ಅಥವಾ
(9) (5) (2) (1) (4) (0) (0) (0) (2) (0) (0) (0) (0) (0) ಅಂ (3) ಅಃ (3) (8) (0) (0) (0) (0) (0) (0) (3) (0) (0) (0) (0) (0) (0) (0) (9) (0) (2) (1) (2) (4) (0) (6) (5) (9) (0) (2) (0) (3) (1) (3) (1) (6) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತಸ್ಥಲ ಸಂಗನ ಬಸವಣ್ಣಂಗಾಯಿತ್ತು. ಮಾಹೇಶ್ವರ ಸ್ಥಲ ಮಡಿವಾಳಯ್ಯಂಗಾಯಿತ್ತು. ಪ್ರಸಾದಿಸ್ಥಲ ಚನ್ನಬಸವಣ್ಣಂಗಾಯಿತ್ತು. ಪ್ರಾಣಲಿಂಗಿಸ್ಥಲ ಚಂದಯ್ಯಂಗಾಯಿತ್ತು. ಶರಣಸ್ಥಲ ಘಟ್ಟಿವಾಳಯ್ಯಂಗಾಯಿತ್ತು. ಐಕ್ಯಸ್ಥಲ ಅಜಗಣ್ಣಂಗಾಯಿತ್ತು. ಇಂತೀ ಷಡುಸ್ಥಲಬ್ರಹ್ಮಿಗಳೆಲ್ಲರೂ ಎನ್ನಂಗದ ಮೊರದ ಮಾರಿಯ ಸಂಗಾತದಲೈದಾರೆ. ಆರಂಗದ ಮೂರು ಸಂಗದ ತೋರಿಕೆಯ ತೋರಾ, ಕಾಲಾಂತಕ ಬ್ಥೀಮೇಶ್ವರಲಿಂಗವೆ.
--------------
ಡಕ್ಕೆಯ ಬೊಮ್ಮಣ್ಣ
ಭ್ರಾಮಕದಲ್ಲಿ ಮಾಡದೆ, ಆಢ್ಯತನಕ್ಕೆ ಮಚ್ಚದೆ ಸ್ತುತಿ ನಿಂದೆಗಳ ಗುರುಲಿಂಗ ಜಂಗಮದಲ್ಲಿ ವಿಚಾರಿಸದೆ ತಾ ಮಾಡುವ ದ್ರವ್ಯಕ್ಕೆ ವಿಶ್ವಾಸದ ಚಿತ್ತಕ್ಕೆ ಉಭಯವನರಿದು ಮಾಡುವ ಭಕ್ತನ ಬಾಗಿಲೆ ಕಾಲಾಂತಕ ಬ್ಥೀಮೇಶ್ವರಲಿಂಗದ ಆಶ್ರಯ.
--------------
ಡಕ್ಕೆಯ ಬೊಮ್ಮಣ್ಣ
ಭಕ್ತನ ಭಕ್ತ, ಮಾಹೇಶ್ವರನ ಮಾಹೇಶ್ವರ, ಪ್ರಸಾದಿಯ ಪ್ರಸಾದಿ, ಪ್ರಾಣಲಿಂಗಿಯ ಪ್ರಾಣಲಿಂಗಿ, ಶರಣನ ಶರಣ, ಐಕ್ಯನ ಐಕ್ಯ. ಒಳಗಿನ ಸ್ಥಲವ ಹೊರಹೊಮ್ಮುವಾಗ ಬಿಂಬಕ್ಕೆ ಬಿಂಬದ ಪ್ರತಿಬಿಂಬವ ಕಾಬಂತೆ. ಅದರ ಸಂಗವ ಘಟಿಸಿದಲ್ಲಿ ಷಡುಸ್ಥಲ ಬ್ರಹ್ಮವಾಯಿತ್ತು ಕಾಲಾಂತಕ ಭೀಮೇಶ್ವರಲಿಂಗವನರಿದಲ್ಲಿ.
--------------
ಡಕ್ಕೆಯ ಬೊಮ್ಮಣ್ಣ
ಭಕ್ತನಾಗಿದ್ದಲ್ಲಿ ಪೃಥ್ವಿಯಂಗವೆ ಮಾಯೆ. ಮಾಹೇಶ್ವರನಾಗಿದ್ದಲ್ಲಿ ಅಪ್ಪುವಿನಂಗವೆ ಮಾಯೆ. ಪ್ರಸಾದಿಯಾಗಿದ್ದಲ್ಲಿ ಅಗ್ನಿಯಂಗವೆ ಮಾಯೆ. ಪ್ರಾಣಲಿಂಗಿ ಶರಣೈಕ್ಯನೆಂಬಲ್ಲಿ ಭಾವದ ಕಲೆಯ ವಿಚಾರಿಸುವುದೆ ಮಾಯೆ. ಕಾಯದ ಭಾವವುಳ್ಳನ್ನಕ್ಕ ಮರವೆಯೆಂಬ ಮಾರಿಯ ಹೊತ್ತು ತಿರುಗಾಡುತ್ತಿದ್ದೇನೆ ಮಾರಿಯ ಮರಣದಲ್ಲಿ ಮರವೆಯ ಮಾಡದೆ ಎನ್ನನಾರೈದುಕೊ, ಕಾಲಾಂತಕ ಭೀಮೇಶ್ವರಲಿಂಗ.
--------------
ಡಕ್ಕೆಯ ಬೊಮ್ಮಣ್ಣ
ಭೂರಿ ಅವಾರಿಗಳಲ್ಲಿ ಮಾಡುವುದೆ ರಾಜತ್ವ. ಆ ಠಾವಿನಲ್ಲಿ ಕೂಡಿ ಆಡುವುದೆ ಸಮಯಭೇದ. ರಾಜಸವನರಿವನ್ನಕ್ಕ ತಾಮಸದಲ್ಲಿ ಪೂಜಿಸಿಕೊಳಬೇಕು. ಆ ಗುಣ ವಿಷವ ಕಡೆದು ಅಮೃತವ ಕಾಬಂತೆ. ಉಭಯದ ಸಿಕ್ಕು, ಕಾಲಾಂತಕ ಭೀಮೇಶ್ವರಲಿಂಗವನುಒಪ್ಪದ ಭಕ್ತಿ.
--------------
ಡಕ್ಕೆಯ ಬೊಮ್ಮಣ್ಣ