ಓ ಪದದಿಂದ ಪ್ರಾರಂಭವಾಗುವ ವಚನಗಳು:
ಓಗರವಿಲ್ಲದಿರ್ದಡೆ ಓಂ ನಮಃ ಶಿವಾಯ ಎಂಬ ನುಡಿಯಿಲ್ಲ.ಕಾಮವಿಲ್ಲದಿರ್ದಡೆ ಪ್ರೇಮವಿಲ್ಲ.ಭೂಮಿಯಿಲ್ಲದಿರ್ದಡೆ ಜೀವನಿಗೆ ಜನ್ಮವಿಲ್ಲ.ಇದ ಮಹಾಮಹಿಮರು ಬಲ್ಲರಲ್ಲದೆ ಮಹಿಮರರಿಯರು.ಕಾಮಧೂಮ ಧೂಳೇಶ್ವರಲಿಂಗದ ಶರಣರ ಕಂಡೆ,ಬಲ್ಲೆನೆಂಬವರಂತಿರಲಿ.