ದ ಪದದಿಂದ ಪ್ರಾರಂಭವಾಗುವ ವಚನಗಳು:
ದರುಶನ ತಪ್ಪುಕ ಪ್ರಥಮ ಪಾತಕ.ಪರುಶನ ತಪ್ಪುಕ ದ್ವಿತೀಯ ಪಾತಕ.ಗುರು ತಪ್ಪುಕ ತೃತೀಯ ಪಾತಕ.ಪಾರದ್ವಾರಿ ಚತುರ್ಥ ಪಾತಕ.ಮಾಂಸಾಹಾರಿ ಪಂಚಮ ಮಹಾ ಪಾತಕ.ಈ ಅಯ್ವರೊಡನೆ ನುಡಿಯಲಿಲ್ಲಯ್ಯ ರಾಮನಾಥ.
ದಾಸಿ ವೇಶಿ ಮದ್ದು ಮಾಂಸ ಸುರೆ ಭಂಗಿ ಹೊಗೆಅನ್ಯದೈವ ಭವಿಸಂಗ-ಇಷ್ಟುಳ್ಳನ್ನಕ್ಕ ಅವ ಭಕ್ತನಲ್ಲ, ಜಂಗಮನಲ್ಲ.ಅವರಿಬ್ಬರ ಮೇಳಾಟವೆಂತೆಂದಡೆಹೀಹಂದಿ ಹಡಿಕೆಯ ತಿಂದುಅವು ಒಂದರ ಮೋರೆಯನೊಂದುಮೂಸಿದಂತೆ ಕಾಣಾ! ರಾಮನಾಥ.
ದೇಹಗೊಂಡು ಹುಟ್ಟಿದವರುಒಪ್ಪಚ್ಚಿದೇಹಾರವ ಮಾಡುವಿರಯ್ಯ.ದೇಹಾರವ ಮಾಡಿ ಲಿಂಗಾರ್ಪಿತವ ಮಾಡದೆಆಹಾರವ ಕೊಂಡಡೆಕೋಳಿ ಹುಳವನಾಯ್ದುತಿಂದಂತೆ ಕಾಣಾ! ರಾಮನಾಥ.
ದಾಸನ ಕುಲವಾದಾತ ಈಶಂಗಲ್ಲದೆ ಶರಣೆನ್ನ.ಆಸೆ ಮಾಡ, ನೋಡ ಅನ್ಯದೈವಂಗಳಿಗೆ.ದೇಶದ ಪಿಶಾಚಿಗಳಿಗೆ ಆಶೆ ಮಾಡ ನೋಡ!ಆಶೆ ಮಾಡಿದನಾದಡೆ ಅವ ದಾಸನ ಕುಲವಲ್ಲಅವ ಅನ್ಯಕುಲ ಕಾಣಾ! ರಾಮನಾಥ.