ಅಥವಾ
(50) (19) (7) (2) (6) (1) (0) (0) (21) (1) (0) (4) (0) (0) ಅಂ (10) ಅಃ (10) (23) (1) (25) (1) (0) (1) (0) (9) (0) (0) (0) (0) (0) (0) (0) (16) (0) (10) (1) (21) (18) (0) (20) (9) (14) (0) (2) (0) (7) (11) (13) (0) (15) (18) (0)

ಪದದಿಂದ ಪ್ರಾರಂಭವಾಗುವ ವಚನಗಳು:

ರೂಪನರ್ಪಿತವ ಮಾಡುವರು ತಮತಮಗೆ, ರುಚಿಯನರ್ಪಿತವ ಮಾಡುವ ಭೇದವನರಿಯರು ನೋಡಾ. ಅವರನೆಂತು ಭಕ್ತನೆಂಬೆ ? ಅವರನೆಂತು ಪ್ರಸಾದಿಗಳೆಂಬೆ ? ರೂಪನು ಲಿಂಗಕ್ಕೆ ಕೊಟ್ಟು, ರುಚಿಯ ತಾವು ಭುಂಜಿಸುವ ವ್ರತಗೇಡಿಗಳಿಗೆ ಪ್ರಸಾದವುಂಟೆ ? ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ರಂಗದಕ್ಕಿಯ ಹೊಯಿಯೆಂದು ನಿಂದ ನಾಲ್ವರಿಗೆ, ತಂದಲ್ಲಿ ಶ್ರೀಕಳಸವ ಹಿಡಿಸಿ, ಭಕ್ತಿಗೆ ಚೆಂದವಾಯಿತ್ತು. ಮುಂದಲ್ಲಿ ಏನ ಬೇಡಲುಂಟು ? ಬೆಂದ ಮನೆಯಲ್ಲಿ ಹುರಿಗಾವಲಿಯಾದಡೆಯೂ ಬರಲಿಯೆಂದು, ಶ್ರೀಕಳಸಕ್ಕೆ ದಂಡವನಾಗಳೆ ಕೊಡುವರೆ, ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ