ರ ಪದದಿಂದ ಪ್ರಾರಂಭವಾಗುವ ವಚನಗಳು:
ರತ್ನ ಪಾಷಾಣದ ಕುಲದಲ್ಲಿದ್ದು ಸ್ವಜಾತಿಗೆ ಸಿಕ್ಕದಂತೆ,ಗಂಧ ಕುಸುಮದಲ್ಲಿದ್ದು ಅದರೊಳಗೆ ಬಂಧಿತವಾಗದಂತೆ,ವಾಯುಸಕಲ ಚೇತನದೊಳಗಿದ್ದುರೂಪಿಂಗೊಡಲಿಲ್ಲದೆ ಅಲೆಯಲಿಕ್ಕೆ ಉಂಟಾಗಿ,ಆ ತೆರದಂತೆ, ಹಿಡಿವಲ್ಲಿ ಬಿಡುವಲ್ಲಿ ಒಡಗೂಡುವ ಸುಖವನರಿತಡೆ;ಕಾಲಾಂತಕ ಭೀಮೇಶ್ವರಲಿಂಗವು ತಾನೆ.
ರಸೇಂದ್ರಿಯ ಗಂಧೇಂದ್ರಿಯ ರೂಪೇಂದ್ರಿಯಶಬ್ದೇಂದ್ರಿಯ ಸ್ವರ್ಶನೇಂದ್ರಿಯಪಂಚೇಂದ್ರಿಯಂಗಳಲ್ಲಿ ಸಲೆ ಸಂದುಒಂದರ ಗುಣವ ಒಂದರಿಯದಂತೆಮತ್ತೆ ಏಕೇಂದ್ರಿಯವೆಂದು ಸಂಧಿಸಿ ಅರ್ಪಿಸುವ ಪರಿಯಿನ್ನೆಂತೊ?ಆ ಗುಣದ ಸಂಗವನರಿದಲ್ಲಿಇಂದ್ರಿಯಂಗಳ ಮುಖದಲ್ಲಿ ಲಿಂಗವನರಿದುದು.ಹುಟ್ಟಿನ ದೆಸೆಯಿಂದ ಹಸ್ತಕ್ಕೆ ಬಂದುಮತ್ತೆ ಜಿಹ್ವೆ ಅರಿದಂತೆ ಅರ್ಪಿತದ ಭೇದ.ಇಷ್ಟ ಪ್ರಾಣಸಂಗ ಕಾಲಾಂತಕ ಭೀಮೇಶ್ವರಲಿಂಗವನರಿವುದಕ್ಕೆಅರ್ಪಿತ ಅವಧಾನಿಯ ಇರವು.