ಘ ಪದದಿಂದ ಪ್ರಾರಂಭವಾಗುವ ವಚನಗಳು:
ಘಟದೊಳಗೆ ತೋರುವ ಸೂರ್ಯನಂತೆಸರ್ವರಲ್ಲಿ ಶಿವನ ಚೈತನ್ಯವಿಪ್ಪುದು.ಇದ್ದರೇನು? ಅದ ಕೂಡುವರೆಗುರುವಿನಿಂದಲ್ಲದಾಗದು ಕಾಣಾ!ರಾಮನಾಥ.
ಘಟವನೊಡದು ಬಯಲ ನೋಡಲದೇಕೆ?ಘಟದೊಳಗಿಪ್ಪುದೆ ಬಯಲೆಂದರಿದಡೆ ಸಾಲದೆ?ಪಟವ ಹರಿದು ತಂತುವ ನೋಡಲದೇಕೆ?ಆ ಪಟವೆ ತಂತುವೆಂದರಿದಡೆ ಸಾಲದೆ?ಕಟಕವ ಮುರಿದು ಕಾಂಚನವ ನೋಡಲದೇಕೆ?ಆ ಕಟಕವೆ ಕಾಂಚನವೆಂದರಿದಡೆ ಸಾಲದೆ?ತನ್ನನಳಿದು ಘನದ ನೋಡಲದೇಕೆ?ತಾನೆ ಘನವೆಂದರಿದಡೆ ಸಾಲದೆ? ಹೇಳಾ!ರಾಮನಾಥ.