ಇ ಪದದಿಂದ ಪ್ರಾರಂಭವಾಗುವ ವಚನಗಳು:
ಇಂತೆಂದ ಭೂಮಿಯ; ಇಂತೆಂದ ಗಗನವ.ಇಂತೆಂದ ಸಪ್ತಸಾಗರವ.ಇಂತೀ ಲೋಕದೊಳಗೆ ತಿಂಥಿಣಿಯಾಗಿಪ್ಪಅಚಿಂತನನವರಾರು ಬಲ್ಲರೈ ರಾಮನಾಥ.
ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ.ಸುಳಿದು ಬೀಸುವ ವಾಯು ನಿಮ್ಮ ದಾನ.ನಿಮ್ಮ ದಾನವನುಂಡು ಅನ್ಯರ ಹೊಗಳುವಕುನ್ನಿಗಳನೇನೆಂಬೆ, ರಾಮನಾಥ.
ಇರುಹೆಯ ತೆರನೇನು ನೆರೆ ಛಲವಿಲ್ಲದೆಮಾಡಿದವನ ಭಕ್ತ ಇರುಹೆಯಿಂದ ಕರಕಷ್ಟ ಕಾಣಾ! ರಾಮನಾಥ.
ಇಳೆಯನಾಧಾರ ಮಾಡಿ, ಜಳವ ಜೀವನ ಮಾಡಿಒಳಗಿಪ್ಪ ಭೇದವನುವಾಯುವ ಕಂಬವ ಮಾಡಿ, ನಳನ ಚಂದ್ರಮನ ಮಡಗಿಆಕಾಶವನು ಗಳನೆ ಮುಚ್ಚಿದ ಬೆಳಗಿಗೆಆನು ಬೇಡಿಕೊಂಬೆ, ರಾಮನಾಥ.
ಇಂದಿಂಗೆಂತು ನಾಳಿಂಗೆಂತೆಂದು ಚಿಂತಿಸಲೇಕೆ?ತಂದಿಕ್ಕುವ ಶಿವಂಗೆ ಬಡತನವೆ? ರಾಮನಾಥ.
ಇತ್ತ ಬಾ ಎನ್ನದವನ ಹತ್ತೆ ಹೊದ್ದಲು ಬೇಡ.ಇತ್ತ ಬಾ ಎಂಬ ಸದ್ಭಕ್ತನ ಮನೆಯ ಬಾಗಿಲಹತ್ತಿಪ್ಪೆ ಕಾಣಾ! ರಾಮನಾಥ.