ಆ ಪದದಿಂದ ಪ್ರಾರಂಭವಾಗುವ ವಚನಗಳು:
ಆಸೆ ಪರಿಣಾಮಕ್ಕೆ ಬೇಸತ್ತು ಹೋಯಿತ್ತು.ಆಶ್ರಯದ ನಿದ್ರೆ ಕೆಟ್ಟಿತ್ತು.ಗ್ರಾಸ ಮೆಲ್ಲನಾಯಿತ್ತು.ಸ್ತ್ರೀಯರ ಮೇಲಣ ಇಚ್ಛೆ ಕೆಟ್ಟಿತ್ತು.ಈಶ್ವರ! ನಿಮ್ಮ ಪಾದಾಂಬುಜ ಸೇವೆಯಿಂದ ಕಾಣಾ!ರಾಮನಾಥ.
ಆದಿ ಆರರ ಭೇದತನುಗುಣ ಮೂವತ್ತಾರ ಮೀರಿತೋರಿದುದ ತೋರಿ ಮತ್ತೆ ಆರೂಢವಾದರೆಮೇಲೆ ನಿನ್ನಿಚ್ಛೆ ಕಾಣಾ! ರಾಮನಾಥ.
ಆಚಾರಸಹಿತವಿದ್ದಡೆ ಗುರುವೆಂಬೆ.ಆಚಾರಸಹಿತವಿದ್ದಡೆ ಲಿಂಗವೆಂಬೆ.ಆಚಾರಸಹಿತವಿದ್ದಡೆ ಜಂಗಮವೆಂಬೆ.ಸದಾಚಾರಸಹಿತವಿರದೆಅನ್ಯದೈವ ಭವಿಮಾಟಕೂಟವ ಮಾಡುವನ ಮನೆಯಲ್ಲಿಲಿಂಗಾರ್ಚನೆಯ ಮಾಡಿದನಾದಡೆನಿಮಗಂದೆ ದೂರವಯ್ಯಾ, ರಾಮನಾಥ.
ಆದಿ ಪ್ರಕೃತಿಯ ಮಕ್ಕಳು ಅಂದಿನವರುಆದಿ ಪ್ರಕೃತಿಯ ಮಕ್ಕಳು ಇಂದಿನವರುಆದಿಪ್ರಕೃತಿಯ ಜೀವ ಪ್ರಕೃತಿಯಭೇದವ ಬಲ್ಲವರ ಪಾದವೆ ಗತಿಯೆನಗೆ ರಾಮನಾಥ.
ಆಡಬಾರದ ಬಯಲುಸೂಡಬಾರದ ಬಯಲುನುಡಿಯಬಾರದ ಬಯಲುಹಿಡಿಯಬಾರದ ಬಯಲುಈ ಒಡಲಿಲ್ಲದ ಬಯಲೊಳಗೆ ಅಡಗಿರ್ದ ಭೇದವಈ ಲೋಕದ ಜಡರೆತ್ತ ಬಲ್ಲರೈ? ರಾಮನಾಥ.