ಸಂಬಂಧಯೋಗ ಸಂಭವವಾದಲ್ಲಿ ಕಾಲಾಂತಕ ಭೀಮೇಶ್ವರಲಿಂಗವು ತಾನೆ.
--------------
ಡಕ್ಕೆಯ ಬೊಮ್ಮಣ್ಣ
ಮೂರವಸ್ಥೆಯಲ್ಲಿ ತೋರುವುದು ಸತ್ವಗುಣ. ಆರವಸ್ಥೆಯಲ್ಲಿ ತೋರುವುದು ರಜೋಗುಣ. ಏಳವಸ್ಥೆಯಲ್ಲಿ ತೋರುವುದು ತಮೋಗುಣ. ಇಂತೀ ತ್ರಿವಿಧಾವಸ್ಥೆಯಲ್ಲಿ ತೋರುವವೆಲ್ಲವೂ ಅಪ್ಪುವಿನ ಸಂಚಾರಗುಣ. ಸತ್ವ ರಜ ತಮಂಗಳಲ್ಲಿ ನಿಶ್ಚೆ ೈಸಿ ನಿಂದುದು ಕಾಲಾಂತಕ ಭೀಮೇಶ್ವರಲಿಂಗದಲ್ಲಿ ಸಲೆ ಸಂದುದು.
--------------
ಡಕ್ಕೆಯ ಬೊಮ್ಮಣ್ಣ