ಅಥವಾ
(14) (2) (7) (0) (1) (1) (0) (0) (2) (0) (1) (1) (0) (0) ಅಂ (5) ಅಃ (5) (20) (0) (2) (0) (0) (1) (0) (0) (0) (0) (0) (1) (0) (0) (0) (5) (0) (1) (1) (4) (7) (1) (5) (3) (11) (0) (1) (0) (2) (5) (3) (0) (6) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತನ್ನ ತಾನರಿದಡೆ, ತನ್ನರಿವೆ ಗುರು, ತಾನೆ ಲಿಂಗ, ತನ್ನ ನಿಷೆ*ಯೇ ಜಂಗಮ. ಇಂತೀ ತ್ರಿವಿಧವು ಒಂದಾದಡೆ, [ಐಘಟದೂರ] ರಾಮೇಶ್ವರಲಿಂಗವು ತಾನೆ.
--------------
ಮೆರೆಮಿಂಡಯ್ಯ
ತನ್ನ ಕಾಯ್ವ ಸೆಡೆಯವಲ್ಲದೆ, ಸೆಡೆಯವ ಕಾಯ್ವ ಅಂಗವುಂಟೆ ಅಯ್ಯಾ ? ವಸ್ತುಮುಖದಿಂದ ಎಲ್ಲವನರಿಯಬೇಕಲ್ಲದೆ, ವಸ್ತು ತನ್ನ ಕಟ್ಟಿಗೆ ನಿಶ್ಚಯವೆ ? ಅದು ತನ್ನ ಉಭಯದ ಕೇಡು, ಐಘಟದೂರ ರಾಮೇಶ್ವರಲಿಂಗಕ್ಕೆ.
--------------
ಮೆರೆಮಿಂಡಯ್ಯ
ತಾ ಮೀವನ್ನಕ್ಕ ಲಿಂಗಕ್ಕೆ ಮಜ್ಜನ. ತಾನುಂಬನ್ನಕ್ಕ ಲಿಂಗಕ್ಕೆ ನೈವೇದ್ಯ. ತನ್ನ ತನು ಭೋಗವ ಮಾಡುವನ್ನಕ್ಕ ಲಿಂಗಾರ್ಪಿತವಾಗಬೇಕು. ಇದು ಸದ್ಭಕ್ತಮಾರ್ಗದಿರವು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ತನ್ನವರನ್ಯರಹರು, ಹೆಣ್ಣು ಹೊನ್ನು ಮಣ್ಣು ಹಿಡಿದು ಹೋರಲಾಗಿ. ಆ ಮೂರ ಬಿಟ್ಟಡೆ ಅನ್ಯರು ತನ್ನವರಹರು. ಅರಿದವಂಗೂ ಸರಿ, ಜಗದ ಒಡಲಾದವಂಗೂ ಸರಿ ಆಸೆವೊಂದೇ ಭೇದ. ಉಭಯಕ್ಕೆ ಹೊರಗಾಗು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ತಡೆವನ ಬಾಗಿಲಲ್ಲಿ ನಿಂದು, ಕರೆಯಿಸಿಕೊಂಡು ಹೋದೆಹೆನೆಂಬ ಒಡೆಯತನವೇಕೆ ? ಇವೆಲ್ಲವನರಿದು ಬಿಟ್ಟು, ತಿರುಗಿ ಅಲ್ಲಿಗೆ ಬಹ ಸ್ಥಾಣುವಿನ ಮರೆಯ ಖುಲ್ಲನ ಹಸುವಿನಂತಾಯಿತ್ತು, ನಿಮ್ಮ ಅರಿವು, ಐಘಟದೂರ ರಾಮೇಶ್ವರಲಿಂಗವನರಿಯದೆ.
--------------
ಮೆರೆಮಿಂಡಯ್ಯ