ಜ ಪದದಿಂದ ಪ್ರಾರಂಭವಾಗುವ ವಚನಗಳು:
ಜ್ವರ ಬಡಿದ ಬಾಯಿಗೆ ನೊರೆವಾಲು ಉರಸುವದೆ?ನರಕದಲ್ಲಿ ಬೀಳುವ ಮನುಜರಿಗೆಶಿವಭಕ್ತಿಯೆಂಬುದು ಕಿರುಗಹಿ ಕಾಣಾ! ರಾಮನಾಥ.
ಜ್ವರ ಪೀಡಿಸಿದ ಮನುಜರಿಗೆ ನೊರೆವಾಲು ಸೊಗಸುವದೆ?ಭವಜನ್ಮದಲ್ಲಿ ಬರುವ ಕ್ರೂರಕರ್ಮಿಗಳಿಗೆಶಿವಾಚಾರವ ಹೇಳಿದಡೆಹಗೆಯ ಮಾಡುವರು ಕಾಣಾ! ರಾಮನಾಥ.
ಜಂಬೂದ್ವೀಪವನೆಲ್ಲ ತಿರಿಗಿದಡೇನು?ಜಂಬುಕ ಶಂಭುದ್ಯಾನದಲ್ಲಿ ಸೈವೆರಗಪ್ಪುದೆ?ಕುಂಭಿನಿಯ ತಿರಿಗಿ ಕೋಟಿ ತೀರ್ಥವ ಮಿಂದಡೇನು?ಶಂಭು! ನಿಮ್ಮಲ್ಲಿ ಸ್ವಯವಾಗದವನುಕುಂಭಿನಿಯ ತಿರಿಗಿದ ಡೊಂಬನಂತೆ ಕಾಣಾ!ರಾಮನಾಥ.
ಜಗದೊಳಗಣ ಮನುಜರು ಸೋಗೆಗನಂತಿಪ್ಪರು.ಸೋಗೆಗನಾಡಿಸುವ ಓಜೆ ಬೇರೈ.ಸೋಗೆಗಳನೀಡಾಡಿ ಓಜ ತಾ ಹೋದರೈಸೋಗೆಗ ನುಡಿಯಬಲ್ಲದೆ? ರಾಮನಾಥ.