ವ ಪದದಿಂದ ಪ್ರಾರಂಭವಾಗುವ ವಚನಗಳು:
ವೇಷವ ಹಲ್ಲಣಿಸುವ ಹಿರಿಯಣ್ಣಂಗೇನು?ವೇಷವ ಹೊತ್ತು ದೋಷದಲ್ಲಿ ನಡೆವ ರಾಶಿಮಾ (ನವ)ವೇಷಗಳ್ಳರ ಕಂಡು ವೇಶಿಯೆಂದ, ರಾಮನಾಥ.
ವೇಷದ ಕೂಡೆ ವಾಸಿಗೆ ಹೋರುವವನು ಈಶ್ವರದ್ರೋಹಿ.ವೇಷವ ಈಶ್ವರನೆಂದು ತಿಳಿಯದವಪಾಶಕ್ಕೆ ಸಿಕ್ಕದ ಪಶುವಿನಂತೆ ಕಾಣ, ರಾಮನಾಥ.
ವೇಷವ ಹೊತ್ತು ದೋಷದಲ್ಲಿ ನಡೆದಡೆದೋಷಕ್ಕೆ ವೇಷ ಭಂಡ.ಮೊದಲೆ ವೇಷವ ಕಂಡು ಲೇಸೆಂದು ಕೊಂಡಾಡುವ ದೋಷಿಗಳನರಕದಲ್ಲಿಕ್ಕುವ ಕಾಣಾ! ರಾಮನಾಥ.
ವೇಷದ ಹೊತ್ತ ಹಿರಿಯರು ಈಶ್ವರಧ್ಯಾನದಲ್ಲಿರಬೇಕು.ವೇಷವ ತೋರಿ ಗ್ರಾಸಕ್ಕಾಗಿ ಆಸೆಮಾಡಿಲೋಗರ ಮನೆಯ ಕಾದುಗ್ರಾಸವ ಪಡೆದು ಉದರವ ಹೊರೆವ ವೇಷವುವೇಶಿಯಿಂದವು ಕರಕಷ್ಟ! ರಾಮನಾಥ.
ವಿಷಯದ ಪಿತ್ತ ತಲೆಗೇರಿದಲ್ಲಿವಿವೇಕವೆಂಬ ದೃಷ್ಟಿ ನಷ್ಟವಾಗಿಪಶುಪತಿಯ ನೆನಹುಗೆಟ್ಟು ಮತಿಮಂದನಾದಲ್ಲಿಮಂತ್ರ ನೆನಹುಂಟೆ! ಹೇಳ! ರಾಮನಾಥ.
ವೇಷಕ್ಕೆ ಅಂಜುವೆ ದೋಷಕ್ಕೆ ಹೇಸುವೆ!ಈಶ್ವರನಾಗಿ ಎನ್ನ ಕೈಯಲ್ಲಿ ತನ್ನ ಆರಾಧಿಸಿಕೊಳಲೊಲ್ಲದೆಹದಿನೆಂಟು ಜಾತಿಯ ಹೇಸಿಕೆಯ ಕೂಳ ತಿಂಬವರನೇನೆಂಬೆನೈ,ರಾಮನಾಥ.
ವೇಷವನೂ ವೇಶಿಯನೂ ಸರಿಯೆಂಬೆ.ವೇಷವು ಲೋಕವ ಹಾರುವದು.ವೇಶಿಯೂ ಲೋಕವ ಹಾರುವಳು.ವೇಷವ ಹೊತ್ತು ಲೋಕವ ಹಾರದಿರ್ದಡೆಆತನ ಈಶ್ವರನೆಂಬೆ ಕಾಣಾ! ರಾಮನಾಥ.
ವೇಶಿಯ ಎಂಜಲ ತಿಂದುಈಶ್ವರಪ್ರಸಾದವ ಭುಂಜಿಸಿದಡೆಓಸರಿಸಿತ್ತಯ್ಯ ಲಿಂಗವು ಆ ದ್ರೋಹಿಗೆ!ಭಾಷೆ ತಪ್ಪುವನು! ಭವದಲ್ಲಿ ಬಳಲುವನೆಂದವನ ಕಂಡುಹೇಸಿ ಕಡೆಗೆ ತೊಲಗಿದೆನು ಕಾಣಾ! ರಾಮನಾಥ.