ಅಥವಾ
(50) (19) (7) (2) (6) (1) (0) (0) (21) (1) (0) (4) (0) (0) ಅಂ (10) ಅಃ (10) (23) (1) (25) (1) (0) (1) (0) (9) (0) (0) (0) (0) (0) (0) (0) (16) (0) (10) (1) (21) (18) (0) (20) (9) (14) (0) (2) (0) (7) (11) (13) (0) (15) (18) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲೋಕಾದಿಲೋಕ ಹದಿನಾಲ್ಕು ಲೋಕಕ್ಕೆ ಕರ್ತ, ಒಬ್ಬನೇ ಶಿವನೆಂದು ಶ್ರುತಿಶಾಸ್ತ್ರಗಳು ಸಾರುತ್ತಿವೆ. ಗುರುದೀಕ್ಷೆಯ ಕೊಟ್ಟ ಮಾರ್ಗವ ಮೀರಿದವಂಗೆ ಸೂಕರಜನ್ಮ ತಪ್ಪದೆಂದು ಶ್ರುತಿ ಸಾಕ್ಷಿಯ ಹೊಗಳುತ್ತಿವೆ. ಹರನು ಹರಿಗೆ ಸರಿಯೆಂದಾರಾಧಿಸುವ ದುರಾಚಾರಿಗಳ ನುಡಿಯ ಕೇಳಲಾಗದೆಂದ, ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಲಿಂಗದ ನಿಧಿಯೆ ಬಸವಾ. ಜಂಗಮದ ವಾರಿಧಿಯೆ ಬಸವಾ. ಪ್ರಸಾದದ ತವನಿಧಿಯೆ ಬಸವಾ. ಅನುಭಾವದ ಮೇರುವೆ ಬಸವಾ. ಮಹವನೊಡಗೂಡಿದ ತನು ಬಸವಣ್ಣನೊ, ಕಲಿದೇವನೋ ?
--------------
ಮಡಿವಾಳ ಮಾಚಿದೇವ
ಲಿಂಗೈಕ್ಯ ಲಿಂಗವಂತ ಲಿಂಗಪ್ರಾಣಿ ಪ್ರಾಣಲಿಂಗಿಗಳೆಂದೆನಬಹುದು. ಉದಯಕಾಲ ಮಧ್ಯಾಹ್ನ ಕಾಲ ವಿಚಿತ್ರಕಾಲ ತ್ರಿಕಾಲ ಲಿಂಗಾರ್ಚಕರೆಂದೆನಬಹುದು, ಎನಬಹುದು. ಹೊನ್ನು ಹೆಣ್ಣು ಮಣ್ಣು ತ್ರಿವಿಧವ ತೋರಿದ ನಿಷ್ಪೃಹರೆಂದೆನಬುಹುದು, ಎನಬಹುದು. ಧಾರಣೆ ಪಾರಣೆ ಒಡಲ ದಂಡಣೆ ಕರಣ ದಂಡಣೆ ಉಳ್ಳವರೆಂದೆನಬಹುದು. ಶೀಲವಂತರು ಸಂಬಂಧಿಗಳು ಒರತೆಯಗ್ಘ[ವ]ಣಿಯ ನೇಮಿಗಳೆಂದೆನಬುಹು, ಎನಬಹುದು. ನೇಮ ವ್ರತ ಪಾಕದ್ರವ್ಯವ ಒಲ್ಲೆವೆಂದೆನಬಹುದು, ಎನಬಹುದು. ಶುದ್ಧಶೈವ ಪೂರ್ವಶೈವ ವೀರಶೈವವೆಂದೆನಬುಹುದು, ಎನಬಹುದು. ಸರವೇದಿಗಳು ಶಬ್ದವೇದಿಗಳು ಮಹಾನುಭಾವಿಗಳೆಂದೆನಬಹುದು, ಎನಬಹುದು. ಇಂತಿವರೆಲ್ಲರೂ ಶಿವಪಥದೊಳಗೆ ಮಾಡುತ್ತ ಆಡುತ್ತ ಇದ್ದರಲ್ಲದೆ ಒಂದರ ಕುಳವು ತಿಳಿಯದು ನೋಡಾ. ಆ ಒಂದು ದಾಸೋಹದಲ್ಲಿ ಬಸವಣ್ಣ ಸ್ವತಂತ್ರ. ಆ ಲಿಂಗವು ಬಸವಣ್ಣನ ಒಡನೊಡನೆ ಆಡುತಿರ್ದನು ನೋಡಾ.
--------------
ಮಡಿವಾಳ ಮಾಚಿದೇವ
ಲಿಂಗ ಬೆರಗಿನ ಪರಮಸುಖಿಯನೇನೆಂಬೆನಯ್ಯಾ ! ಕಂಗಳ ಕಳೆಯ ಸಂಗವನಗಲಿದ, ಅಂಗವಿರಹಿತನನೇಂದುಪಮಿಸುವೆ ! ನೋಟದಲ್ಲಿ ಅನಿಮಿಷ, ಕೂಟದಲ್ಲಿ ನಿಸ್ಸಂಗಿ,
--------------
ಮಡಿವಾಳ ಮಾಚಿದೇವ
ಲಿಂಗಾಂಗಿಗಳೆಂದು ಒಪ್ಪವಿಟ್ಟು ನುಡಿದ ಅಣ್ಣಗಳಿರಾ ನೀವು ಲಿಂಗಾಂಗಿಗಳೆಂತಾದಿರಿ ಹೇಳಿರಣ್ಣ. ಅರಿಯದಿರ್ದಡೆ ಕೇಳಿರಣ್ಣ, ಅಂಗ ಲಿಂಗವಾದ ಭೇದವ. ಪರದೈವವ ನೆನೆಯದೆ, ಪರಸ್ತ್ರೀಯರ ಮುಟ್ಟದೆ, ಪರದ್ರವ್ಯವ ಅಪಹರಿಸದೆ, ಪರನಿಂದ್ಯವ ಮಾಡದೆ, ಪರಹಿಂಸೆಗೊಡಂಬಡದೆ, ಪರಪಾಕವ ಮುಟ್ಟದೆ, ಪರವಾದವ ಕಲ್ಪಿಸದೆ, ಪರಾತ್ಪರವಾದ ಸತ್ಯಶುದ್ಧ ಕಾಯಕವ ಮಾಡಿ, ನಿರ್ವಂಚಕತ್ವದಿಂದ ಗುರುಲಿಂಗಜಂಗಮಕ್ಕೆ ಸಮರ್ಪಿಸಿ, ಅವರಿಗೆ ಅತಿಭೃತ್ಯರಾಗಿ ಆಚರಿಸುವರೆ ಲಿಂಗಾಂಗಿಗಳು ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಲೋಕಾಚಾರಿಯಲ್ಲದ ಶರಣ, ಸ್ತುತಿನಿಂದೆಯಿಲ್ಲದ ಶರಣ. ಶತ್ರುಮಿತ್ರರಿಲ್ಲದ ಶರಣ, ಸಂಪತ್ತು ಆಪತ್ತುಗಳಿಲ್ಲದ ಶರಣ. ಸುಳಿದು ಸೂತಕಿಯಲ್ಲ, ನಿಂದು ಬದ್ಧನಲ್ಲ, ಕಲಿದೇವಯ್ಯಾ, ನಿಮ್ಮ ಶರಣ ಪ್ರಭುದೇವರು.
--------------
ಮಡಿವಾಳ ಮಾಚಿದೇವ
ಲಿಂಗವೇದಿ ಬಂದೆನ್ನಂಗಣವ ಮೆಟ್ಟಿದಡೆ ಹೆಂಡತಿ ಗಂಡನನರಿವಂತೆ ಅರಿವೆ. ಅವರ ಬೆನ್ನಲ್ಲಿ ಬಂದ ಮಂದಿ ಹಲವಾದಡೆ ಅದಕ್ಕೆ ಪ್ರೀತಿ ಪ್ರೇಮವ ಮಾಡಿ, ಇಚ್ಫೆಯಲ್ಲಿ ಗಂಡನ ನೆರೆವಂತೆ ನೆರೆವೆ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ