ಅಥವಾ
(16) (7) (5) (0) (3) (0) (0) (0) (2) (0) (0) (0) (1) (0) ಅಂ (5) ಅಃ (5) (13) (1) (1) (0) (0) (0) (0) (3) (0) (0) (0) (0) (0) (0) (0) (3) (0) (0) (2) (8) (4) (0) (10) (0) (3) (1) (2) (0) (2) (7) (2) (1) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪೂಜೆ ಪುಣ್ಯಕ್ಕೆ ಒಡಲು, ಜ್ಞಾನ ಶೂನ್ಯಕ್ಕೆ ಒಡಲು. ಉಂಟು, ಇಲ್ಲ ಎಂಬುದು ಸಂದೇಹಕ್ಕೆ ಒಡಲು. ಇಂತೀ ಒಡಲಳಿದು, ಕೊಡುವ ಕೊಂಬ ಎಡೆಯಾಟ ನಿಂದು, ಜಿಡ್ಡೆಂಬ ಜಿಗುಡು ಹರಿದು, ಶೂನ್ಯವೆಂಬ ಸುಳುಹು ಸತ್ತು, ಮತ್ತಾವುದೂ ಕಲೆದೋರದೆ ನಿಂದ ನಿಜ, ತಾನು ತಾನೆ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಪೃಥ್ವಿ ಅಪ್ಪು ತೇಜ ವಾಯು ಆಕಾಶಂಗಳ ಕಲ್ಪಿಸಿದಾತ, ಒಬ್ಬ ವಸ್ತು ಎಂದಲ್ಲಿ, ಆ ಕಲ್ಪನೆಗೆ ಆ ವಸ್ತು ತೀತವೋ, ಅತೀತವೋ ? ಆ ಪಂಚಭೂತಿಕಕ್ಕೆ ಆ ವಸ್ತು ಒಳಗೋ, ಹೊರಗೋ ? ಒಳಗೆಂದಲ್ಲಿ ಆ ಭಾವಕ್ಕೆ ಭ್ರಮೆ, ಹೊರಗೆಂದಲ್ಲಿ ಉಭಯದ ಶಂಕೆ ನಿಜಯೆಂತಿದ್ದಿತ್ತು, ಅರಿವ ಆತ್ಮನಂತೆಯಿದ್ದಿತ್ತು. ಉಭಯದ ಕಾಂತಿ ಅಡಗಿದಲ್ಲಿ, ಕಾಮಧೂಮ ಧೂಳೇಶ್ವರನ ಲಕ್ಷ್ಯ ನಿರ್ಲಕ್ಷ್ಯವಾಗಿತ್ತು.
--------------
ಮಾದಾರ ಧೂಳಯ್ಯ
ಪಂಚೇಂದ್ರಿಯಂಗಳಲ್ಲಿ ಒಂದರ ಗುಣವ ಒಂದರಿಯದಿರೆ, ಹಿಂಗಿ ಲಿಂಗಕ್ಕರ್ಪಿತವಾದ ಮುಖವಿನ್ನೆಂತೊ ? ತದ್ಭಾವಂಗಳ ತದ್ಭಾವದಿಂದಲ್ಲದೆ ಅರಿಯಬಾರದು. ಕೊಡುವ ಅಂಗಭೇದ ಹಲವಲ್ಲದೆ ಅರಿವಾತ್ಮ ಒಂದೆ ಭೇದ. ತಾ ತನ್ನ ಮರೆದಲ್ಲಿ ಮರಣ, ತಾ ತನ್ನನರಿದಲ್ಲಿ ಜನನ. ನಾ ನೀನೆಂಬ ಭಾವದ ಭ್ರಮೆ ಹರಿದಲ್ಲಿ, ತಟ್ಟುವ ಮುಟ್ಟುವ ಕೃತ್ಯದ ಸೂತಕ ಇತ್ತಲೆ ಉಳಿಯಿತ್ತು. ಕಾಮಧೂಮ ಧೂಳೇಶ್ವರನತ್ತಲೈದಾನೆ.
--------------
ಮಾದಾರ ಧೂಳಯ್ಯ
ಪೂಜಿಸಿಕೊಂಬುದು, ಪೂಜಿಸಿಹೆನೆಂಬುದು, ಉಭಯದ ಸೂತಕವುಳ್ಳನ್ನಕ್ಕ ಪರಿಪೂರ್ಣ ಜ್ಞಾನವುಂಟೆ ? ನಾನೆಂಬನ್ನಕ್ಕ ವಿಚಾರಿಸಿಕೊಂಡು, ನೀನೆಂಬನ್ನಕ್ಕ ಪರಿಪೂರ್ಣವಸ್ತುವೆಂಬುದುಂಟೆ ? ಕಾಯದ ಸುಳುಹು ನಿಂದು, ಜೀವನ ಪ್ರಕೃತಿ ಹಿಂಗಿ ಮೇಲೊಂದ ಕಂಡೆಹೆನೆಂಬುದು ಜೀವನಲ್ಲದೆ ಪರಮನಲ್ಲ. ಕಂಡೆಹೆನೆಂಬುದೆ ಜೀವ, ಕಾಣಿಸಿಕೊಂಡೆಹೆನೆಂಬುದೆ ವಸ್ತು. ಉಭಯಶೂನ್ಯವಾಗಿ ನಿಂದುದು, ಕಾಮಧೂಮ ಧೂಳೇಶ್ವರನೆಂಬುದು ತಾನೆ.
--------------
ಮಾದಾರ ಧೂಳಯ್ಯ