ಅಥವಾ
(50) (19) (7) (2) (6) (1) (0) (0) (21) (1) (0) (4) (0) (0) ಅಂ (10) ಅಃ (10) (23) (1) (25) (1) (0) (1) (0) (9) (0) (0) (0) (0) (0) (0) (0) (16) (0) (10) (1) (21) (18) (0) (20) (9) (14) (0) (2) (0) (7) (11) (13) (0) (15) (18) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತ ಮಾಹೇಶ್ವರರ ಇಷ್ಟಲಿಂಗವು, ಶಕ್ತಿಸಂಪುಟದಿಂದ ಉತ್ಕøಷ್ಟವಾದರೆ, ಕಾಯವಳಿದೆನೆಂಬ ಕರ್ಮವ ನೋಡಾ. ಕಾಯವಳಿದು ಕರ್ಮಕ್ಕೆ ಗುರಿಯಾಗದೆ ಮುನ್ನಿನಂತೆ ಪೂಜಿಸುವ ಮುಕ್ತರ ತೋರಿಸಯ್ಯಾ. ಅದೆಂತೆಂದಡೆ: ಅನಾದಿಪ್ರಣಮ, ಆದಿಪ್ರಣಮ, ಅಂತ್ಯಪ್ರಣಮ, ನಾದಪ್ರಣಮ, ಅನಾದ ಪ್ರಣಮವೆಂಬ ಪಂಚಪ್ರಣಮಂಗಳ ಪಂಚಸ್ಥಾನದಲ್ಲಿ ಪ್ರತಿಷ್ಠಿಸಿ, ನಾ ನೀನೆಂಬ ಆನಂದವ ಆರುಹಿಸಿಕೊಟ್ಟನಯ್ಯಾ ಶ್ರೀಗುರು. ಇಂತೀ ಭೇದಾದಿಭೇದದ ಆದಿಯನರಿಯದೆ, ಕಾಯವಳಿದೆಹೆನೆಂಬ ಕರ್ಮಭಾಂಡಿಗಳ ಮೆಚ್ಚುವನೆ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಭಕ್ತನಾದಡೆ ತ್ರಿವಿಧದ ಮೇಲಣಾಸೆಯಳಿದಿರಬೇಕು. ವಿರಕ್ತನಾದಡೆ ಧರಿತ್ರಿಯ ವರ್ಗದವರಿಗೊಳಗಾಗಿರದಿರಬೇಕು. ಜಂಗಮವಾದಡೆ ಅನ್ಯರ ಬಲೆಗೆ ಸಿಲುಕದಿರಬೇಕು. ಗುರುವಾದಡೆ ಲೇಸ ಕಂಡು ಚರಿಸದಿರಬೇಕು. ಲಿಂಗವಾದಡೆ ತ್ರಿಶಕ್ತಿಯಿಚ್ಫೆಯಿಲ್ಲದಿರಬೇಕು. ಕಲಿದೇವಾ, ನಿಮ್ಮ ಶರಣ [ಧರೆಯ] ಪಾವನವ ಮಾಡಿದ ಪರಿಣಾಮಕ್ಕೆ ನಮೋ ನಮೋ ಎನುತಿರ್ದೆನು.
--------------
ಮಡಿವಾಳ ಮಾಚಿದೇವ
ಭಾವದಿಂದಲಾದ ಶೇಷವ ಕ್ರೀಗರ್ಪಿಸುವೆ. ಕ್ರೀಯಿಂದಲಾದ ಶೇಷವ ನಿಃಕ್ರೀಗರ್ಪಿಸುವೆ. ನಿಃಕ್ರೀಯಿಂದಲಾದ ಶೇಷವ ಭಕ್ತಿಗರ್ಪಿಸುವೆ. ಭಕ್ತಿಯಿಂದಲಾದ ಶೇಷವ ಜಂಗಮಕ್ಕರ್ಪಿಸುವೆ. ಜಂಗಮದಿಂದಾದ ಶೇಷವ ಪ್ರಸಾದಕ್ಕರ್ಪಿಸುವೆ. ಪ್ರಸಾದದಿಂದಾದ ಶೇಷವ ಲಿಂಗಕ್ಕರ್ಪಿಸುವೆ. ಲಿಂಗದಿಂದಾದ ಜ್ಞಾನ, ಜ್ಞಾನದಿಂದ ತೃಪ್ತನಾದೆ ಕಾಣಾ, ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಭಕ್ತ ಭಕ್ತರೆಂದು ನುಡಿವಿರಿ, ಭಕ್ತರೆಂತಾದಿರೋ ನೀವು ? ನಿತ್ಯ ನಿರಂಜನಲಿಂಗ ಹಸ್ತದೊಳಗಿದ್ದು, ಪೃಥ್ವಿಯ ಮೇಲಣ ಪ್ರತಿಷೆ*ಗೆರಗುವ ವ್ಯರ್ಥರನೇನೆಂಬೆನಯ್ಯಾ, ಕಲಿದೇವಯ್ಯ ?
--------------
ಮಡಿವಾಳ ಮಾಚಿದೇವ
ಭವಬಂಧನಂಗಳ ಮೀರಿ ನಿಂದ ಭಕ್ತಮಾಹೇಶ್ವರರು, ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಂಗಳ ಹೊದ್ದದೆ, ಕ್ಷಮೆ, ದಯೆ, ಶಾಂತಿ, ಸೈರಣೆ, ಸತ್ಯನಿತ್ಯವೆಂಬ ಷಡ್ಗುಣಸಂಪದಂಗಳ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ನಿರಾವಯದಾಚಾರವಿಡಿದಾಚರಿಸುವರೆ ನಿಜಮುಕ್ತರು ನೋಡಾ ಅಪ್ರಮಾಣ ಅಗಮ್ಯ ಅಗೋಚರ ನಿಷ್ಕಲಂಕ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಭಕ್ತವತ್ಸಲ ಕಲ್ಲಿದೇವನ ಶರಣರು ಮಹಾಪುರುಷರು. ಕಾಮಕ್ರೋಧಾದಿಗಳಂ ನಂದಿಸುವರು. ಮದ ಮತ್ಸರಾದಿಗಳ ಸಿಂಹಾಸನವ ಮಾಡಿಕೊಂಬರು. ಆಶೆಯಾಹಾರಕ್ಕೆ ಕೈಯಾನರು. ದೇಶವೆನ್ನರು, ದೇಶಾಂತರವ ಮಾಡುವರು, ಕಲಿದೇವಾ ನಿಮ್ಮ ಶರಣರು.
--------------
ಮಡಿವಾಳ ಮಾಚಿದೇವ
ಭಾವದಿಂದರ್ಪಿತವೆಂಬ ವ್ರತಗೇಡಿಗಳ ಮಾತ ಕೇಳಲಾಗದು. ಅಂತರಂಗದಿಂದರ್ಪಿತವೆಂಬನಾಚರಿಗಳ ಮಾತ ಕೇಳಲಾಗದು. ದೂರದಿಂದರ್ಪಿತವೆಂಬ ದುರಾಚಾರಿಗಳ ಮಾತ ಕೇಳಲಾಗದು. ಕಾಯದ ಮೇಲಣ ಲಿಂಗದಲ್ಲಿ, ಭಾವಶುದ್ಧಿಯಿಂದೊಡಂಬಡಿಸಿ ಕೊಟ್ಟು ಕೊಳಬಲ್ಲನೆ ಬಲ್ಲ. ಸಕಲಪದಾರ್ಥಂಗಳ ರೂಪ ತಂದು, ಸಾಕಾರದಲ್ಲಿ ಅರ್ಪಿಸದೆ ಕೊಂಡಡೆ, ನಾಯಡಗು ನರಮಾಂಸವಯ್ಯಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಭಾವಮೂರ್ತಿಯಾಗಬೇಕು ಆದಿಲಿಂಗಕ್ಕೆ. ಅರಿವುಮೂರ್ತಿಯಾಗಬೇಕು ದಾಸೋಹಕ್ಕೆ. ಹರಿವುಮೂರ್ತಿಯಾಗಬೇಕು ಜಂಗಮಲಿಂಗಕ್ಕೆ. ಭಕ್ತಿಮೂರ್ತಿಯಾಗಬೇಕು ಪ್ರಸಾದಕ್ಕೆ. ನಿರ್ಭಾವಮೂರ್ತಿಯಾಗಬೇಕು ಅನುಭಾವಕ್ಕೆ. ಜ್ಞಾನಮೂರ್ತಿಯಾಗಬೇಕು ಸ್ವಾನುಭಾವಕ್ಕೆ. ಇಂತೀ ಪ್ರಜ್ವಲಿತವಾದ ತನುವಿನ ಸಂಗದಲಿರ್ಪ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಭಕ್ತರ ಭಾವವ ನೋಡಲೆಂದು ಸಾಕಾರವಾದ ಲಿಂಗವು ನಿರಾಕಾರವಾದುದಿಲ್ಲವೆ ? ಭಕ್ತರ ಭಾವವ ನೋಡಲೆಂದು ಕೆಂಬಾವಿಯ ಭೋಗಣ್ಣಗಳೊಂದಿಗೆ ಹೋದುದಿಲ್ಲವೆ ? ಭಕ್ತರ ಭಾವವ ನೋಡಲೆಂದು ಇಷ್ಟಲಿಂಗವು ಅಪ್ಪುವಿನಲ್ಲಿ ಅಡಗಿದುದಿಲ್ಲವೆ ? ಭಕ್ತರ ಭಾವವ ನೋಡಲೆಂದು ಇಷ್ಟಲಿಂಗವು ಅಗ್ನಿಯಲ್ಲಿ ಅಳಿದುದಿಲ್ಲವೆ ? ಭಕ್ತರ ಭಾವವ ನೋಡಲೆಂದು ಇಷ್ಟಲಿಂಗವು ಶಕ್ತಿಸಂಪುಟದಿಂದ ಉತ್ಕøಷ್ಟವಾದುದಿಲ್ಲವೆ ? ಭಕ್ತರ ಭಾವವ ನೋಡಲೆಂದು ಇಷ್ಟಲಿಂಗವು ಪೃಥ್ವಿಯಲ್ಲಿ ಸ್ಥಾಪ್ಯವಾದಡೇನು ? ಎತ್ತಿ ಧರಿಸೂದೆ ಭಕ್ತ ವಿರಕ್ತರಿಗೆ, ಮುಕ್ತಿಯ ಪಥವಯ್ಯ. ಅದೆಂತೆಂದಡೆ: ಉಂಬಲ್ಲಿ ಉಡುವಲ್ಲಿ ಕೊಂಬಲ್ಲಿ ಕೊಡುವಲ್ಲಿ, ಅರಿದೆ ಮರದೆನೆಂಬ ನಾನಾ ಸಂದೇಹದ ಕೀಲ ಕಳೆದು, ಇಷ್ಟಲಿಂಗದ ಪೂಜೆ, ಚರಲಿಂಗದ ದಾಸೋಹವ ಮಾಡಬಲ್ಲಡೆ, ಕಲಿದೇವರದೇವನ ನಿಜವ ಕಾಣಬಹುದು ಕಾಣಾ, ಚಂದಯ್ಯ.
--------------
ಮಡಿವಾಳ ಮಾಚಿದೇವ