ಅಥವಾ
(9) (5) (2) (1) (4) (0) (0) (0) (2) (0) (0) (0) (0) (0) ಅಂ (3) ಅಃ (3) (8) (0) (0) (0) (0) (0) (0) (3) (0) (0) (0) (0) (0) (0) (0) (9) (0) (2) (1) (2) (4) (0) (6) (5) (9) (0) (2) (0) (3) (1) (3) (1) (6) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉಕ್ಕುದ ಕೊಂಬನ್ನಬರ ಭೃತ್ಯಾಚಾರ ಭಕ್ತಂಗೆ. ಉಕ್ಕುದನಿಕ್ಕಿದಲ್ಲಿ ಅವನ ಅರ್ಥಪ್ರಾಣ ಅಬ್ಥಿಮಾನಕ್ಕೆ ತಪ್ಪುವನಾದಡೆ ಕರ್ತೃತ್ವ ಮೊದಲೆ ಕೆಟ್ಟಿತ್ತು, ಜಂಬುಕಫಲದ ನೇಮವ ಹಿಡಿದಂತಾಯಿತ್ತು, ಅದರಂಗವ ಕಂಡು ನಿಂದಿಸಿದ ಭಕ್ತಂಗೆ. ಬಾಗಿಲ ಪೂಜಿಸಿದ ಜಾರೆ ಲಕ್ಷಣದಂತಾಗಬೇಡ. ನೆರೆ ನಂಬು ಏನ ಹಿಡಿದಲ್ಲಿ, ಕಾಲಾಂತಕ ಬ್ಥೀಮೇಶ್ವರಲಿಂಗವನರಿಯಬಲ್ಲಡೆ.
--------------
ಡಕ್ಕೆಯ ಬೊಮ್ಮಣ್ಣ
ಉರಿಯ ಶ್ರೇಷ*ಕ್ಕೆ ವಾಯುವೆ ಪ್ರಾಣ, ಉರಿಯ ನಂದಿಸುವುದಕ್ಕೆ ವಾಯುವೆ ಯಮ. ಉಭಯವನರಿದು ಮರೆವುದಕ್ಕೆ ಆತ್ಮನೆ ಬೀಜ. ಆತ್ಮನ ಆತ್ಮನನರಿವುದಕ್ಕೆ ಕಾಲಾಂತಕ ಭೀಮೇಶ್ವರ ಲಿಂಗವೆಪ್ರಾಣ.
--------------
ಡಕ್ಕೆಯ ಬೊಮ್ಮಣ್ಣ
ಉಪ್ಪಿನ ನೀರಿಂಗೆ ಪುನನಾಮ ಬಪ್ಪುದಲ್ಲದೆ ಮುತ್ತಿನ ನೀರಿಂಗೆ ಪುನನಾಮವುಂಟೆ? ಪೂರ್ವವನಳಿದು ಪುನರ್ಜಾತನಾದಲ್ಲಿ ಮತ್ತೆ ಲೌಕಿಕವ ಬೆರಸಬಹುದೆ? ರುಂದಿಯ ಫಳದಂತೆ ಸಂದೇಹ ನಾಮವಾಯಿತ್ತು. ಭಕ್ತಜಂಗಮವಾಗಿ ಮತ್ರ್ಯರು ಎನ್ನವರೆಂದಡೆ ಕರ್ತೃತ್ವ ಭಕ್ತಿಯಿತ್ತಲೆ ಉಳಿಯಿತ್ತು. ಕಾಲಾಂತಕ ಭೀಮೇಶ್ವರಲಿಂಗನು ಅವರಿಗೆ ಕತ್ತಲೆಯಾಗಿರ್ಪನು.
--------------
ಡಕ್ಕೆಯ ಬೊಮ್ಮಣ್ಣ
ಉದಕವ ಬೆರೆಸಿದ ಕುಂಪಟಿಯಂತೆ, ಬಹುಗಂಧವ ಕೂಡಿದ ವಾಯುವಿನಂತೆ, ಗುಣ ದೋಷಂಗಳ ವಿಚಾರಿಸದಿಪ್ಪುದು ಸದ್ಭಕ್ತನಿರವು, ಮಾಡುವ ಭೇದ ಸ್ಥಲ; ಸರಮೃತ್ತಿಕೆಯಲ್ಲಿ ಒಸರಲಿಲ್ಲದೆ ನಿಂದಂತೆ; ಈಶ್ವರನ ಶರಣರಿಗೆ ಭಕ್ತಿಯ ಮಾಡುವ ದಾಸೋಹದ ಸದ್ಭಕ್ತನ ಇರವು. ಅದು ಸುಕ್ಷೇತ್ರವಾಸ, ಕಾಲಾಂತಕ ಭೀಮೇಶ್ವರಲಿಂಗನತೆರಪಿಲ್ಲದ ಸುಖವಾಸ.
--------------
ಡಕ್ಕೆಯ ಬೊಮ್ಮಣ್ಣ