ಭ ಪದದಿಂದ ಪ್ರಾರಂಭವಾಗುವ ವಚನಗಳು:
ಭವಿಯ ಕಳೆದು ಭಕ್ತನಾದ ಬಳಿಕಭವಿ ನಂಟನೆಂದು ಹೊಗಿಸಲಾಗದು.ನಂಟುತನಕ್ಕೆ ಆತ್ಮನಿಚ್ಛೆಗೆ ಅಳುಪಿ ಭವಿಯೊಡನುಂಡಡೆಹಂದಿಯ ಬಾಯ ತುತ್ತ ನಾಯಿ ಸೆಳತಿಂದಂತೆ ಕಾಣಾ!ರಾಮನಾಥ.
ಭಕ್ತನ ಮಠವೆಂದು ಭಕ್ತಹೋದಡೆಆ ಭಕ್ತ ಭಕ್ತಂಗೆ ಅಡಿಯಿಟ್ಟು ಇದಿರೆದ್ದುನಡೆದುಹೊಡೆಗೆಡೆದು ಒಡಗೊಂಡು ಬಂದುವಿಭೂತಿ ಮೀಳ್ಯವನ್ನಿಕ್ಕಿ ಪಾದಾರ್ಚನೆಯಂ ಮಾಡಿಸಿಒಕ್ಕುದಕೊಂಡು ಓಲಾಡುತ್ತಿಪ್ಪುದೆ ಭಕ್ತಿ.ಹೀಂಗಲ್ಲದೆ ಬೆಬ್ಬನೆ ಬೆರತು, ಬಿಬ್ಬನೆ ಬೀಗಿಅಹಂಕಾರಭರಿತನಾಗಿಪ್ಪವನ ಮನೆಯಲಿಂಗಸನುಮತರು ಹೊಗರು ಕಾಣಾ! ರಾಮನಾಥ.
ಭಕ್ತಿಯ ಬಲ್ಲವರು ನಚ್ಚಿ ಮೆಚ್ಚಿ ಮನವನೊಚ್ಚತಗೊಡುವರು.ಭಕ್ತಿಯನರಿಯದ ಬಲುಪಾಪಿ ಜೀವಿಗಳುಕಚ್ಚುವರು ಬಗುಳುವರು, ರಾಮನಾಥ.
ಭವಿಯ ಮನೆಯ ಅನ್ನಸವಿಯಾಯಿತ್ತೆಂಬ ಭಕ್ತಂಗೆ ಭವಿಪಾಕ ನರಕ.ಆಗಳಂತೆ ಭವಿಗೆ ಮಾಡಿದ ಹುಳುಗುಂಡ ಭಕ್ತಂಗಪ್ಪುದು ತಪ್ಪದುಆ ಭವಿಗೆ ಭವಂ ನಾಸ್ತಿ ಕಾಣಾ! ರಾಮನಾಥ.
ಭಂಜಿಸಿಹೆನೆಂದೆಂಬೆ ಹಲಬರುಭಂಜನೆಗೆ ಸಿಲುಕುವವು ಪ್ರಾಣಿಗಳಲ್ಲದೆಲಿಂಗವು ಭಂಜನೆಗೆ ಸಿಲುಕುವನೆ? ತಾತ್ಪರ್ಯಕ್ಕಲ್ಲದೆ.ಆ ಲಿಂಗದೆಂಬಲ ತಿಂದು ವೈಸಿಕವ ಮಾಡಿದಡೆಅದು ನಂಜಾಗಿ ಕಾಡುವದು ಕಾಣಾ! ರಾಮಾನಾಥ.
ಭಕ್ತಿಯ ಬಲ್ಲವರಿಗೆ ಸತ್ಯ ಸದಾಚಾರವ ಹೇಳಿದಡೆನಂಬುವರು, ನಚ್ಚುವರು, ಮಚ್ಚುವರು.ಭಕ್ತಿಯ ಹೊಲಬನರಿಯದ ವ್ಯರ್ಥರಿಗೆಸತ್ಯ ಸದಾಚಾರವ ಹೇಳಿದಡೆಕಚ್ಚುವರು, ಬಗುಳುವರು ಕಾಣಾ! ರಾಮನಾಥ.