ಅಥವಾ
(16) (7) (5) (0) (3) (0) (0) (0) (2) (0) (0) (0) (1) (0) ಅಂ (5) ಅಃ (5) (13) (1) (1) (0) (0) (0) (0) (3) (0) (0) (0) (0) (0) (0) (0) (3) (0) (0) (2) (8) (4) (0) (10) (0) (3) (1) (2) (0) (2) (7) (2) (1) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಷ್ಟಗುಟ್ಟೆಂಬುದು, ನಿಶ್ಚಯ ವಸ್ತುವೆಂಬುದು, ಆತ್ಮನೇಕವೆಂಬುದು, ಇಂದ್ರಿಯಂಗಳು ಹಲವೆಂಬುದು, ಅರಿವು ಹಿಂಗಲಿಕೆ ಒಂದೆಂಬುದು, ಅಣೋರಣೀಯಾನ್ಮಹತೋ ಮಹೀಯಾನ್ ಎಂಬುದು, ಎಲ್ಲಾ ದೃಷ್ಟದ ಲಕ್ಷದಲ್ಲಿ ಉಂಟೆಂಬುದು, ಉಭಯಭಾವದಲ್ಲಿ ತೋರಿ ಹರಿದಾಡುವುದು, ಅದು ಚಿತ್ತೋ, ಚಿದಾದಿತ್ಯನೋ, ವಸ್ತು ಭಾವವೋ ? ಇಂತೀ ಲಕ್ಷ ಅಲಕ್ಷಂಗಳೆಂಬ ಗೊತ್ತ ಮೆಟ್ಟಿ, ಬಟ್ಟಬಯಲಾದ ಕಾಮಧೂಮ ಧೂಳೇಶ್ವರನೊಳಗಾದೆ, ಆಗೆನೆಂಬ ಭಾವ ನಿಂದಲ್ಲಿ.
--------------
ಮಾದಾರ ಧೂಳಯ್ಯ
ಇಂತಿವನೆಲ್ಲವನರಿತು, ಕ್ರೀಯೊಳಗೆ ನೀನಿದ್ದಿಹೆಯೆಂಬ ತೊಳಲಿಕೆಯೇಕೆ ಬಿಡದು ? ನಾ ನೀನೆಂಬ ಸಂದೇಹ ಅದೇನು ಹೇಳಾ ? ಹಾಂಗೆಂಬ ಕುರುಹು ಅರಿತು, ಅರಿವು ನಷ್ಟವಾಗಿ, ಕುರುಹೆಂಬ ನಾಮ ನಿರ್ನಾಮವಾಯಿತ್ತು, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಇಷ್ಟದಲ್ಲಿ ಲಕ್ಷಿಸಿ ನೋಡಿಹೆನೆಂಬುದು, ಭಾವದಲ್ಲಿ ಭ್ರಮೆಯಳಿದು ಕಂಡೆಹೆನೆಂಬುದು, ಭೂತ ಭವಿಷ್ಯದ್ವರ್ತಮಾನಂಗಳ ನಿರಾಕರಿಸಿ ಕಂಡೆಹೆನೆಂಬುದು ಅದೇತರ ಚಿಹ್ನ ? ಈ ತೆರದ ಭೇದಂಗಳಲ್ಲಿ ದೃಕ್ಕಿನ ಸೂತ್ರದ ಬೊಂಬೆಯಂತೆ, ತಾ ಕಂಡು ತನ್ನ ಕಾಣಿಸಿಕೊಂಬಂತೆ, ಇದಿರ ದೃಶ್ಯಕ್ಕೆ ತಾನೊಳಗಾಗಿ, ತನ್ನ ದೃಶ್ಯ ತನ್ನೊಳಗಾದ ಮತ್ತೆ ಅನ್ಯಭಿನ್ನವೆಂಬ ಉಭಯವಡಗಿತ್ತು, ಕಾಮಧೂಮ ಧೂಳೇಶ್ವರನಲ್ಲಿ.
--------------
ಮಾದಾರ ಧೂಳಯ್ಯ
ಇಷ್ಟಾರ್ಥವ ಬಯಸಿ, ಮುಟ್ಟಿ ಪೂಜಿಸುವಲ್ಲಿ, ಬ್ರಹ್ಮನ ಉತ್ಪತ್ಯಕ್ಕೆ ಒಳಗು, ಮಾಡಿ ನೀಡಿ ಕೊಟ್ಟೆಹೆನೆಂಬುದೆಲ್ಲ, ವಿಷ್ಣುವಿನ ಆಗುಚೇಗೆಗೆ ಒಳಗು. ಅರ್ಚನೆ ಪೂಜನೆಯಿಂದ ಕೃತ್ಯ ತಪ್ಪದೆ ಮಾಡಿಹೆನೆಂಬುದೆಲ್ಲ, ರುದ್ರನ ಗಿರಿಯ ತಪ್ಪಲಿನೊಳಗು. ತಪ್ಪಲ ಕಾಯ್ದು ಸಾಯದ ಮುನ್ನವೆ ನಿಶ್ಚಯಿಸಿಕೊಳ್ಳಿ, ಕಾಮಧೂಮ ಧೂಳೇಶ್ವರನನರಿಯಬಲ್ಲಡೆ.
--------------
ಮಾದಾರ ಧೂಳಯ್ಯ
ಇಂದ್ರಿಯಂಗಳ ಹಿಂಗಿ ನೋಡಿಹೆನೆಂಬ ಎಡೆಯಲ್ಲಿ, ಇಂದ್ರಿಯಂಗಳ ಕೂಡಿ, ಸನ್ಮತನಾಗಿ ನಿಂದು ನೋಡಿಹೆನೆಂದಡೆ, ತಿಲ ತೈಲದಂತೆ ಅಂಗವಳಿದು, ಆ ತಿಲದ ಬಿಂದು ದ್ವಂದ್ವವಳಿದು, ಈಚೆಯಲ್ಲಿ ಬಂದು ನಿಂದಲ್ಲಿ, ಅಂಗದ ಕರ್ಮ, ಇಂದ್ರಿಯಂಗಳ ಸಂದು, ಆತ್ಮನ ಸಂದೇಹದ ಗುಣವೆಂಬೀ ಭೇದವ ತಿಳಿದಲ್ಲಿ, ಕಾಮಧೂಮ ಧೂಳೇಶ್ವರನು ನಿರಂಗದ ಭಾವ.
--------------
ಮಾದಾರ ಧೂಳಯ್ಯ