ಅಥವಾ
(9) (5) (2) (1) (4) (0) (0) (0) (2) (0) (0) (0) (0) (0) ಅಂ (3) ಅಃ (3) (8) (0) (0) (0) (0) (0) (0) (3) (0) (0) (0) (0) (0) (0) (0) (9) (0) (2) (1) (2) (4) (0) (6) (5) (9) (0) (2) (0) (3) (1) (3) (1) (6) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹಲವು ಸಂಸರ್ಗದಿಂದ ಬಂದ ಜಲ ನಿಲವಾಗಿ ಒಂದು ಠಾವಿನಲ್ಲಿ ನದಿ ನಾಮವಾಯಿತ್ತು. ನಾನಾಭಾವಂಗಳಲ್ಲಿ ನೊಂದು ಬಂದ ಜೀವ ಒಂದು ನೆಲೆಯಲ್ಲಿ ನಿಂದು ಸಂದೇಹವ ಬಿಡಲಾಗಿಪರಮನಾಯಿತ್ತು. ಪ್ರಕಾಶವ ಕಂಡು ಕಾಲಾಂತಕ ಭೀಮೇಶ್ವರಲಿಂಗವೆಂಬ ನಾಮವಾಯಿತ್ತು.
--------------
ಡಕ್ಕೆಯ ಬೊಮ್ಮಣ್ಣ
ಹುಸಿದು ಮಾಡಿದವರುಂಟು. ಅಸಿಯಲ್ಲಿ ದೆಸೆಗೆಡಿಸಿ ಮಾಡಿದವರುಂಟು. ಪಶುಗಳ ಕೊಂದು ಪಿಸಿತವ ಮಾರಿ ಮಾಡಿದವರುಂಟು. ಅದು ತನ್ನಯ ಅಸುವಿಂಗಲ್ಲದೆ, ಅದು ತನ್ನಯ ಶಿಶುವಿಂಗಲ್ಲದೆ, ಅದು ತನ್ನಯ ವಿಷಯದ ಲಂಪಟದ ಶಕ್ತಿಗಲ್ಲದೆ ದೇವಂಗೆಂದು ಕುರಿತು ಆವ ಕಾಯಕವ ಮಾಡಿದಡೂ ಕಾಲಾಂತಕ ಭೀಮೇಶ್ವರಲಿಂಗಕ್ಕೆ ಅರ್ಪಿತವು.
--------------
ಡಕ್ಕೆಯ ಬೊಮ್ಮಣ್ಣ