ಅಥವಾ
(16) (7) (5) (0) (3) (0) (0) (0) (2) (0) (0) (0) (1) (0) ಅಂ (5) ಅಃ (5) (13) (1) (1) (0) (0) (0) (0) (3) (0) (0) (0) (0) (0) (0) (0) (3) (0) (0) (2) (8) (4) (0) (10) (0) (3) (1) (2) (0) (2) (7) (2) (1) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶಂಕೆಯ ಹರಿದು ನುಡಿದೆಹೆನೆಂದಡೆ ಸಕಲಗುಣಂಗಳ ಸಂಕೇತದಲ್ಲಿದ್ದೆಹೆನೆ ? ಆತ್ಮನ ಬಿಂಕವ ಹರಿದೆಹೆನೆಂದಡೆ ಚಲುರ್ವಿಧಫಲಪದದ ಅಂಕದಲ್ಲಿ ಸಿಕ್ಕಿ ಇದ್ದೆಹೆನೆ ? ಶಂಕೆಯ ಸೂತಕ ಇನ್ನೆಂದಿಗೆ ಹರಿವುದು, ಕಾಮಧೂಮ ಧೂಳೇಶ್ವರಾ ?
--------------
ಮಾದಾರ ಧೂಳಯ್ಯ
ಶರೀರದ ಮಧ್ಯದಲ್ಲಿ ನಿರವಯವಪ್ಪ ಆತ್ಮ, ಸುಖದುಃಖಗಳಲ್ಲಿ ಅನುಭವಿಸುವುದು, ಅರಿವೋ ? ಆತ್ಮನೋ? ಬೇರಿಪ್ಪುದೊಂದು ಕುರುಹೋ? ಅರಿದಡೆ ಕುರುಹೆಂಬುದೊಂದು ತೆರನಿಲ್ಲ. ಶಿಲೆಯಿಂದ ಹಲವು ರೂಪು ಮಾಡಿ, ತಮ್ಮ ತಮ್ಮ ಒಲವರಕ್ಕೆ ಬಲುಹೆಂಬುದು ಶಿಲೆಯೋ ? ಮನವೋ ? ಈ ಹೊಲಬನರಿತಲ್ಲಿ, ವಿಶ್ವರೂಪಂಗೆ ನೆಲೆ ಹೊಲೆ ಕುಲ ಛಲ ಭಾವ ಭ್ರಮೆ ಮತ್ತೇನೂ ಇಲ್ಲ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ