ಅಥವಾ
(9) (5) (2) (1) (4) (0) (0) (0) (2) (0) (0) (0) (0) (0) ಅಂ (3) ಅಃ (3) (8) (0) (0) (0) (0) (0) (0) (3) (0) (0) (0) (0) (0) (0) (0) (9) (0) (2) (1) (2) (4) (0) (6) (5) (9) (0) (2) (0) (3) (1) (3) (1) (6) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪರ್ಣದ ಮರೆಯ ಫಲದಂತೆ, ಬಣ್ಣದ ಮರೆಯ ಬಂಗಾರದಂತೆ, ತಂತು ಚರ್ಮಂಗಳಲ್ಲಿ ತೋರುವವನ ಗತಿಯಂತೆ. ಕಾಯದಲ್ಲಿ ಸುಳುಹುದೋರುತ್ತ. ಭಾವದಲ್ಲಿ ಪರವನಾಚರಿಸುತ್ತ ಕಾಯದ ಮರೆಯಲ್ಲಿ ತಿರುಗಾಡುವ ಭಾವಶುದ್ಧಾತ್ಮ ಉಭಯಕ್ಕೆ ಕಾಲಾಂತಕ ಬ್ಥೀಮೇಶ್ವರಲಿಂಗವು ಅವರ ಬಾಗಿಲಲ್ಲಿಬಳಸಾಡುತಿಪ್ಪನು.
--------------
ಡಕ್ಕೆಯ ಬೊಮ್ಮಣ್ಣ
ಪೃಥ್ವಿಯೆ ಬೀಜವ ನುಂಗಿದಡುತ್ಪತ್ತಿಯಾಗಬಲ್ಲುದೆ? ಶಿಶುವೆ ಬಸುರಿನಲ್ಲಿ ತಾಯಿ ಅಸುವ ನುಂಗಿದ ಮತ್ತೆ ಶಿಶು ತಾಯ ಉಭಯನಾಮವಡಗಿತ್ತು. ಕ್ರೀಯೆ ತಾಯಿ, ಅರಿವೆ ಶಿಶುವಾಗಿ ಮೂರು ಮೊರದ ಗೋಟಿನಲ್ಲಿ ತಿರುಗಾಡುತ್ತಿದ್ದೇನೆ ಆ ಮರವೆಗೆ ತೆರನ ಹೇಳಾ, ಕಾಲಾಂತಕ ಬ್ಥೀಮೇಶ್ವರಲಿಂಗವೆ.
--------------
ಡಕ್ಕೆಯ ಬೊಮ್ಮಣ್ಣ
ಪಾಪ ಪುಣ್ಯವಿಲ್ಲಾ ಎಂದು ನೀಕರಿಸಿ ನಡೆಯಬಹುದೆ ದಿವರಾತ್ರೆ ಉಳ್ಳನ್ನಕ್ಕ? ಉತ್ತಮ ಕನಿಷ* ಮಧ್ಯಮವೆಂಬುದನರಿವನ್ನಕ್ಕ ಕಾಲ ವೇಳೆಯನರಿದು ಶಿವಲಿಂಗಾರ್ಚನೆಯ ಮಾಡಬೇಕು. ವಾರ ನೇಮ ಸ್ಥಿತಿ ಲಗ್ನಂಗಳಲ್ಲಿ ಹರಶರಣರಿಂದ ಪರಿಹರಿಸಿಕೊಳ್ಳಬೇಕು. ಅದೆಂತೆಂದಡೆ: ತನ್ನ ಒಡಲೆಂಬನ್ನಕ್ಕ, ತನ್ನ ಗುರುವೆಂಬನ್ನಕ್ಕ, ತನ್ನ ಜಂಗಮವೆಂಬನ್ನಕ್ಕ, ಶೀತ ಉಷ್ಣಮೃದು ಕಠಿಣಂಗಳನರಿವನ್ನಕ್ಕ, ಕಾಲಾಂತಕ ಭೀಮೇಶ್ವರಲಿಂಗವೆಂದು ಪೂಜಿಸಬೇಕು.
--------------
ಡಕ್ಕೆಯ ಬೊಮ್ಮಣ್ಣ
ಪಾಷಾಣ ಘಟ್ಟಿಯಾದಲ್ಲಿ ಪ್ರಭೆ ಪ್ರಜ್ವಲಿಸಿತ್ತು. ಪಾಷಾಣದ ಘಟವಡಗಲಾಗಿ ಪ್ರಭೆ ಪ್ರಕಟಿಸುವುದಿಲ್ಲ. ಕ್ರೀ ಭಿನ್ನವಾದಲ್ಲಿ ಜ್ಞಾನಕ್ಕೆ ಸುಳುಹಿಲ್ಲ. ಅದು ಮುಕುರವ ತೊಡೆದ ಮಲದಂತೆ. ಮಲಕ್ಕೆ ಬೆಳಗುಂಟೆ ಮುಕುರಕ್ಕಲ್ಲದೆ ಮುಕುರಕ್ಕೆ ಛಾಯೆ, ಮಲಕ್ಕೆ ತಮ್ಮ; ಉಭಯದೊದಗನರಿದಲ್ಲಿ ಇಷ್ಟ ಪ್ರಾಣ ಮುಕ್ತಿ. ಅಂಗದ ಮೊರದ ಮಾರಿಯ ಹೊತ್ತು ಬಂದವನ ಯುಕ್ತಿ ಕಾಲಾಂತಕ ಭೀಮೇಶ್ವರಲಿಂಗವನರಿವುದಕ್ಕೆ ಇಕ್ಕಿದಗೊತ್ತು.
--------------
ಡಕ್ಕೆಯ ಬೊಮ್ಮಣ್ಣ