ಅಥವಾ
(14) (2) (7) (0) (1) (1) (0) (0) (2) (0) (1) (1) (0) (0) ಅಂ (5) ಅಃ (5) (20) (0) (2) (0) (0) (1) (0) (0) (0) (0) (0) (1) (0) (0) (0) (5) (0) (1) (1) (4) (7) (1) (5) (3) (11) (0) (1) (0) (2) (5) (3) (0) (6) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪೃಥ್ವಿ, ಸದ್ಯೋಜಾತನ ಹಂಗು. ಜಲ, ವಾಮದೇವನ ಹಂಗು. ಅಗ್ನಿ, ಅಘೋರನ ಹಂಗು. ವಾಯು, ತತ್ಪುರುಷನ ಹಂಗು. ಆಕಾಶ, ಈಶಾನ್ಯನ ಹಂಗು. ಪಂಚಬ್ರಹ್ಮನ ಮರೆದು, ಓಂಕಾರ ಬ್ರಹ್ಮವನರಿ, ಐಘಟದೂರ ರಾಮೇಶ್ವರಲಿಂಗವ.
--------------
ಮೆರೆಮಿಂಡಯ್ಯ
ಪ್ರಸಾದವ ಕೊಂಡಲ್ಲಿ, ಪ್ರಾಣದಾಸೆಯಿಲ್ಲದಿರಬೇಕು. ಭಕ್ತಿಯ ಹೊತ್ತಲ್ಲಿ, ನಿಜನಿಶ್ಚಯವಿರಬೇಕು. ಅದು ಸಚ್ಚಿತ್ತದ ನಿಚ್ಚಟದಿರವು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಪಾಕವನರಿತು ಮಾಡುವ ಗರತಿಯಂತೆ, ಲಾಗವನರಿತು ಲಂಘಿಸುವ ವನಚರನಂತೆ, ಮೇಘವನರಿತು ಕರೆವ ಭೇಕನಂತೆ, ಉಚಿತಕಾಲಂಗಳಲ್ಲಿ ಮಾಡುವ ಸತ್ಕ್ರೀ, ಲಿಂಗಕ್ಕೆ. ಅರಿದು ಕೂಡುವುದು, ಘನ ವಸ್ತುವಿನಲ್ಲಿ. ಉಭಯಭಾವದಲ್ಲಿ ನಿಂದು ಮತ್ತೆರಡಳಿಯಬೇಕು, ಆ ಕುರುಹಿನಲ್ಲಿ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಪಾದತೀರ್ಥವ ಕೊಂಡಲ್ಲಿ ತೃಷೆಯರತು, ಪ್ರಸಾದವ ಕೊಂಡಲ್ಲಿ ಹಸಿವರತು, ಭೃತ್ಯಭಾವವಾದಲ್ಲಿ ನಾನೆಂಬುದಿಲ್ಲದೆ ಅಹಂಕಾರ ವಿಸರ್ಜನವಾಗಿರಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಪಶು ವಾಹನವ ಕಟ್ಟುವುದಕ್ಕೆ ನೆಟ್ಟಗೊತ್ತಿಲಿಲ್ಲದೆ ಕಟ್ಟಲಿಲ್ಲ. ಅಸು ಆತ್ಮನ ಕಟ್ಟುವ ಗೊತ್ತು, ಇಷ್ಟದ ನಿಷೆ*ಯಿಂದ ಸ್ಥಾಣು ಕಟ್ಟುವಡೆಯಬೇಕು. ಇದು ನಿಶ್ಚಯವೆಂದರಿ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ
--------------
ಮೆರೆಮಿಂಡಯ್ಯ
ಪಂಚೇಂದ್ರಿಯಂಗಳಲ್ಲಿ ಲಿಂಗಮುಖವಾಗಿ ಕೊಳ್ಳಬೇಕೆಂಬರು. ಆ ಇಂದ್ರಿಯಂಗಳು ಲಿಂಗಕ್ಕೆ ಹೊರತೆಯೆ ? ಲಿಂಗದ ಮುಖದಲ್ಲಿ ಇಂದ್ರಿಯಂಗಳು ಬಂದು ನಿಂದು, ತಮ್ಮ ಸಂದೇಹವ ಬಿಡಿಸಿಕೊಂಬವಲ್ಲದೆ, ಇಂದ್ರಿಯಂಗಳ ಮುಖಕ್ಕೆ ಲಿಂಗವಿಲ್ಲ. ಲಿಂಗಮುಖದಲ್ಲಿ ಇಂದ್ರಿಯಂಗಳು ನಿವೃತ್ತಿ, ಐಘಟದೂರ ರಾಮೇಶ್ವರಲಿಂಗದಲ್ಲಿ.
--------------
ಮೆರೆಮಿಂಡಯ್ಯ
ಪಟುಕದ ಘಟದಲ್ಲಿ, ರಜನೀರ ತುಂಬಿದ ಪರಿಸೂತ್ರವುಂಟೆ ? ಉದಕ ಹಿಂಗೆ, ಆ ಘಟ ಮುನ್ನಿನಂದ. ಅದನಳಿದು ಕಾಣು, ಐಘಟದೂರ ರಾಮೇಶ್ವರಲಿಂಗವ.
--------------
ಮೆರೆಮಿಂಡಯ್ಯ