ಅಥವಾ
(16) (7) (5) (0) (3) (0) (0) (0) (2) (0) (0) (0) (1) (0) ಅಂ (5) ಅಃ (5) (13) (1) (1) (0) (0) (0) (0) (3) (0) (0) (0) (0) (0) (0) (0) (3) (0) (0) (2) (8) (4) (0) (10) (0) (3) (1) (2) (0) (2) (7) (2) (1) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎನ್ನ ತನುವ ನಿರ್ಮಲ ಮಾಡಿದನಯ್ಯಾ, ಬಸವಣ್ಣನು. ಎನ್ನ ಮನವ ನಿರ್ಮಲ ಮಾಡಿದನಯ್ಯಾ, ಚೆನ್ನಬಸವಣ್ಣನು. ಎನ್ನ ಪ್ರಾಣವ ನಿರ್ಮಲ ಮಾಡಿದನಯ್ಯಾ, ಪ್ರಭುದೇವರು. ಇಂತೆನ್ನ ತನುಮನಪ್ರಾಣವ ನಿರ್ಮಲ ಮಾಡಿ, ತಮ್ಮೊಳಿಂಬಿಟ್ಟುಕೊಂಡ ಕಾರಣ, ಕಾಮಧೂಮ ಧೂಳೇಶ್ವರಾ ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಮಾದಾರ ಧೂಳಯ್ಯ
ಎಸಳು ಬಿಟ್ಟು, ಕುಸುಮ ಉದುರಿ, ನಸುಫಲ ನಿಂದಲ್ಲಿ, ಹಣ್ಣಿನ ಎಸಕದ ರಸ ಎಲ್ಲಿ ಇದ್ದಿತ್ತು ? ಆ ವೃಕ್ಷದ ಬೇರಿನ ಸಾರದಲ್ಲಿ ಇದ್ದಿತ್ತು. ಬೇರಿನ ಸಾರ ಒಣಗೆ, ಹಣ್ಣಿನ ಸಾರ ಅಲ್ಲಿಯೆ ಅಡಗಿತ್ತು. ಆ ಗುಣವ ನೀ ತಿಳಿ, ಕಾಮಧೂಮ ಧೂಳೇಶ್ವರನಲ್ಲಿಯೆ.
--------------
ಮಾದಾರ ಧೂಳಯ್ಯ