ಅಥವಾ
(16) (7) (5) (0) (3) (0) (0) (0) (2) (0) (0) (0) (1) (0) ಅಂ (5) ಅಃ (5) (13) (1) (1) (0) (0) (0) (0) (3) (0) (0) (0) (0) (0) (0) (0) (3) (0) (0) (2) (8) (4) (0) (10) (0) (3) (1) (2) (0) (2) (7) (2) (1) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮರದಲ್ಲಿ ಉರಿ ಹುಟ್ಟಿ, ಅಡಗಿ ಸುಡದ ಭೇದವ ಬಲ್ಲಡೆ, ಕಾಯದ ಲಿಂಗದ ಸೂತಕವಿಲ್ಲ. ಕಲ್ಲಿನಲ್ಲಿ ಕಿಡಿ ಹುಟ್ಟಿ, ಅಲ್ಲಿ ಉರಿಯದೆ, ಆಚೆಯಲ್ಲಿ ಸಾಕಾರವ ಮುಟ್ಟಿ ಉರಿವಂತೆ, ಆ ನಿಹಿತವನರಿದಲ್ಲಿ ಪ್ರಾಣಲಿಂಗವೆಂಬ ಮನಸೂತಕವಿಲ್ಲ. ಸೂತಕ ಪ್ರಸೂತಕವಾಗಿ, ಏತಕ್ಕೂ ಒಡಲಿಲ್ಲದಿಪ್ಪುದು, ಅದೇ ಅಜಾತತ್ವ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಮರೀಚಿಕಾಜಲವ ಮೊಗೆದವರುಂಟೆ ? ಸುರಚಾಪವ ಹಿಡಿದು ಎಸೆದವರುಂಟೆ ? ವಾರಿಯ ಮಣಿಗೆ ದಾರವನೇರಿಸಿದವರುಂಟೆ ? ಬಯಲೊಳಗಡಗಿದ ಬ್ರಹ್ಮ, ಶಿಲೆಯೊಳಗಾಡುವ ಸಲೆ ನೆಲೆಯರಿಯದ ಸೂತಕರಿಗೆ ಮಹಾಘನದ ಹೊಲಬೇತಕ್ಕೆ ಕಾಮಧೂಮ ಧೂಳೇಶ್ವರಾ ?
--------------
ಮಾದಾರ ಧೂಳಯ್ಯ
ಮನವಚನಕಾಯ ತ್ರಿಕರಣಶುದ್ಧವಾಗಿ ಭಕ್ತಂಗೆ ಸತ್ಯ, ವಿರಕ್ತಂಗೆ ಜ್ಞಾನವೆಂದು ತತ್ತುಗೊತ್ತನಿಕ್ಕಿ ಹಚ್ಚಿ ಹಾ[ಕಿ]ದಲ್ಲಿ, ಈ ಉಭಯದ ಚಿತ್ತದಲ್ಲಿ ವೇಧಿಸುವ ವಸ್ತು ಆವುದು ? ಭಕ್ತಿಗೂ ಜ್ಞಾನ, ವಿರಕ್ತಿಗೂ ಜ್ಞಾನ. ಅದು ತನ್ನ ಬೆಳಗಿನಲ್ಲಿ ತನ್ನ ಕಾಣಿಸಿಕೊಂಬಂತೆ ಆ ಗುಣ ಉಭಯಭಿನ್ನವಿಲ್ಲ. ಕಾಮಧೂಮ ಧೂಳೇಶ್ವರನೆಂಬುದಕ್ಕೆ ಎಡೆದೆರಪಿಲ್ಲ.
--------------
ಮಾದಾರ ಧೂಳಯ್ಯ