ಅಂ ಪದದಿಂದ ಪ್ರಾರಂಭವಾಗುವ ವಚನಗಳು:
ಅಂತರಂಗ ಬಹಿರಂಗದಲ್ಲಿಸರ್ವಾಚಾರ ಸಂಪತ್ತಿನ ಆಚರಣೆಯನರಿಯದಮೂಢಾತ್ಮಂಗೆ ಲಿಂಗಾಂಗ ಸಮರಸವ ಹೇಳಿಸರ್ವಾಂಗ ಸ್ನಾನಧೂಳನ ನಾಲ್ವತ್ತೆಂಟು ಸ್ಥಾನಂಗಳಲ್ಲಿ ಧಾರಣಕ್ರಿಯಾಭಸಿತವ ಧರಿಸುವ ನಿರ್ಣಯವ ಹೇಳಿಅಂತರಂಗದ ಜಪವ ಹೇಳುವನೊಬ್ಬಆಚಾರದ್ರೋಹಿ ನೋಡಾ, ರಾಮನಾಥ.
ಅಂಬಲಿ ಅಲೆಯಾಗಿ, ತುಂಬೆಯ ಮೇಲೋಗರವಾಗಿ,ಉಂಬ ಸದುಭಕ್ತನ ಮನೆಯಾಗಿ,ಲೋಕದ ಡಂಭಕರ ಮನೆ ಬೇಡ, ರಾಮನಾಥ
ಅಂಗಲಿಂಗದ ಒಳಗೆ ಲಿಂಗಕಂಗಳು ಬೆಳಗು,ಹಿಂಗಲಾಪುದೆ ಹೇಳು ಅಜ್ಞಾನವ!ಸಂಗಸುಖಮಥನದ ಅಸಂಗದಿಂದದನರಿದುಹಿಂಗಲಿಕೆ ಹೆಸರೇನು? ರಾಮನಾಥ.