ಶ ಪದದಿಂದ ಪ್ರಾರಂಭವಾಗುವ ವಚನಗಳು:
ಶಿಲೆ ಭಾವ ಹಿಂಗಿ ಕುರುಹಾಯಿತ್ತು, ಕಾರುಕನ ಕೈಯಲ್ಲಿ,ಪಾಷಾಣ ಭಾವ ಹಿಂಗಿ ಕಳೆಯಾಯಿತ್ತು. ಆಚಾರ್ಯನ ಕೈಯಲ್ಲಿ.ಕಳೆ ನೆಲೆಯಾಯಿತ್ತು, ಪೂಜಿಸುವಾತನ ಚಿತ್ತದಲ್ಲಿ.ಚಿತ್ತ ವಸ್ತುವಿನಲ್ಲಿ ಬೆರೆದು ಕಾಲಾಂತಕಬ್ಥೀಮೇಶ್ವರಲಿಂಗವಾಯಿತ್ತು
ಶರಣಸತಿ ಲಿಂಗಪತಿಯಾದಲ್ಲಿಯೆ ಕಾಯಗುಣ ನಿಂದಿತ್ತುಆತ್ಮಸತಿ ಅರಿವು ಪುರುಷನಾದಲ್ಲಿಯೇ ಜೀವಗುಣ ನಿಂದಿತ್ತು.ನೀನೆಂಬುದ ಭಾವಿಸಿ ಮಾಡಿದಾಗವೆ ಕಾಯಕ ಶುದ್ಧವಾಯಿತ್ತು.ಕಾಲಾಂತಕ ಭೀಮೇಶ್ವರಲಿಂಗಕ್ಕೆ ಸಲೆ ಸಂದಿತ್ತು.
ಶ್ವೇತಾಂಗ ಬಹುವರ್ಣವ ಬೆರಸಿದಂತೆಆತ್ಮನೊಂದಾಗಿ ಪ್ರಕೃತಿ ಹಲವ ಧರಿಸಿದಂತೆತಾ ಬಂದ ಗುಣವನರಿದು,ಇದ್ದ ಇರವಿನ ಸದ್ವರ್ತನೆಯಿಲ್ಲದೆಆಚರಣೆಗೆ ಅನುಸರಣೆಯಿಲ್ಲದೆಅರಿವನರಿದು ಅಮಂಗಲಕ್ಕೊಳಗಾಗದೆನಿರ್ಮಲತರಂಗವನೆಯ್ದಿ ಸಂದುದುಕಾಲಾಂತಕ ಭೀಮೇಶ್ವರಲಿಂಗದಂಗ.