ಅಂಗಕ್ಕೆ ಲಿಂಗ, ಮನಕ್ಕೆ ಅರಿವಾಗಬೇಕೆಂದು
ಸಂದೇಹಗೊಂಬುದು ಅರಿವೋ, ಆತ್ಮನೋ ?
ಅಂಗಕ್ಕೆ ಅರಿವೆಂಬುದೊಂದು ಜೀವ,
ಜೀವಕ್ಕೆ ಕೊಡುವುದೊಂದು ಬೆಳಗು.
ತನ್ನಲ್ಲಿ ತೋರುವ ಘಟಬಿಂಬದ bs್ಞಯೆ
ಹಲವು ತೆರನಾದಂತೆ,
ಸ್ಥೂಲಕ್ಕೆ ಸ್ಥೂಲ, ಸೂಕ್ಷ್ಮಕ್ಕೆ ಸೂಕ್ಷ್ಮವಾಗಿ
ಹೆಚ್ಚು ಕುಂದಿಲ್ಲದೆ ತೋರುವ ತೋರಿಕೆ,
ಘಟದ ಗುಣವೋ, ಬಿಂಬದ ಗುಣವೋ ?
ಎಂಬುದ ತಾನರಿತಲ್ಲಿ, ಉಭಯದ ಸೂತಕಕ್ಕೆ ಹೊರಗು.
ಹೊರಗೆಂಬ ಭಾವವ ಅರಿದಲ್ಲಿ,
ಕಾಮಧೂಮ ಧೂಳೇಶ್ವರನೆಲ್ಲಿಯೂ ತಾನೆ.