ಅಥವಾ
(16) (7) (5) (0) (3) (0) (0) (0) (2) (0) (0) (0) (1) (0) ಅಂ (5) ಅಃ (5) (13) (1) (1) (0) (0) (0) (0) (3) (0) (0) (0) (0) (0) (0) (0) (3) (0) (0) (2) (8) (4) (0) (10) (0) (3) (1) (2) (0) (2) (7) (2) (1) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉತ್ಪತ್ಯ ಪಿಂಡವೆಲ್ಲಕ್ಕೂ ಜನನವೊಂದೆ ಭೇದ. ಲಯವಹ ಘಟಕ್ಕೆ ಹಲವು ತೆರನುಂಟು. ಹಲವು ತೆರದ ಲಯವ ಬಲ್ಲಡೆ, ಬೇರೊಂದು ಕುಲಹೊಲೆಸೂತಕವೆಂಬುದುಂಟೆ ? ಬಂದ ಯೋನಿಯ ಹೊಂದುವ ಘಟದ ಉಭಯಸಂಧಿಯಲ್ಲಿ ಸಿಕ್ಕದೆ, ನಿಂದ ನಿಜವೆ ತಾನಾದವಂಗೆ ಬೇರೊಂದು ಇಲ್ಲಾ ಎಂದೆ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಉಂಟೆಂಬಲ್ಲಿಯೆ ಜ್ಞಾನಕ್ಕೆ ದೂರ. ಇಲ್ಲಾ ಎಂಬಲ್ಲಿಯೆ ಸಮಯಕ್ಕೆ ದೂರ. ತನುವಿಗೆ ಬಂದ ಪ್ರಾಪ್ತಿಯ ಅನುಭವಿಸುವುದಕ್ಕೆ ಒಡಲಾಯಿತ್ತು. ಪ್ರಾಪ್ತಿಯನುಂಬುದು ಘಟವೋ, ಆತ್ಮನೋ ? ಒಂದನಹುದು, ಒಂದನಲ್ಲಾ ಎನಬಾರದು. ಇಲ್ಲಾ ಎಂದಡೆ ಕ್ರೀವಂತರಿಗೆ ಭಿನ್ನ. ಅಹುದೆಂದಡೆ ಅರಿದಾತಂಗೆ ವಿರೋಧ. ತೆರಪಿಲ್ಲದ ಘನವ ಉಪಮಿಸಲಿಲ್ಲ. ಕಾಮಧೂಮ ಧೂಳೇಶ್ವರನ ಮುಂದೆ ಹೋಗಲಿಲ್ಲ, ಹಿಂದೆ ಉಳಿಯಲಿಲ್ಲ.
--------------
ಮಾದಾರ ಧೂಳಯ್ಯ
ಉಂಡು ಉಪವಾಸಿಯಾದನಾಗಿ, ಬಳಸಿ ಬ್ರಹ್ಮಚಾರಿಯಾದನಾಗಿ, ಕಂಡೂ ಕಾಣದಂತೆ ಇದ್ದನಾಗಿ. ಅಂಗವೆಂಬ ಭಾವ, ಲಿಂಗವೆಂಬ ಕುರುಹು, ನಿರಂಗವೆಂಬ ಅರಿವು, ತ್ರಿವಿಧದ ಕುರುಹು ಅಲ್ಲಿಯೆ ಅಡಗಿತ್ತು. ಉರಿಯ ತುದಿಯ ಕರ್ಪುರದಂತೆ, ಅಡಗಿದ ಭೇದವ ಸಡಗರಿಸಿದಲ್ಲಿ, ಕಾಮಧೂಮ ಧೂಳೇಶ್ವರನೆಂಬ ಭಾವ ಕಲ್ಪಿತವಿಲ್ಲ.
--------------
ಮಾದಾರ ಧೂಳಯ್ಯ