ಅಥವಾ
(36) (23) (40) (2) (5) (2) (0) (0) (13) (3) (0) (14) (1) (1) ಅಂ (7) ಅಃ (7) (46) (1) (18) (0) (0) (2) (0) (3) (0) (0) (0) (0) (0) (0) (0) (8) (0) (8) (0) (23) (50) (0) (14) (13) (50) (1) (4) (0) (13) (11) (31) (0) (26) (37) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಏಕ ಪಾವುಮೇ ಶತಯೇಕ ಪಾವು ಗಈಬಾ. ಏಕ ಪಾಣಿಮೆ bs್ಞೀ ದಸ್ ಕೋಟಿ ಪಾಣಿ ಗಈಬಾ. ಏಕ ಪಾವು ಜಾಗಾಮೇ ತೇಶತ bs್ಞೀ ದಸ್ ಕೋಟಿ ಪುನ್ ಜಾಗಾ ಗಈಬಾ. ಅಲ್ಲಾಕು ಖಬರ ಸಹಿದರ ಸುಂತಿಕು ಬಂಮನ ಬಲಾ ಆದ್ಮಿಕು ಜಾನತಾಹೈ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಏಳು ತೊಲೆಗೆ ನಾಲ್ಕು ಬೋದು, ಎಂಟು ಕಂಬ, ಆರು ಬಿಗಿಜಂತಿ. ಮೂರು ಕೋಣೆಗೆ ಒಂಬತ್ತು ಬಾಗಿಲ, ಒಂದು ಕವಾಡ, ಎರಡು ಕುಲ್ಪಿ. ಇಂತೀ ಅಲುಕುಮಲಕಿನ ಅರಮನೆಯಲ್ಲಿ ಪಸುರುಕುಪ್ಪುಸ ಹಳದಿ ಶಾಲಿಯನುಟ್ಟು ಕಾಲು ಮೇಲಾಗಿ, ತಲೆ ಕೆಳಗಾಗಿ ಚಿತ್ರಾಂಗನೆಯೆಂಬ ವೇಶ್ಯಾಂಗನೆ ನಡದಾಡುತಿರ್ಪಳು. ಶ್ರೀಗುರುಚೆನ್ನಮಲ್ಲಯ್ಯನ ಕೂಡಬೇಕೆಂಬಣ್ಣಗಳ ಎರಡು ಬಟ್ಟೆಯಲ್ಲಿ ನಿಂದು ಕಣ್ಣುಸೊನ್ನೆಯ ಮಾಡಿ ಕರವುತಿರ್ಪಳು ನೋಡಾ. ಅಷ್ಟರಲ್ಲಿಯೇ ಕುಪ್ಪುಸ ಕಳೆದು ಶಾಲಿಯ ಹರಿದು ತಲೆಯ ಮೇಲಕ್ಕೆ ಕಾಲು ಕೆಳಯಕ್ಕೆ ಮಾಡಿ ಸೂತಕಾಗ್ನಿಯಂ ಬಿಟ್ಟು ಸೂತಕ ಇಲ್ಲದ ಅಗ್ನಿಯಿಂದ ಚಿತ್ರಾಂಗನೆಯೆಂಬ ವೇಶ್ಯಾಂಗನೆಯ ಮನೆಯಲ್ಲಿ ಸುಟ್ಟು ಎರಡು ಬಟ್ಟೆಯ ಮೆಟ್ಟಿ, ನಟ್ಟನಡುವಿನ ಬಟ್ಟೆಯ ಪಿಡಿದು, ಶ್ರೀಗಿರಿಚೆನ್ನಮಲ್ಲಯ್ಯನಲ್ಲಿಗೆ ಹೊಗಬಲ್ಲರೆ ಆತನೇ ಅಸುಲಿಂಗಸಂಬಂಧಿ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಏಳುಕೊಳ್ಳದ ಕಲ್ಲು ತಂದು, ವಜ್ರಸುತ್ತಿಗೆಯಿಂದ ಒಡೆದು, ಮಣ್ಣಿಗೊಂದು ಕಲ್ಲು, ನೀರಿಗೊಂದು ಕಲ್ಲು ಹಾಕಿ, ಚೌಷಷಿ*ಯ ಸಂಬಂಧಿಸಿದೆ. ಅಗ್ನಿಗೊಂದು ಕಲ್ಲು, ಗಾಳಿಗೊಂದು ಕಲ್ಲು ಹಾಕಿ, ರಂಗವಲ್ಲಿಯ ರಚಿಸಿದೆ. ಅಂಬರಕೊಂದು ಕಲ್ಲು, ಬಯಲಿಗೊಂದು ಕಲ್ಲು ಹಾಕಿ, ಕೋಣೆಯ ಬಂಧಿಸಿದೆ. ಮೂರು ಕಲ್ಲು ಮೂರಕ್ಕೆ ಹಾಕಿ ಉಳಿದ ಚೀಪುಗಲ್ಲು ಸಂದುಸಂದಿಗೆ ಬಂಧಿಸಿ, ಮನೆಯ ಕಟ್ಟಿ ಕಾಯಕವ ಮಾಡುವೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ