ಅಥವಾ
(14) (2) (7) (0) (1) (1) (0) (0) (2) (0) (1) (1) (0) (0) ಅಂ (5) ಅಃ (5) (20) (0) (2) (0) (0) (1) (0) (0) (0) (0) (0) (1) (0) (0) (0) (5) (0) (1) (1) (4) (7) (1) (5) (3) (11) (0) (1) (0) (2) (5) (3) (0) (6) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವಾಹನದ ಕೀಲಾಗಿ ತಿರುಗುವ, ಚೂಣಿಯಲ್ಲಿ ಹೋಹ, ವೇಳೆಯ ಕಾವ ಕಾಳುಗುಡಿಹಿಗೇಕೆ ಭಾಳೇಕ್ಷಣನ ಭಾವ ? ಕೀಳುಜೀವವೇಕೆ ಅಡಗದು ? ಮತ್ತೆ ನಾನೆಂಬುದೇಕೆ ಅಡಗದು, ಐಘಟದೂರ ರಾಮೇಶ್ವರಲಿಂಗವನರಿಯದೆ ?
--------------
ಮೆರೆಮಿಂಡಯ್ಯ
ವಿಷದೇಹಿಗೆ ಆಹಾರ ಒದಗದೆ ? ನಸು ಸುಳುಹ ಭುಂಜಿಸುವಂತೆ, ಕ್ರೀ ಶುದ್ಧತೆಯಲ್ಲಿ ಒದಗಲರಿಯದಿರೆ, ಮಾಡುವ ಆಚರಣೆ ಮಾರ್ಗವಾಗಬೇಕು. ಎಯ್ದದಿರೆ ಮಾನ್ಯರ ಕಂಡು ಮನ್ನಣೆಯಾಗಿರಬೇಕು. ಈ ಭಾವವೇನೂ ಇಲ್ಲದಿರೆ, ಐಘಟದೂರ ರಾಮೇಶ್ವರಲಿಂಗಕ್ಕೆ ದೂರ.
--------------
ಮೆರೆಮಿಂಡಯ್ಯ
ವ್ರತಭ್ರಷ್ಟನ, ಗುರುಘಾತಕನ ವಂದಿಸಿ, ನಿಂದಿಸುವವನ ದ್ರವ್ಯದಾಸೆಗೆ ಅವನ ಮಂದಿರವ ಹೊಕ್ಕುಂಡಡೆ, ಜಂಬುಕ ತಿಂದ ಹಡಿಕವ, ಮಿಕ್ಕು ಹುಳಿತವ ತಾ ತಿಂದಂತೆ, ಐಘಟದೂರ ರಾಮೇಶ್ವರಲಿಂಗ.
--------------
ಮೆರೆಮಿಂಡಯ್ಯ
ವಾಯು ಪಟವಾಡುವಲ್ಲಿ, ಹಿಡಿದವನ ಕೈಯಲ್ಲಿ ನೂಲು ಸಿಕ್ಕಿ ಆಡುವಂತೆ, ತನ್ನಯ ಅರಿವು ಕುರುಹಿನಲ್ಲಿ ಸಿಕ್ಕಿ, ಎಡೆ ಬಿಡುವಿಲ್ಲದಾಡಬೇಕು, ಐಘಟದೂರ ರಾಮೇಶ್ವರರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ವಾಯುವೆದ್ದು ಪರ್ಣ ತೃಣ ಘಟವನೆತ್ತುವಂತೆ, ಮನ ನೆನೆದು, ಘಟವ ಕೊಂಡುಹೋದಂತೆ, ಚಿತ್ತ ನೆನೆದು, ಇಷ್ಟದಲ್ಲಿ ನಿಂದು, ಇಷ್ಟವ ಕೊಂಡು ಎಯ್ದಬೇಕು. ಇದು ನಿಶ್ಚಯವೆಂದರಿ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ