ಅಥವಾ
(36) (23) (40) (2) (5) (2) (0) (0) (13) (3) (0) (14) (1) (1) ಅಂ (7) ಅಃ (7) (46) (1) (18) (0) (0) (2) (0) (3) (0) (0) (0) (0) (0) (0) (0) (8) (0) (8) (0) (23) (50) (0) (14) (13) (50) (1) (4) (0) (13) (11) (31) (0) (26) (37) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮಣ್ಣ ತುಳಿದು ಮಡಿಕೆಯ ಮಾಡಿ ಆವಿಗೆಯನೊಟ್ಟಿ ಸುಡುವಲ್ಲಿ, ಅಗ್ನಿ ಸುಟ್ಟು ಮಡಿಕೆ ಉಳಿಯಿತ್ತು, ಹರವಿಯ ಉಪಚಾರುಳ್ಳವಂಗೆಕೊಟ್ಟು. ಉಪಚಾರಿಲ್ಲದವನ ಕೊಂದು, ಗುಡುಮಿಯ ಉಪಚಾರ ಇಲ್ಲದವಂಗೆ ಕೊಟ್ಟು ಉಪಚಾರುಳ್ಳವನ ಕೊಂದು, ಕಿಡಿಕಿಯ ಕುಲಗೇಡಿಗೆ ಕೊಟ್ಟು, ಭವಗೇಡಿಯ ಕೊಂದು, ಮೂರೆರಡು ಮಡಕಿಯ ಆರೂರವರಿಗೆ ಕೊಟ್ಟು ಈರಾರು ಈರೆಂಟು ಕೊಂದು, ಉಳಿದ ಮಡಕಿಯ ಊರೆಲ್ಲ ಮಾರಲು, ಊರು ಸುಟ್ಟು ಜನರೆಲ್ಲ ಸತ್ತು, ಸತ್ತವರ ಹೊತ್ತು ಸತ್ತು ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮಲೆಯ ಕಡಿದು ಒಂದು ವೃಕ್ಷವ ತಂದು, ಕೊರೆದು ಅನೇಕ ತೊಲಿ ಕಂಬ ಬೋದುಗೆಗಳು ಚಿಲುಕಿ ಮೊದಲಾದ ಎಲ್ಲವನು ಕೆತ್ತಿ ಉಣ್ಣದೆ ಉಂಡು, ಮನೆಯ ಕಟ್ಟಿ, ಒಗತನವಿಲ್ಲದೆ ಸತ್ತು ಕಾಯಕವ ಮಾಡುತ್ತಿರ್ಪರು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮಂಡಲತ್ರಯದ ಚಿತ್ತದೊಳಗೆ ನೀರಮುಖದ ಶೇಷನಿರ್ಪುದು. ಆ ಶೇಷನ ಮಸ್ತಕದ ಮಾಣಿಕದ ನೆರಳಿನಲ್ಲಿ ಈರೇಳುಲೋಕ ಇರ್ಪುದು. ಆ ಮಾಣಿಕದ ಪ್ರಕಾಶದಲ್ಲಿ ತಾನಡಗಿ ತನ್ನ ಪ್ರಕಾಶದಲ್ಲಿ ಮಾಣಿಕವನಡಗಿಸಿಕೊಳ್ಳಬಲ್ಲಾತನೇ ಅಸುಲಿಂಗಿ ನೋಡಾ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮಣ್ಣ ಮೆಚ್ಚಿ ಗುರುವಿಗೆ ಹೊರತಾದೆ, ಹೆಣ್ಣ ಮೆಚ್ಚಿ ಲಿಂಗಕ್ಕೆ ಹೊರತಾದೆ, ಹೊನ್ನ ಮೆಚ್ಚಿ ಜಂಗಮಕ್ಕೆ ಹೊರತಾದೆ. ಇಂತೀ ತ್ರಿವಿಧವ ಮೆಚ್ಚಿ ಅಕಟಕಟಾ ಕೆಟ್ಟೆನೆಂದು ಗುರೂಪಾವಸ್ತೆಯಂ ಮಾಡಿ, ಗುರುವಾಕ್ಯ ಪ್ರಮಾಣವಿಡಿದು, ಆಚರಿಸುವ ಜ್ಞಾನಕಲಾತ್ಮನಿಗೆ ಈ ಲೋಕದ ಜಡಜೀವರು ಕಡುಪಾತಕರು ಬಂದು ಈ ಸಂಸಾರದಲ್ಲಿ ಪಾರಮಾರ್ಥವುಂಟು, ಇದರೊಳಗೆ ಸಾದ್ಥಿಸಬೇಕೆಂದು ಇಹ ಬಿಟ್ಟು ವೈರಾಗ್ಯದಲ್ಲಿ ಮೋಕ್ಷವಿಲ್ಲೆಂದು ಹೇಳುವರು. ಇದಕ್ಕೆ ಉಪಮೆ- ಹಿಂದೆ ಕಲ್ಯಾಣಪಟ್ಟಣಕ್ಕೆ ತಮ್ಮ ತಮ್ಮ ದೇಶವ ಬಿಟ್ಟು ಬಂದ ಗಣಂಗಳಾರಾರೆಂದಡೆ: ಮೋಳಿಗೆ ಮಾರತಂದೆಗಳು ಕಾಶ್ಮೀರದೇಶದ ಅರಸು. ನಿಜಗುಣಸ್ವಾಮಿಗಳು ಕೈಕಾಡದೇಶದ ಅರಸು. ನುಲಿಯ ಚಂದಯ್ಯನವರು ಕೈಕಾಣ್ಯದೇಶದ ಅರಸುಗಳು. ಇಂತಿವರು ಮೊದಲಾದ ಬಸವಾದಿ ಪ್ರಭುದೇವರಾಂತ್ಯಮಾದ ಏಳನೂರೆಪ್ಪತ್ತು ಪ್ರಮಥಗಣಂಗಳು. ತಮ್ಮ ತಮ್ಮ ದೇಶವ ಬಿಟ್ಟು ಕಲ್ಯಾಣಕ್ಕೆ ಬಂದರು. ಅವರೆಲ್ಲರು ಹುಚ್ಚರು, ನೀವೇ ಬಲ್ಲವರು. ಬಸವೇಶ್ವರದೇವರು ಮೊದಲಾಗಿ ಏಳನೂರೆಪ್ಪತ್ತು ಪ್ರಮಥಗಣಂಗಳು ಕೂಡಿ ತಮ್ಮ ತಮ್ಮ ಹೃನ್ಮಂದಿರದಲ್ಲಿ ನೆಲಸಿರುವ ಪರಶಿವಲಿಂಗಲೀಲಾವಿನೋದದಿಂ ಎರಡೆಂಬತ್ತೆಂಟುಕೋಟಿ ವಚನಗಳನ್ನು ಹಾಡಿಕೊಂಡರು. ಇದರನುಭಾವವ ತಿಳಿಯಬಲ್ಲರೆ ಹೇಳಿರಿ; ಅರಿಯದಿದ್ದರೆ ಕೇಳಿರಿ. ತನು-ಮನ-ಧನ ನೀನಲ್ಲ, ಪಂಚವಿಂಶತಿತತ್ವ ನೀನಲ್ಲ, ಪಂಚಭೂತಪ್ರಕೃತಿ ನೀನಲ್ಲ, ಮನ ಮೊದಲಾದ ಅರವತ್ತಾರುಕೋಟಿ ಕರಣಾದಿ ಗುಣಂಗಳು ನೀನಲ್ಲ. ಇಂತೀ ಎಲ್ಲವನು ನೀನಲ್ಲ, ನೀನು ಸಾಕಾರಸ್ವರೂಪಲ್ಲವೆಂದು ಸ್ವಾನುಭಾವಜ್ಞಾನಗುರುಮುಖದಿಂದ ತಿಳಿದು ಸಕಲಪ್ರಪಂಚವನೆಲ್ಲವ ನಿವೃತ್ತಿಯ ಮಾಡಿ, ಸಕಲಸಂಶಯವಂ ಬಿಟ್ಟು, ನಿಶ್ಚಿಂತನಾಗಿ, ಏಕಾಗ್ರಚಿತ್ತದಲ್ಲಿ ಸ್ವಸ್ಥಿರನಾಗಿ ಮುಂದೆ ಶಿವಪಥವ ಸಾದ್ಥಿಸೆಂದು ಹಾಡಿದರಲ್ಲದೆ ಅವರೇನು ದಡ್ಡರೇ? ನೀವೇ ಬಲು ಬುದ್ಧಿವಂತರು, ಬಲುಜಾಣರು ! ಇಂಥ ಯುಕ್ತಿ ವಿಚಾರವ ಹೇಳುವ ಮತಿಭ್ರಷ್ಟ ಹೊಲೆಯರ ಕಾಲು ಮೇಲಕ್ಕೆ ಮಾಡಿ, ತಲೆ ಕೆಳಯಕ್ಕೆ ಮಾಡಿ ಅವರಂಗದ ಮೇಲಿನ ಚರ್ಮವ ಹೋತು ಕುರಿಗಳ ಚರ್ಮವ ಹರಿದ ಹಾಗೆ ಹರಿದು, ಅವರ ತಿದಿಯನೆ ಹಿರಿದು, ಅವರ ಕಂಡವ ಕಡಿದು, ಚಿನಿಪಾಲವ ಮಾಡಿ, ಹದ್ದು ಕಾಗೆ ನಾಯಿ ನರಿಗಳಿಗೆ ಹಾಕೆಂದ ಕಾಣಾ ನಿಮ್ಮ ಶರಣ ವೀರಾದ್ಥಿವೀರ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮೋರೆಯಿಲ್ಲದವರಿಗೆ ಕನ್ನಡಿಯ ತೋರಿದಂತೆ, ಕಿವಿಯಿಲ್ಲದ ಕಿವುಡಗೆ ಶಾಸ್ತ್ರವ ಹೇಳುವಂತೆ, ಮೂಗಿಲ್ಲದ ಮೂಕಂಗೆ ಮಾತು ಹೇಳುವಂತೆ, ಬಾಯಿ ಇಲ್ಲದವರಿಗೆ ಪಂಚಾಮೃತವನುಣಿಸಿದಂತೆ, ಒಲ್ಲದ ಕೂಸಿಗೆ ನೊರೆವಾಲನೆರೆದಂತೆ, ಕನ್ಯಾಕುಮಾರಿಯ ಸಂಗ ನಪುಂಸಕ ಮಾಡುವಂತೆ, ಇಂತೀ ದೃಷ್ಟಾಂತದಂತೆ ತ್ರಿವಿಧಮಲವ ಕಚ್ಚಿ, ಸಂಸಾರವಿಷಯಲಂಪಟರಾದ ತಾಮಸಜೀವಿಗಳಿಗೆ ಶಿವಾನುಭವಬೋಧೆಯ ಮಾಡಿದುದು ಒಂದೇ ನೋಡಾ. ಅಂತಪ್ಪ ಮಂಗಮೂಳರ ಮುಂದೆ ಮಾತನಾಡಲಾಗದು. ಮನದೆರದು ಮಹಾನುಭಾವಬೋಧೆಯ ಬೆಸಗೊಳ್ಳಲಾಗದು. ತಥಾಪಿ ಬಿಡೆಯಭಾವದಿಂ ಶಿವಾನುಭಾವ ಬೆಸಗೊಂಡಡೆ ಹಳ್ಳಗೊಂಡ ಹರವಿಯ ನೀರು ತುಂಬಿ ಇರಿಸಿದಂತೆ, ಹೊಳ್ಳ ಕುಟ್ಟಿ ಗಾಳಿಗೆ ತೂರಿದಂತೆ ಆಯಿತ್ತು. ಇದು ಕಾರಣ ಶಬ್ದಮುಗ್ಧನಾಗಿ ಕಲ್ಲುಮರದಂತೆ, ಪರ್ಣ ಉದುರಿದ ವೃಕ್ಷದಂತೆ, ಸುಮ್ಮನೆ ಇರ್ದನು ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮೂರು ಮಲವ ಜರಿದು, ಮೂರು ಮಲವ ತಿಂದು, ಆರು ಮಂದಿಯ ಕೊಂದು, ಆರು ಮಂದಿಯ ಸಂಗವ ಮಾಡಿ, ಮೂರು ಮಂದಿಯ ಕೊಂದು, ಮೂವರ ಕೂಡಿ ಗುಲ್ಲುಮಾಡದೆ ಸಲ್ಲಡಗಿ, ಸೂರ್ಯನ ಪ್ರಕಾಶದಲ್ಲಿ ಸತ್ತು ಚಲಿಸುತಿರ್ದ ನಿಮ್ಮ ಭಕ್ತ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮನೆಯೊಳಗಣ ಜ್ಯೋತಿ ಮನೆಯ ಸುಟ್ಟು, ಮನೆ ಉಳಿದಿತ್ತು, ಅರಣ್ಯಸುಟ್ಟು ಅರಣ್ಯದ ಪಕ್ಷಿಯ ಕಾಲು ಸುಟ್ಟು ನಡೆಯಿತ್ತು, ತಲೆ ಸುಟ್ಟು ಕಣ್ಣು ಉಳಿದಿತ್ತು. ಮೈಸುಟ್ಟು ಪ್ರಾಣ ಉಳಿದಿತ್ತು, ಉಭಯ ರೆಕ್ಕೆ ಸುಟ್ಟು ಉರಿಯ ನುಂಗಿ ಗಗನಕ್ಕೆ ಹಾರಿ, ಮೇಲುಗಿರಿಯಲ್ಲಿ ಅಡಗಿತ್ತು. ಅದು ಅಡಗಿದ ಠಾವಿನಲ್ಲಿ ಅಡಗಬಲ್ಲರೆ ಭಕ್ತನೆಂಬೆ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮಲೆಯಮಂದಿರದ ವಟವೃಕ್ಷದ ಘಟದಲ್ಲಿ ಮಕ್ಷಿಕ ಮನೆಯ ಮಾಡಿ ಹಂದಿಯನೇರಿ, ಮೂಡಲಗಿರಿಯಲ್ಲಿ ಕೋಳಿ ಕೂಗಿ, ಪಶ್ಚಿಮಗಿರಿಯಲ್ಲಿ ಬೆಳಗುತೋರಿ, ವೃಕ್ಷದಡಿಯಲ್ಲಿ ಅಗ್ನಿಪುಟವಾಗಿ ಬೇರುಸುಟ್ಟು, ವೃಕ್ಷ ಉಳಿದು, ಮಕ್ಷಿಕ ಹಂದಿ ಸತ್ತುಳಿದು, ಕೂಗಡಗಿದ ಕುಕ್ಕುಟನಲ್ಲಿ ಮಕ್ಷಿಕ ಹಂದಿಯು ಕೂಡಿ ಕುಕ್ಕುಟನ ಮನೆಯಲ್ಲಿ ಅಡಗಿದರು. ಅಡಗಿದ ಭೇದವ ನಿಮ್ಮ ಶರಣಬಲ್ಲ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮಹಾಮಲೆಯ ವ್ಯಾಘ್ರನ ನೀರ ನಕ್ರ ಕಚ್ಚಿ, ನಕ್ರನ ಹಂದಿ ಕಚ್ಚಿ, ಹಂದಿಯ ನಾಯಿ ಕಚ್ಚಿ, ನಾಯಿಯ ಕಾಳೋರಗ ಕಚ್ಚಿ ಹೆಡೆಯೆತ್ತಿ ಆಡಲಾಗಿ, ಆಕಾಶದ ಹದ್ದು ಕಂಡು ಎರಗಲಾಗಿ, ಹೆಡೆಯುಡಿಗಿ ಸುನಿಗಳು ಬಿಟ್ಟು, ಹಂದಿ ಸತ್ತು, ನಕ್ರ ಬಿದ್ದು, ವ್ಯಾಘ್ರ ಪಲಾಯನವಾಗಿ, ಹಾವ ಹದ್ದು ಕಚ್ಚಿ, ಹದ್ದು ಹಾವ ಕಚ್ಚಿ, ಹದ್ದಳಿದು ಹಾವು ಉಳಿದ ಭೇದವ ತಾನೆ ಬಲ್ಲನಲ್ಲದೆ ಈ ಲೋಕದ ಜಡಜೀವಿಗಳೆತ್ತ ಬಲ್ಲರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮುಡಿಮೂಡದ ಮುನ್ನ ಪುರುಷನ ಹುಡುಕಲೇಕೆ ? ಮುಡಿಬಂದು ಪುರುಷನ ನೆರೆದ ಬಳಿಕ ಇನ್ನಾವ ಚಿಂತೆ ಏತಕ್ಕೆ? ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮನೆ ಸುಟ್ಟು ಸತಿಸುತರು ಸತ್ತು ಅರಸನಿಗೆ ಹಣವ ಕೊಟ್ಟವರು ಅಳಲಿಲ್ಲ, ಇಷ್ಟುಳ್ಳವರು ಅಳುತ್ತಿರ್ಪರು. ಅಳುವರ ಕೈಯೊಳಗೆ ಕನ್ನಡಿಯ ಕೊಡಲು ಅಳುವಡಗಿ ಕನ್ನಡಿಯ ನೋಡಿ ಹಲ್ಲುಕಿಸಿದು ನಕ್ಕು ಸತ್ತು ಬದುಕಿ ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮಹಾಮಲೆಯಲ್ಲಿ ಮಕ್ಷಿಕವಿರ್ಪುದು. ಆ ಮಕ್ಷಿಕನ ಬಾಯೊಳಗೆ ಉಡುವಿರ್ಪುದು. ಆ ಉಡುವಿನ ಬಾಯೊಳಗೆ ವ್ಯಾಘ್ರವಿರ್ಪುದು. ಆ ವ್ಯಾಘ್ರನ ಬಾಯೊಳಗೆ ಅರಸಿನ ಶಿಶುವಿರ್ಪುದು. ಆ ಶಿಶು ಒದರಲು ಮಕ್ಷಿಕ ಬಿಟ್ಟಿತ್ತು, ಉಡವು ಸತ್ತಿತ್ತು, ವ್ಯಾಘ್ರ ಬಿಟ್ಟಿತ್ತು. ಆ ಶಿಶು ಮೂರು ಲೋಕವ ನುಂಗಿ ತಾಯಿತಂದೆಯ ಕೊಂದು ಬಟ್ಟಬಯಲಲ್ಲಿ ನಿರ್ವಯಲಾಯಿತ್ತು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮನುಜರಿಲ್ಲದ ಊರ ಬಳೆಯ ತಂದು, ಗಂಡನಿಲ್ಲದ ಸತಿಯಳಿಗೆ ಇಡಿಸಿ ಮದುವೆಯ ಮಾಡಲು ಉಭಯತರು ಸತ್ತು ಪದಾರ್ಥವ ನೀಡಿ, ಭೂಮವನುಂಡು ಕಾರದೆ, ಕಾಯಕವ ಮಾಡುತ್ತಿರ್ಪರು ನೋಡೆಂದ ಬಳಿಗಾರ ಬಸವಂತ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮನೆಯೊಳಗೊಂದು ಮಾಯದ ಕೂಸು ಹುಟ್ಟಿ, ಮನೆಯ ಮಂದಿಯ ನುಂಗಿ, ಕಮಲದಲ್ಲಿ ಬಂದು, ಶಾಲಿಕುಪ್ಪುಸವ ಕಳೆದು, ಎನ್ನ ಬತ್ತಲೆ ಮಾಡಿ, ಮನೆಯ ಸುಟ್ಟು, ಬೂದಿಯ ಮೈಗೆ ಪೂಸಲು ಯೌವನವಾಯಿತ್ತು ಎನಗೆ ನೋಡಪ್ಪ. ಆ ಕೂಸಿನಾಟವ ಕಂಡು ಅವಿರಳಭಕ್ತಿಯಿಂದಪ್ಪಲೊಡನೆ ಆ ಕೂಸುಸಹಿತವಾಗಿ ನಾನೆತ್ತ ಹೋದೆನೆಂಬುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮಲವ ಭುಂಜಿಸುವ ಶೂಕರನಿಗೆ ಮದಗಜವ ಹೋಲಿಸಿದರೆ ಆ ಶೂಕರ ಮದಗಜವಾಗಬಲ್ಲುದೆ ? ಎಲುಬು ಕಡಿಯುವ ಶುನಿಗಳಿಗೆ ಗಜವೈರಿಯ ಹೋಲಿಸಿದರೆ ಆ ಶುನಿಗಳು ಗಜವೈರಿಯಾಗಬಲ್ಲುವೆ ? ಇಲಿಯ ತಿಂಬುವ ಮಾರ್ಜಾಲನಿಗೆ ಮಹಾವ್ಯಾನ ಹೋಲಿಸಿದರೆ ಆ ಮಾರ್ಜಾಲ ಮಹಾವ್ಯಾಘ್ರನಾಗಬಲ್ಲುದೆ ? ಹೊಲಸುತಿಂಬುವ ಕಾಗಿಯ ಮರಿಗೆ ಕೋಗಿಲೆಯ ಹೋಲಿಸಿದರೆ ಆ ಕಾಗಿಯಮರಿ ಸುನಾದಸ್ವರ ಕೋಗಿಲಮರಿಯಾಗಬಲ್ಲುದೆ ? ಕಸವ ತಿಂಬುವ ಕತ್ತೆಗೆ ಕುದುರೆಯ ಹೋಲಿಸಿದರೆ ಆ ಕತ್ತೆ ಮಹಾತೇಜಿಯಾಗಬಲ್ಲುದೆ ? ಕಸ ನೀರು ಹೊರುವ ದಾಸಿಗೆ ಅರಸಿಯ ಹೋಲಿಸಿದರೆ ಆ ದಾಸಿಯು ಅರಸಿಯಾಗಬಲ್ಲಳೆ ? ಈಚಲ ಕಾಡಿನಮರಕ್ಕೆ ಟೆಂಗಿನಮರ ಹೋಲಿಸಿದರೆ ಆ ಈಚಲ ಕಾಡಿನಮರ ಎಳೆಯ ಟೆಂಗಿನಮರವಾಗಬಲ್ಲುದೆ ? ನೀರೊಳಗಣ ಕೋಳಿಗೆ ಕೊಳದೊಳಗಣ ಹಂಸನ ಹೋಲಿಸಿದರೆ ಆ ನೀರಕೋಳಿಯು ರಾಜಹಂಸನಾಗಬಲ್ಲುದೆ ? ತಿಪ್ಪೆಯೊಳಗಣ ಪುಳವತಿಂಬುವ ಕೋಳಿಗೆ ಪಂಜರದೊಳಗಣ ಗಿಣಿಯ ಹೋಲಿಸಿದರೆ ಆ ಕೋಳಿಯು ಅರಗಿಳಿಯಾಗಬಲ್ಲುದೆ ? ಇಂತೀ ದೃಷ್ಟದ ಹಾಗೆ ಲೌಕಿಕದ ಜಡಮತಿ ಮನುಜರಿಗೆ ಶಿವಜ್ಞಾನಸಂಪನ್ನರಾದ ಶರಣರ ಹೋಲಿಸಿದರೆ, ಆ ಮಂದಮತಿ ಜೀವರು ಶಿವಜ್ಞಾನಿಗಳಾದ ಶಿವಶರಣರಾಗಬಲ್ಲರೆ ? ಈ ಭೇದವ ತಿಳಿಯಬಲ್ಲರೆ ಕೂಡಲ ಚನ್ನಸಂಗಯ್ಯನ ಶರಣರೆಂಬೆ. ಇದ ತಿಳಿಯದಿದ್ದರೆ ಭವಭಾರಿಗಳೆಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮದುವೆಯಿಲ್ಲದವರಿಗೆ ಮುಹೂರ್ತವ ಪೇಳಲಿಲ್ಲ. ಮದುವೆಯಾದವರಿಗೆ ಮುಹೂರ್ತವ ಪೇಳ್ವೆ. ಎನ್ನ ಮುಹೂರ್ತವ ಕೇಳಿದವರ ಬಾಗಿಲಿಕ್ಕಿ ಮನೆಯ ಸುಡುವೆ. ಸುಟ್ಟ ಮನೆಯವರು ಸತ್ತವನ ಮನೆಯಲ್ಲಿರ್ದು ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಗೋವಿಂದಭಟ್ಟನು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮಹಾಮಲಸರೋವರದ ವರಾಹ ಆಕಾಶವ ನುಂಗಿ ಊರನಾಯಿಗಳ ಸಮ್ಮೇಳದಲ್ಲಿರುವುದು. ಊರಮಲವ ಭುಂಜಿಸಿ ಕೊಕ್ಕರನಾಗಿ ಮೂರುಲೋಕಕ್ಕೆ ಒಡೆಯನೆಂದು ಚಿಂತೆಯಿಲ್ಲದೆ ಇರುವುದು. ಅಂತಪ್ಪ ವರಾಹವ ಕೊಲ್ಲದೆ ಕಣ್ಣಕಳೆದು ಹೃದಯದಲ್ಲಿ ಹುದುಗಿರ್ದ ಮಹಾಕಾಳಜವ ತೆಗೆದುಕೊಂಡು ಸಲಿಸಬಲ್ಲಡೆ ಲಿಂಗೈಕ್ಯರೆಂಬೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮೂರು ಹೊನ್ನು ಕೊಟ್ಟು ಮೂರಾರು ಹೊನ್ನಿನ ಊರಕೊಂಡು ರೈತರ ಕಾಡದೆ ಪಟ್ಟಿಯನೊಡೆದು ಧಣಿಯಂಗೆ ಕೊಟ್ಟು, ಊರ ಸುಖದಲ್ಲಿಟ್ಟು ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮುದುಕಿ ಮುದುಕನ ಸಂಗದಿಂದೊಂದು ಎಳೆಯ ಶಿಶು ಪುಟ್ಟಿತ್ತು. ಆ ಶಿಶುವಿನ ಬೆನ್ನಿನಿಂದ ಒಬ್ಬ ಎಳೆಯ ಕುಮಾರಿ ಪುಟ್ಟಿದಳು. ಆ ಕುಮಾರಿ ಅಣ್ಣನ ಮದುವೆಯಾಗಿ ಮುದುಕನ ಒಡಗೂಡಿ ಮನೆಯ ಸುಟ್ಟು, ಮನೆಯ ಒಡೆಯನ ಕೊಂದು ಒಡತಿಯ ನುಂಗಿ, ತಾಯಿಯ ಕೊಂದು ಹೊಲಗೇರಿಯ ಹೊಕ್ಕು, ಕುಲಗೆಟ್ಟು ಹೊಲೆಯನ ಸಂಗವ ಮಾಡಿ, ಸತ್ತುಹೋದ ಭೇದವನು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವಿನ ಶರಣರು ಬಲ್ಲರಲ್ಲದೆ ಮಿಕ್ಕಿನ ಜಡಮತಿ ಕುರಿಮನುಜರೆತ್ತ ಬಲ್ಲರಯ್ಯಾ.
--------------
ಕಾಡಸಿದ್ಧೇಶ್ವರ
ಮಾಳಿ ಮೂರಳಿದು, ಕಾವಲಿ ಆರಳಿದು, ಕಟ್ಟೆ ಎಂಟಳಿದು, ಬೆಂಕಿಲ್ಲದೆ ಉಪ್ಪನಟ್ಟು ಉಂಬರೆ ಉಪ್ಪುಣಿಗ ಭರಮಣ್ಣನ ಪುತ್ರರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮಾನವರಿಗೆ ಮತ್ರ್ಯಲೋಕ, ದೇವರಿಗೆ ದೇವಲೋಕ, ಉಳಿದ ಪ್ರಾಣಿಗಳಿಗೆ ಯಮಲೋಕ, ಎನಗೆ ಇನ್ನಾವಲೋಕವಿಲ್ಲ ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮುದ್ರಿಕಿಪಶುವಿಂಗೆ ಭಯವಿಲ್ಲ. ಮುದ್ರಿಕಿಲ್ಲದ ಪಶುವಿಂಗೆ ಭಯವುಂಟು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮೂರಾರು ಪರ್ವತದ ಮೇಲುಗಿರಿ ಅಗ್ರದ ಕಮಲದೊಳಗೆ, ಸೂರ್ಯವರ್ಣದ ಶೇಷವು. ಆ ಶೇಷನ ವಕ್ತ್ರದೊಳಗೆ ಚಂದ್ರವರ್ಣದ ಮಂಡೂಕ. ಆ ಮಂಡೂಕನ ವಕ್ತ್ರದ ಜೊಲ್ಲು ಭೂಮಿಗೆ ಬೀಳಲು, ತಲೆಯಿಲ್ಲದ ಶೇಷ, ಸೇವಿಸಲು ತಲೆ ಬಂದು, ಕಣ್ಣು ತೆರೆದು ನೋಡಿ, ಜೊಲ್ಲಿನ ದಾರಿಯ ಪಿಡಿದು, ಎಡಬಲದ ಬಟ್ಟೆಯ ಬಿಟ್ಟು, ನಡುವಣ ಬಟ್ಟೆಯಿಂದ ಊಧ್ರ್ವಮುಖವಾಗಿ ಏರಲು, ಆ ಏರುವ ಶೇಷನ ರಭಸದಿಂ ಕತ್ತಲಿಪುರದರಸು ಮಂತ್ರಿ ಮಾರ್ಬಲವೆಲ್ಲ ಬೆದರಿ, ಶೇಷ ಮಂಡೂಕನ ಕಚ್ಚಿ, ಮಂಡೂಕ ಶೇಷನ ನುಂಗಲು, ಶೇಷ ಸತ್ತು, ಮಂಡೂಕ ಉಳಿದಿತ್ತು. ಆ ಉಳಿದ ಉಳುಮೆಯ ತಾನೇನೆಂದು ತಿಳಿದಾತನೇ ಅಸುಲಿಂಗಸಂಬಂಧಿ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮೂರು ಜರಿಬಾವಿಯ ನೀರಿನಲ್ಲಿ ಕುರಿತೊಗಲು ಹದಮಾಡಿ, ಕರಿಯಿಲ್ಲದ ತೊಗಲ ಹುರಿಗೂಡದ ಮಿಣಿಯ ಊರ ಸುತ್ತ ಬಿಗಿಯಲು, ಊರ ಜನರು ಕುಲಗೆಟ್ಟು ಭ್ರಷ್ಟರಾದರು. ಮಾತಾಡುವವರನಾರನು ಕಾಣೆ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮುಖದಲ್ಲಿ ಮಂತ್ರ, ಪಣೆಯಲ್ಲಿ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ, ಹೃದಯದಲ್ಲಿ ಶಿವಲಿಂಗಸಜ್ಜೆಯ ಧರಿಸಿ, ಭಕ್ತಿಸ್ಥಲವನಾಚರಿಸುವ ಶರಣಜನಂಗಳು ಶಿವಗಣಂಗಳ ಕಂಡು ಹರಹರ ಶಿವಶಿವ ಶಿವಮಹಾದೇವ ಎಂದು ನಮಸ್ಕಾರವ ಮಾಡಿ, ಅವರ ಪಾದದ ಮೇಲೆ ಉರುಳಾಡಿ, ಅವರ ಪಾದಧೂಳವ ಸರ್ವಾಂಗದಲ್ಲಿ ಧರಿಸಿ, ತಮ್ಮ ತಮ್ಮ ಗೃಹಾಶ್ರಮಕ್ಕೆ ಬಿಜಯಂಗೈಸಿಕೊಂಡು ಹೋಗಿ, ಪಾದಾರ್ಚನೆಯಂ ಮಾಡಿ ಉನ್ನತಾಸನದ ಮೇಲೆ ಮುಹೂರ್ತವ ಮಾಡಿಸಿ, ಅಂಬಲಿ ಸೊಪ್ಪು ಮೊದಲಾದ ಪಂಚಾಮೃತವ ಎಡೆ ಮಾಡಿ, 'ಸ್ವಾಮೀ ಮನಃಪೂರ್ವಕ ಸಲಿಸೆಂ'ದು ಹಸ್ತ-ಪಾದವ ಜೋಡಿಸಿಕೊಂಡು 'ಶರಣಾರ್ಥಿ ಸ್ವಾಮಿ ಲಿಂಗಾರ್ಪಣವಾಗಲೆಂ'ದು ಅಡಿಗಡಿಗೆ ಇಚ್ಫಾಪದಾರ್ಥವ ಎಡೆಮಾಡಿ, ಅವರು ಸಲಿಸಿದ ಮೇಲೆ ವೀಳ್ಯ ಅಡಿಕೆಯ ನೀಡಿ, ಅವರ ಸುಖ-ದುಃಖವ ವಿಚಾರಿಸಿ, ಅವರಿಗೆ ಶಿವಕೊಟ್ಟ ದ್ರವ್ಯವನು ಭಿಕ್ಷವ ನೀಡಿ, ತಮ್ಮಾಪ್ತರಾದ ಬೀಗರು ಸ್ನೇಹಿತರು ಬಾಂಧವರು ಉಲ್ಲಾಸದಿಂದ ಸರ್ವರೂ ಕೂಡಿ ಊರಬಿಟ್ಟು ಹೊರಯಕ್ಕೆ ಬಂದು, ಒಬ್ಬರಿಗೊಬ್ಬರು ಶರಣು ಶರಣೆಂದು ಕಳಿಸಿದ ಹಾಗೆ, ಶಿವಗಣಂಗಳ ಪಾದಕ್ಕೆ ದೀರ್ಘದಂಡ ನಮಸ್ಕಾರವ ಮಾಡಿ, 'ಸ್ವಾಮಿ ಬರುವಂಥವರಾಗಿರಿ' ಎಂದು ಶರಣು ಮಾಡಿದಾತನೆ ಶಿವಭಕ್ತ; ಮೂರು ಲೋಕಕ್ಕೆ ಒಡೆಯನಾಗುವನು ನೋಡಾ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ

ಇನ್ನಷ್ಟು ...