ರ ಪದದಿಂದ ಪ್ರಾರಂಭವಾಗುವ ವಚನಗಳು:
ರಾಜರ ಬಾಗಿಲಲ್ಲಿ ನಿಂದು, ಕೂಗಿ ಮೊರೆಯಿಟ್ಟು,ನೀನಾರೊ ಎಂದು ಕೇಳಿದಡೆ, ನಾನೊಡೆಯ ಎಂದಡೆ,ಅಡಗದೇಕೆ ನಿನ್ನ ಬಾಯಿ ?ತಡೆಯಿಸಿಕೊಂಡು ಒಡೆಯತನವುಂಟೆ ನಿನಗಲ್ಲಿ ?ಇಂತೀ ಬಿಡುಹೋರಿಗಳ ಬುಡ ಅಡಗದೇಕೆ,ಐಘಟದೂರ ರಾಮೇಶ್ವರಲಿಂಗವನರಿಯದೆ ?