ಅಥವಾ
(14) (2) (7) (0) (1) (1) (0) (0) (2) (0) (1) (1) (0) (0) ಅಂ (5) ಅಃ (5) (20) (0) (2) (0) (0) (1) (0) (0) (0) (0) (0) (1) (0) (0) (0) (5) (0) (1) (1) (4) (7) (1) (5) (3) (11) (0) (1) (0) (2) (5) (3) (0) (6) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸ್ಥಾಣುನಿನ ರಜ್ಜು, ಮೀರಿ ಎಯ್ದದೆ ಆಡಿ, ತನ್ನಯ ಸ್ಥಾನಕ್ಕೆ ಬಹಂತೆ, ವಸ್ತುವಿನ ಗೊತ್ತಿನಿಂದ ಕಟ್ಟು ಮೀರಲಿಲ್ಲವಾಗಿ, ಐಘಟದೂರ ರಾಮೇಶ್ವರಲಿಂಗದಲ್ಲಿಗೆ ಎಯ್ದುವ ತೆರ.
--------------
ಮೆರೆಮಿಂಡಯ್ಯ
ಸರ್ವವೆಲ್ಲವೂ ವಸ್ತುವಿನ ಅದ್ಥೀನವಾದಲ್ಲಿ, ಬೇರೊಂದು ತಟ್ಟುವ ಮುಟ್ಟುವ ಠಾವುಂಟೆ ? ಸರ್ವಭಾವಜ್ಞಗೆ ಬ್ಥಿನ್ನಭಾವವಿಲ್ಲ, ಐಘಟದೂರ ರಾಮೇಶ್ವರಲಿಂಗದಲ್ಲಿ.
--------------
ಮೆರೆಮಿಂಡಯ್ಯ
ಸ್ವಪ್ನದ ಭಾಷೆ, ಮತ್ರ್ಯರ ಮುಟ್ಟದ ಭಕ್ತಿ ಚಿತ್ತವನರಿಯದೆ ಕಾಡುವನ ಯುಕ್ತಿ, ಮೃತ್ತಿಕೆಯ ಬೊಂಬೆಯು ಅಪ್ಪುವಿನ ಮಂದಿರಕ್ಕೆ ಹೋದಂತಾಯಿತ್ತು. ಐಘಟದೂರ ರಾಮೇಶ್ವರಲಿಂಗವನರಿ.
--------------
ಮೆರೆಮಿಂಡಯ್ಯ
ಸತ್ಕ್ರೀಯೆಂಬುದೆ ಜ್ಞಾನ, ಜ್ಞಾನದೊಡಲೆ ಕ್ರೀ. ಸುಗಂಧವನಿರಿಸಿಕೊಂಡಿಪ್ಪ ಕರಂಡದಂತೆ ಆ ಒಡಲಿಲ್ಲದೆ ಗಂಧವಿರಬಲ್ಲುದೆ ? ಐಘಟದೂರ ರಾಮೇಶ್ವರಲಿಂಗ ಕುರುಹಾಗಿ, ಅರಿವ ಇರಿಸಿಕೊಂಡಿತ್ತು.
--------------
ಮೆರೆಮಿಂಡಯ್ಯ
ಸ್ವಪ್ನದಲ್ಲಿ ಮರೆದು, ಸಕಲವ ಕಂಡು ಅರಿದು, ಹೇಳುವುದು, ಆತ್ಮ ಭಿನ್ನವೋ, ಘಟ ಭಿನ್ನವೋ ? ಇಷ್ಟಲಿಂಗವೆಂದು, ಪ್ರಾಣಲಿಂಗವೆಂದು ಕಟ್ಟಿ ಹೋರುವಾಗ, ತಾನು ದೃಷ್ಟದ ಅಂಗವ ಹೊತ್ತು ಹೋರುತ್ತಿದ್ದು, ಮತ್ತೆ ಕ್ರೀಯಲ್ಲಾವೆಂಬುದಕ್ಕೆ ತೆರಪಾವುದು ? ಅಲ್ಲ, ಅಹುದೆಂದು ಗೆಲ್ಲ ಸೋಲಕ್ಕೆ ಹೋರುವುದು, ಕ್ರೀಯೋ, ನಿಃಕ್ರೀಯೋ ? ಮಂದಿಯ ನಡುವೆ ನಿಂದಿರ್ದ ಉಡುವಿನಂತೆ, ಕಣ್ಣು ಮುಚ್ಚಿ ಗೆದ್ದೆನೆಂದು ಬಡಿಯಿಸಿಕೊಂಬ ತೆರದ ಮಾತಿನ ಮಾಲೆ ಬೇಡ. ನೂಲ ಹಿಡಿದು ಬೆಟ್ಟವನೇರುವಂತೆ, [ವಿ]ಧವೆ ಬಾಲನ ಹಿಡಿದು ಬದುಕುವಂತೆ, ಕೂಷ್ಮಾಂಡವ ಹಿಡಿದು ಎಯ್ದುವ ಜಲದಲ್ಲಿ ಚರಿಸುವನಂತೆ, ಕಡೆಯಾಗಬೇಡ, ನೆರೆ ನಂಬು. ಮಾಡುವ ಕ್ರೀಯಲ್ಲಿ ಅರಿವುಹೀನವಾಗಬೇಡ. ಮಡುವಿನ ನಡುವೆ ಕಟ್ಟಿದ ಹಾಲದ ಹಾದಿಯಂತೆ, ಅಡಿ ತೊಲಗಿದಡೆ ಕುಡಿವಿರಿ ನೀರ. ಬಿಡದಿರು ಮಾಡುವ ಸತ್ಕ್ರೀಯ. ಇದನರಿದು ಒಡಗೂಡು, ಐಘಟದೂರ ರಾಮೇಶ್ವರಲಿಂಗವ, ಉಭಯ ಭಾವವಳಿದು.
--------------
ಮೆರೆಮಿಂಡಯ್ಯ
ಸ್ಥೂಲದಿಂದ ಕಾಬುದು, ಸೂಕ್ಷ್ಮದಿಂದರಿವುದು, ಕಾರಣದಲ್ಲಿ ಮಾಡುವುದು. ತ್ರಿವಿಧದ ಭೇದವ ನಿಃಕರಿಸಿ, ತ್ರಿವಿಧ ಭೇದದಿಂದ ಕಾಣು. ತ್ರಿವಿಧದ ಭೇದವ ಕೂಡಿ ಮರೆ. ಐಘಟದೂರ ರಾಮೇಶ್ವರಲಿಂಗವ ಏನೂ ಎನ್ನದಿರು.
--------------
ಮೆರೆಮಿಂಡಯ್ಯ