ಅಥವಾ
(14) (2) (7) (0) (1) (1) (0) (0) (2) (0) (1) (1) (0) (0) ಅಂ (5) ಅಃ (5) (20) (0) (2) (0) (0) (1) (0) (0) (0) (0) (0) (1) (0) (0) (0) (5) (0) (1) (1) (4) (7) (1) (5) (3) (11) (0) (1) (0) (2) (5) (3) (0) (6) (2) (0)

ಅಂ ಪದದಿಂದ ಪ್ರಾರಂಭವಾಗುವ ವಚನಗಳು:

ಅಂಬುಜಾತ ದ್ವಾರವಳಿವೆಳವಾದಡೆ, ನಾದಕ್ಕೆ ಸಿಕ್ಕುಂಟೆ ಅಯ್ಯಾ? ಶರೀರ ಸಂಪದದಲ್ಲಿದ್ದಡೆ, ಅರಿವು ಮಹದಲ್ಲಿ ನಿಂದು, ನೆರೆ ವಸ್ತು ತಾನಾದಲ್ಲಿ, ಬೇರೊಂದೆಡೆಯುಂಟೆ? ಕರಣಂಗಳ ಹಿಂಡಿಗೆ ಉರಿಯೆದ್ದ ನೆಲೆ, ನಷ್ಟವಾಗಿಯಲ್ಲದೆ ಬೇರೊಂದ ಹಿಡಿಯಲಿಲ್ಲ. ಅದು ಘಟಿಸಿ ನಿಂದಲ್ಲಿ, ಐಘಟದೂರ ರಾಮೇಶ್ವರಲಿಂಗ ತಾನೆ.
--------------
ಮೆರೆಮಿಂಡಯ್ಯ
ಅಂಗಲಿಂಗಸಂಬಂಧದಿರವು, ಬೀಜವೊಡೆದು, ಮೊಳೆದೋರುವಂತೆ, ಕುಸುಮ ಬಲಿದು, ದೆಸೆಗೆ ವಾಸನೆ ಪಸರಿಸುವಂತೆ, ಘನಲಿಂಗ ಘಟ, ಕುರುಹಿನಲ್ಲಿ ನಿಜದೋರುತ್ತದೆ. ಐಘಟದೂರ ರಾಮೇಶ್ವರಲಿಂಗ ಮೂರ್ತಿ, ಅಮೂರ್ತಿ ಆಗುತ್ತದೆ.
--------------
ಮೆರೆಮಿಂಡಯ್ಯ
ಅಂಗವ ಕಳೆದು ನಿಂದ ವಿಹಂಗವೈರಿಯಂತೆ, ಅಂಗಕ್ಕೆ ಅಸು ಹೊರತೆಯಾಗಿ ನಿಂದುದು. ಅದರಂಗ ಶುದ್ಧ, ಅದರಂದವಿರಬೇಕು. ತ್ರಿವಿಧವ ಹಿಡಿದ ಚಂದ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಅಂಗದಲ್ಲಿ ಕಟ್ಟಿದ ವಸ್ತ್ರವ ಬಿಟ್ಟು ನೋಡಲಾಗಿ, ಲಿಂಗದ ಕುರುಹು ಇಲ್ಲದಿರೆ, ಇದೇನು ಅಂಗ ನಾಸ್ತಿಯಾದೆ, ಐಘಟವ ಬಿಟ್ಟು ಘಟ ನಾಸ್ತಿಯಾದೆ ಎಂಬುದಕ್ಕೆ ಮೊದಲೇ ಅಂಗ ಬಯಲಾಯಿತ್ತು, [ಐಘಟದೂರ] ರಾಮೇಶ್ವರಲಿಂಗದಲ್ಲಿ.
--------------
ಮೆರೆಮಿಂಡಯ್ಯ
ಅಂಗದಲ್ಲಿದ್ದು ಕೈಗೆ ಬಂದೆ. ಕೈಯಿಂದ ಮನಕ್ಕೇಕೆ ಬಾರೆಯಯ್ಯಾ ? ನಾ ಹಾಡಿ ನೀ ಕೇಳಿ, ಬಾಯಿ ಕಿವಿ ನೋವಿಲ್ಲವೆ ಅಯ್ಯಾ? ನೀ ಸಾವ ದಿನವಿಲ್ಲ, ನಾನುಳಿವ ದಿನವಿಲ್ಲ. ನಿನ್ನಂಗವಡಗದು, ಎನ್ನ ಮನವುಡುಗದು. ಕ್ರೀಯೆಂಬ ಹಾವಸೆಯಲ್ಲಿ ಸಿಕ್ಕಿ, ಮೇಲನರಿಯದೆ ತೊಳಲುತ್ತೈದೇನೆ. ಐಘಟಕ್ಕೆ ಠಾವ ಹೇಳಾ, ಐಘಟದೂರ ರಾಮೇಶ್ವರಲಿಂಗವೆ.
--------------
ಮೆರೆಮಿಂಡಯ್ಯ