ಅಥವಾ
(14) (2) (7) (0) (1) (1) (0) (0) (2) (0) (1) (1) (0) (0) ಅಂ (5) ಅಃ (5) (20) (0) (2) (0) (0) (1) (0) (0) (0) (0) (0) (1) (0) (0) (0) (5) (0) (1) (1) (4) (7) (1) (5) (3) (11) (0) (1) (0) (2) (5) (3) (0) (6) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶರಣಸತಿ ಲಿಂಗಪತಿಯೆಂದು ಆಚರಿಸುವ ಮಾಹೇಶ್ವರರ ಲಿಂಗ ಓಸರಿಸಿ ಹೋದಲ್ಲಿ, ಮಾಹೇಶ್ವರರ ಮಧ್ಯದಲ್ಲಿ ಮುಹೂರ್ತವ ಮಾಡಿಕೊಂಡು ಐಕ್ಯವಾಗುವ ಸಮಯದಲ್ಲಿ, ಆ ಲಿಂಗ ಸಿಕ್ಕಿದಡೆ, ತೆತ್ತಿಗರಾದವರು ಧರಿಸುವುದು. ಇದಲ್ಲದೆ ಸಂದೇಹವ ಮಾಡಿದಡೆ ನಾಯಕ ನರಕ. ನೀವೇ ಬಲ್ಲಿರಯ್ಯಾ, ಐಘಟದೂರ ರಾಮೇಶ್ವರ.
--------------
ಮೆರೆಮಿಂಡಯ್ಯ
ಶರೀರ ಬೆಳೆದು, ಪ್ರಳಯಕ್ಕೊಳಗು. ಬುದ್ಧಿ ಬೆಳೆದು, ಸುಖಕ್ಕೊಳಗು. ಸುಖ ಬೆಳೆದು, ವಿಕಾರಕ್ಕೊಳಗು. ವಿಕಾರ, ಸಕಲಮರಣಕ್ಕೆ ಒಳಗಾಯಿತ್ತು. ಇಂತಿವಕ್ಕೆ ಹೊರಗಾಗು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಶಬ್ದಶಾಸ್ತ್ರಂಗಳಲ್ಲಿ ತಿಳಿದು, ನ್ಯೂನ್ಯಾದಿಗಳಿಲ್ಲದೆ ನುಡಿದು, ತ್ರಿವಿಧದೊಳಗೆ ಹುದುಗಿ, ಭವಪಾಶದ ಪಾಕುಳದಲ್ಲಿ ಬಿದ್ದು, ನಿಚ್ಚಟಭಕ್ತನೆಂದಡೆ ಒಪ್ಪುವನೆ, ಐಘಟದೂರ ರಾಮೇಶ್ವರಲಿಂಗ ?
--------------
ಮೆರೆಮಿಂಡಯ್ಯ