ಅಥವಾ
(16) (7) (5) (0) (3) (0) (0) (0) (2) (0) (0) (0) (1) (0) ಅಂ (5) ಅಃ (5) (13) (1) (1) (0) (0) (0) (0) (3) (0) (0) (0) (0) (0) (0) (0) (3) (0) (0) (2) (8) (4) (0) (10) (0) (3) (1) (2) (0) (2) (7) (2) (1) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಾತ, ಅಜಾತ, ನಿರ್ಜಾತನೆಂಬುದು ಅದೇತರ ಭಾವ ? ಅದು ತನ್ನ ಭ್ರಾಂತಿನ ಕಲೆ. ಸತ್ತೆನೆಂದು ಹೇಳುತಿಪ್ಪುದೆ ಹೆಣ ? ಆ ನಿಶ್ಚಯವೆಂಬುದು ಹುಟ್ಟುಗೆಟ್ಟಲ್ಲಿ, ಮತ್ತೆ ಬಟ್ಟಬಯಲೆಂಬ ದೃಷ್ಟವಿಲ್ಲ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಜಲದಿಂದ ಮಲವ ತೊಳೆಯಬೇಕೆಂಬಲ್ಲಿ, ಆ ಮಲ ಜಲದ ಸಾರದಿಂದ ಕೆಸರಾದಂತೆ. ಅದು ಉಭಯದ ಕೂಟದಿಂದ ಪಂಕವಾದ ಸಂಚವನರಿಯಬೇಕು. ತಿಳಿದು ನಿಂದಲ್ಲಿ, ಪಂಕವಡಿ ತಾ ಮೇಲಾದ ಶಂಕೆಯನರಿಯಬೇಕು. ಈ ಉಭಯದ ಘನ ಕಿರಿದಿನಲ್ಲಿ, ಮಲವೇತರಿಂದ ಆಯಿತ್ತೆಂಬ ಒಲವರವನರಿದಲ್ಲಿ, ಆತ ಆತ್ಮನ ನೆಲೆಯ ಬಲ್ಲನೆಂಬೆ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಜಾಗ್ರದಲ್ಲಿ ವ್ಯಾಪಾರ, ಸ್ವಪ್ನದಲ್ಲಿ ಕೂಟಸ್ಥ, ಸುಷುಪ್ತಿಯಲ್ಲಿ ಮಗ್ನತೆ ಆಯಿತ್ತೆಂಬುದು ಅದೇನು ಹೇಳಾ. ಸ್ಥೂಲತನುವಿನಲ್ಲಿ ಕೂಟಸ್ಥ, ಸೂಕ್ಷ್ಮತನುವಿನಲ್ಲಿ ಏಕಾರ್ಥ, ಕಾರಣತನುವಿನಲ್ಲಿ ಲೇಪವಾಯಿತ್ತೆಂಬ ಭಾವವದೇನು ನೋಡಾ. ಇಂತೀ ಜೀವಾತ್ಮ ಭಾವಾತ್ಮ ಪರಮಾತ್ಮ. ಇಂತೀ ತ್ರಿವಿಧಾತ್ಮದಲ್ಲಿ ತಿರುಗುವ ಆತ್ಮ ಅದೇನು ಹೇಳಾ. ಮೂರೆಂಬುದು, ಬೇರೊಂದು ಭಾವವೆಂಬುದು, ಅವ ಕೂಡಿ ನಿರ್ಭಾವವೆಂಬುದು, ಆ ಗುಣ ಇದಿರದೋ, ತನ್ನದೋ ? ಎಂಬುದನರಿದು ಮರೆದಲ್ಲಿ, ಕಾಮಧೂಮ ಧೂಳೇಶ್ವರನು ಭಿನ್ನರೂಪನಲ್ಲ.
--------------
ಮಾದಾರ ಧೂಳಯ್ಯ