ಅಥವಾ
(14) (2) (7) (0) (1) (1) (0) (0) (2) (0) (1) (1) (0) (0) ಅಂ (5) ಅಃ (5) (20) (0) (2) (0) (0) (1) (0) (0) (0) (0) (0) (1) (0) (0) (0) (5) (0) (1) (1) (4) (7) (1) (5) (3) (11) (0) (1) (0) (2) (5) (3) (0) (6) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತಿ ಹೋಯಿತ್ತು, ಗುರುವಿನಲ್ಲಿ ಇದಿರಾದಲ್ಲಿ. ಭಕ್ತಿ ಹೋಯಿತ್ತು, ಜಂಗಮದಲ್ಲಿ ಸಂದೇಹವ ಮಾಡಲಿಕೆ. ಭಕ್ತಿ ಹೋಯಿತ್ತು, ಲಿಂಗದ ಅಂಗದ ಸಂಗವನರಿಯದೆ. ಅರ್ತಿಗಾರಿಕೆಯಲ್ಲಿ ಮಾಡುವ ವ್ಯರ್ಥರ ಭಕ್ತಿ ಇತ್ತಲೆ ಉಳಿಯಿತ್ತು, ಐಘಟದೂರ ರಾಮೇಶ್ವರಲಿಂಗವನರಿಯದೆ.
--------------
ಮೆರೆಮಿಂಡಯ್ಯ
ಭಕ್ತನಾದಲ್ಲಿ ಪಂಕವ ಹೊದ್ದದ ವಾರಿಯಂತಿರಬೇಕು, ಜಲವ ಮುಟ್ಟದ ತೈಲದಂತಿರಬೇಕು, ರಸಬದ್ಧ ಯೋಗದಂತಿರಬೇಕು, ಮರಾಳನ ಮಾಟದಂತೆ, ಸಂಸಾರದ ಒದಗನರಿತು ಅರಿಯದಂತಿರಬೇಕು, ಐಘಟದೂರ ರಾಮೇಶ್ವರಲಿಂಗದಲ್ಲಿ.
--------------
ಮೆರೆಮಿಂಡಯ್ಯ
ಭಾಷೆ ತಪ್ಪಿದ ಬಂಟ, ನಿಹಿತವಿಲ್ಲದವನ ಅರಿವು, ದಾತನರಿದವನ ದೊರೆತನ, ತೂತಕುಂಭದ ಏತದ ಘಾತದಂತೆ, ಐಘಟದೂರ ರಾಮೇಶ್ವರಲಿಂಗ.
--------------
ಮೆರೆಮಿಂಡಯ್ಯ