ಅಥವಾ
(9) (5) (2) (1) (4) (0) (0) (0) (2) (0) (0) (0) (0) (0) ಅಂ (3) ಅಃ (3) (8) (0) (0) (0) (0) (0) (0) (3) (0) (0) (0) (0) (0) (0) (0) (9) (0) (2) (1) (2) (4) (0) (6) (5) (9) (0) (2) (0) (3) (1) (3) (1) (6) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬ್ರಹ್ಮಂಗೆ ಸರಸ್ವತಿಯಾಗಿ ಬೆನ್ನಲ್ಲಿ ಬಂದಳು ಮಾಯೆ. ವಿಷ್ಣುವಿಂಗೆ ಲಕ್ಷಿ ್ಮಯಾಗಿ ಭವಕ್ಕೆ ತಿರುಗಿದಳು ಮಾಯೆ. ರುದ್ರಂಗೆ ಉಮಾದೇವಿಯಾಗಿ ಶಿರ ತೊಡೆಯಲ್ಲಿ ಕಾಡಿದಳುಮಾಯೆ. ಎಳ್ಳಿಗೆ ಎಣ್ಣೆ, ಮುಳ್ಳಿಗೆ ಮೊನೆಯಾಗಿ, ಹೂವಿಗೆ ಗಂಧವಾಗಿ, ಅವರವರಂಗದಲ್ಲಿ ಹಿಂಗದ ಪ್ರತಿರೂಪಾಗಿ ಸಂದಿಲ್ಲದೆ ಕಾಡುತ್ತಿದ್ದಾಳೆ ಮಾಯೆ. ಡಕ್ಕೆಯ ಉಲುಹಡಗುವುದಕ್ಕೆ ಮುನ್ನವೆ ನಿಶ್ಚೆ ೈಸಿಕೊಳ್ಳಿ, ಕಾಲಾಂತಕ ಬ್ಥೀಮೇಶ್ವರಲಿಂಗವನರಿಯಬಲ್ಲಡೆ.
--------------
ಡಕ್ಕೆಯ ಬೊಮ್ಮಣ್ಣ
ಬ್ರಹ್ಮಾಂಡದಲ್ಲಿ ತೋರುವ ಗುಣ ಅಂಡದಲ್ಲಿ ಕಲೆನಿಲುವಂತೆ, ಅಂಡದಲ್ಲಿ ಜನಿಸುವ ಗುಣ ಪಿಂಡದಲ್ಲಿ ಪ್ರಮಾಣಿಸುವಂತೆ, ಪಿಂಡದಲ್ಲಿ ಪ್ರಮಾಣಿಸುವ ಗುಣ ಸರ್ವಚೇತನದಲ್ಲಿಚೇತರಿಸುವಂತೆ, ಚೈತನ್ಯಾತ್ಮಕ ನೀನೇ, ಕಾಲಾಂತಕ ಭೀಮೇಶ್ವರಲಿಂಗವು ತಾನೆ.
--------------
ಡಕ್ಕೆಯ ಬೊಮ್ಮಣ್ಣ
ಬೆಂದ ಮಣ್ಣಿನಂತೆ, ವಿಚ್ಛಂದವಾದ ಪಯ ಅನ್ನದಂತೆ, ತಂತ್ರವ ಜಾರಿದ ಸೂತ್ರದಂತೆ, ಚೇತನವಿಲ್ಲದ ಡಿಂಬಂಗಳಂತೆ, ಏತಕ್ಕೂ ಸುಳುಹಿಲ್ಲದೆ ನಿಂದ ನಿಲವು ಕಾಲಾಂತಕ ಭೀಮೇಶ್ವರಲಿಂಗವನರಿದುದು.
--------------
ಡಕ್ಕೆಯ ಬೊಮ್ಮಣ್ಣ
ಬ್ರಹ್ಮಂಗೆ ಅಂಡವ ಕೊಟ್ಟು ವಿಷ್ಣುವಿಂಗೆ ಪಿಂಡವ ಕೊಟ್ಟು ರುದ್ರಂಗೆ ಪ್ರಾಣವ ಕೊಟ್ಟು ನೀ ಹೊದ್ದದಿದ್ದ ಪರಿಯ ಹೇಳಾ ಕಾಲಾಂತಕ ಭೀಮೇಶ್ವರಲಿಂಗವೆ.
--------------
ಡಕ್ಕೆಯ ಬೊಮ್ಮಣ್ಣ
ಬ್ರಹ್ಮಪ್ರಳಯವಾದಲ್ಲಿ ತಾ ಕೆಟ್ಟುದಿಲ್ಲ ಮಾರಿ. ವಿಷ್ಣು ಮರಣವಹಲ್ಲಿ ತಾ ಸತ್ತುದಿಲ್ಲ ಮಾರಿ. ರುದ್ರ ಯುಗ ಜುಂಗಂಗಳ ಗೆಲುವಲ್ಲಿ ಮಾಯೆ ಮನಸಿಜನ ಮನವೆಲ್ಲಿತ್ತು ಅಲ್ಲಿದ್ದಳು. ಇಂತೀ ತ್ರಿವಿಧ ಮೂರ್ತಿಗಳಲ್ಲಿ ಮರವೆಯ ದೆಸೆಯಿಂದ ಮಾರಿಯಾಯಿತ್ತು. ಆ ಮಾರಿಯ ಹೊತ್ತು ಭವದ ಬಾಗಿಲಲ್ಲಿ ತಿರುಗಾಡುತ್ತಿದ್ದೇನೆ. ಡಕ್ಕೆಯ ಉಲುಹಡಗುವುದಕ್ಕೆ ಮೊದಲೆ ಭಕ್ತಿ ಮುಕ್ತಿಯನರಿದು ನಿಶ್ಚಯರಾಗಿ ಕಾಲಾಂತಕ ಭೀಮೇಶ್ವರಲಿಂಗವನರಿಯಬಲ್ಲಡೆ.
--------------
ಡಕ್ಕೆಯ ಬೊಮ್ಮಣ್ಣ
ಬಂದ ಬಂದವರೆಲ್ಲರೂ ತಾವು ಬಂದಂಗದಲ್ಲಿ ಸುಖಿಗಳು. ಕಂಡಕಂಡವರೆಲ್ಲರೂ ತಾವು ನಿಂದ ಲಿಂಗದಲ್ಲಿಯೆ ಸುಖಿಗಳು. ತನು ಕಾಯಕ ಮನ ಲಿಂಗದಾಸೋಹ ಜಂಗಮದಲ್ಲಿ ನಾನೆಂಬುದನಳಿದು ಮಾಡುವುದು. ಕಾಯಕವೇನಾದಡೂ ಆಗಲಿ, ಆ ಗುಣ ಕಾಲಾಂತಕ ಭೀಮೇಶ್ವರಲಿಂಗಕ್ಕೆ ಅರ್ಪಿತ.
--------------
ಡಕ್ಕೆಯ ಬೊಮ್ಮಣ್ಣ