ಹ ಪದದಿಂದ ಪ್ರಾರಂಭವಾಗುವ ವಚನಗಳು:
ಹೆರುವ ಹೆಂಗೂಸು, ಕೂಸು ಸಿಕ್ಕಿ ತನ್ನ ಉಡಿಯ ತೋರುವಂತೆ,ಅದು ಕೂಸಿನ ಆಸೆಯೋ ? ತನ್ನ ಅಪಮಾನದಾಸೆಯೋ ?ತನ್ನ ಅಸುವಿನ ಆಸೆಯೋ ?ಮಾತ ಕಲಿತು, ವೇಷವ ತೋರಿ, ಘಾತುಕತನದಲ್ಲಿ ಉಂಬಪಾಶಧಾರಿಗಳಿಗೇಕೆ ನಿರ್ಜಾತನ ಮಾತು ?ಅದು ನೀತಿಯಲ್ಲ, ಐಘಟದೂರ ರಾಮೇಶ್ವರಲಿಂಗ ಅವರ ಬಲ್ಲನಾಗಿ
ಹುಡಿ ಹತ್ತದ ಗಾಳಿಯಂತೆ,ವಾ[ಸ] ಹತ್ತದ ಸರ್ವಸಾರ ಸಂಬಂಧಿಯಂತೆ,ಭಸ್ಮದಲ್ಲಿದ್ದ ಸುಘಟಿಯ ಬೀಜದಂತೆ,ಘೃತಕಿಸಲಯದಂತೆ ಏತರಲ್ಲಿಯೂ ಬಂಧವಿಲ್ಲದೆ,ಕಟಿತ್ವ ವಕ್ಷದಲ್ಲಿದ್ದ ಮಧುಪಾನದಂತಿರಬೇಕು ಐಘಟದೂರರಾಮೇಶ್ವರಲಿಂಗವನರಿವುದಕ್ಕೆ.