ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಊರದ ಚೇಳಿನ ಏರದ ಬೇನೆಯಲ್ಲಿ, ಮೂರುಲೋಕವೆಲ್ಲಾ ನರಳಿತ್ತು ! ಹುಟ್ಟದ ಗಿಡುವಿನ ಬಿಟ್ಟ ಎಲೆಯ ತಂದು ಮುಟ್ಟದೆ ಹೂಸಲು; ಮಾಬುದು_ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಊರಿಗೆ ಹೋಗುವ ದಾರಿಯಲ್ಲಿ ಉರಗನ ಕಂಡೆನಯ್ಯ. ಆ ಉರಗನು ಮೂರು ಲೋಕವನ್ನೆಲ್ಲಾ ನುಂಗಿ ವಿಷವನುಗುಳುತಿಪ್ಪುದು ನೋಡಾ. ಆ ವಿಷವ ಕೆಡಿಸಿ, ಉರಗನ ಕೊಂದು, ಊರಿಗೆ ಹೋಗುವ ಹಿರಿಯರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರೊಂದೆಸೆ, ಕಾಡೊಂದೆಸೆ. ನರರೊಂದೆಸೆ, ಸುರರೊಂದೆಸೆ, ಹಗಲೊಂದೆಸೆ, ಇರುಳೊಂದೆಸೆ. ಪುಣ್ಯವೊಂದೆಸೆ, ಪಾಪವೊಂದೆಸೆ. ಜ್ಞಾನವೊಂದೆಸೆ, ಅಜ್ಞಾನವೊಂದೆಸೆ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮಶರಣರೊಂದೆಸೆ, ಲೋಕವೊಂದೆಸೆ.
--------------
ಸ್ವತಂತ್ರ ಸಿದ್ಧಲಿಂಗ
ಊರವಂಕದ ಹೊರಗಿದ್ದು, ಮನೆಯ ಬಾಗಿಲ ಕಾಣೆನೆಂದು ಅರಸುವನಂತೆ, ಇದಿರಿನಲ್ಲಿ ತೋರುವ ಕುರುಹ ಮರದು ಅರಿವನೊಳಕೊಂಡೆನೆಂಬುವನಂತೆ, ಜಂಬುಕ ಶಸ್ತ್ರದ ಫಳವ ನುಂಗಿ ಜಂಬೂದ್ವೀಪವೆಲ್ಲಾ ಪ್ರಳಯವಾಯಿತ್ತು ಎಂದಡೆ, ಅದು ಚಂದವೇ ಜಾಂಬೇಶ್ವರಾ.
--------------
ರಾಯಸದ ಮಂಚಣ್ಣ
ಊರ ಹೊರಗೊಂದು ಹೊಸ ಕೇಲನಿಕ್ಕಿದೆ. ಅದು ದಾನವರ ಕೇಲಲ್ಲ, ಮಾನವರ ಕೇಲಲ್ಲ, ಆತುರವೈರಿ ಮಾರೇಶ್ವರನ ಹೊಂದಿಕೆಯ ಕೇಲು.
--------------
ನಗೆಯ ಮಾರಿತಂದೆ
ಊರೊಳಗೆ ಆಡುವ ಹಕ್ಕಿಯ ಕಂಡೆನಯ್ಯ. ಮೇರುವೆಯ ಮೇಲೆ ಕುಳಿತಿರುವ ಕಪ್ಪೆಯ ಕಂಡೆನಯ್ಯ. ಆ ಕಪ್ಪೆಗೆ ಧ್ವನಿಯಿಲ್ಲಾ ನೋಡಾ, ಆ ಹಕ್ಕಿಗೆ ಗರಿಯಿಲ್ಲ ನೋಡಾ! ಹಕ್ಕಿಗೆ ಗರಿ ಬಂದಲ್ಲದೆ, ಕಪ್ಪೆಗೆ ಧ್ವನಿ ಬಂದಲ್ಲದೆ ತಾನಾರು ಎಂಬುದು ಕಾಣಿಸದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರೊಳಗಣ ಮಾನವನು ಮೇರುವೆಯೊಳಗಣ ಸೂಳೆಯ ಸಂಗವ ಮಾಡಲು ಆ ಸೂಳೆಯ ಬಸುರಲ್ಲಿ ಪಂಚಮುಖದ ಬಾಲಕ ಹುಟ್ಟಿ, ನಿರವಯವೆಂಬ ಕರಸ್ಥಲದ ಮೇಲೆ ನಿಂದು ರಾಜಿಸುತಿರ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರೊಳಗಿನ ಬೆಂಕಿ ಅಬ್ಬರಿಸಿ ಆವರಿಸಿದಲ್ಲಿ ಒಬ್ಬರೂ ಮುಖವಂತರಿಲ್ಲ ನೋಡಾ. ಊರಡವಿವೊಂದಾಗಿ ಉರಿಯುತ್ತಿರಲು ವ್ಯಾಘ್ರನ ಪ್ರಾಯವಳಿಯದು ನೋಡಾ. ಮೂರು ದೊರೆಗಳು ಮುಂತಾದ ಸಕಲರ ಸಂಬಂಧವ ನೋಡಾ. ಇದನೊಂದು ಮುಖದಲ್ಲಿ ನೋಡಲು ಹೊರಗಣ ಬೆಂಕಿ ಒಳಗೆದ್ದು ಉರಿವಲ್ಲಿ ಹೊಳಪಗೆಡಿಸಿ ಒಳಹೊರಗೆ ತಾನಲ್ಲದೆ ನೆಳಲಿಲ್ಲದ ಸುಖರೂಪ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಊರೊಳಗೆ ಒಬ್ಬ ಮಾನವನ ಕಂಡೆನಯ್ಯ, ಆ ಮಾನವನ ಕೈಯೊಳಗೆ ಒಂದು ರತ್ನವಿಪ್ಪುದ ಕಂಡೆನಯ್ಯ. ಮೇಲಿಂದ ಸತಿಯಳು ಕಂಡು, ಆ ರತ್ನವ ತಕ್ಕೊಂಡು, ಊರ ಮುಂದಳ ಗುಡಿಯಲ್ಲಿ ಆ ಮಾನವನ ಬಯಲುನುಂಗಿ, ಆ ರತ್ನವ ನಿರ್ವಯಲು ನುಂಗಿ ಆ ಸತಿಯಳು ಅಡಗಿದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭವೆ.
--------------
ಜಕ್ಕಣಯ್ಯ
ಊರೆಂಬುದರಿಯ ಉಲುವೆಂಬುದರಿಯ ಬರಿಯ ಮಾತಿನ ಬಣ್ಣವನರಿಯದ ಸಿರಿಸಂಪದದೊಳಾನಂದ ತಲೆಗೇರಿ ಜಾತಿ ಗೋತ್ರ ಕುಲಾಶ್ರಮ ವರ್ಣ ನಾಮಂಗಳೆನುಯೇನೆಂಬ ಭಾವವ ಮರೆದಿರ್ದನು ಗುರುನಿರಂಜನ ಚನ್ನಬಸವಲಿಂಗ ತಾನಾದ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಊಧ್ರ್ವಮುಖದಲ್ಲಿಯೈದಿದ ವಿಹಂಗ, ಅಧೋಮುಖದಲ್ಲಿ ಧರೆಯ ನೋಡಿ, ತಾನಡರುವ ತೆರನ ಕಾಬಂತೆ, ತುರೀಯದಲ್ಲಿಯೈದಿ, ತೂರ್ಯಾತೀತದಲ್ಲಿ ನೋಡಿ, ತತ್ವದಲ್ಲಿ, ನಿಶ್ಚಯವ ಮಾಡಬೇಕು, ಇಷ್ಟಲಿಂಗವ. ಆ ಇಷ್ಟ ನಿಶ್ಚಯದ ನಿಜತತ್ವದಲ್ಲಿ ಆಶ್ರಯಿಸಿ, ಬಚ್ಚಬಯಲಾಗಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಊರಲ್ಲಿರುವ ವಸ್ತು ಅದೆ ನೋಡಯ್ಯಾ. ವನದಲ್ಲಿರುವ ವಸ್ತು ಅದೆ ನೋಡಯ್ಯಾ. ಚರಿಸಿ ಚರಿಸಿ ಜಗವನುದ್ಧರಿಸುವ ವಸ್ತು ಅದೆ ನೋಡಯ್ಯಾ. ಮೂಲೋಕದೆರೆಯ ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಪರವಸ್ತು ಅದೆ ನೋಡಯ್ಯಾ
--------------
ಸಿದ್ಧರಾಮೇಶ್ವರ
ಊರೊಳಗಣ ಹೊಲೆಯ, ಊರ ಹೊರಗಣ ಕುಲಜ. ಇವರಲ್ಲಿ ಆರು ಹಿರಿ[ಯರೆಂಬುದ] ಬಲ್ಲಡೆ ಲಿಂಗಪ್ರಾಣಸಂಬಂಧಿಯೆಂಬೆ. ಅರಿಯದಿರ್ದಡೆ ಪ್ರಾಣಲಿಂಗಸಂಬಂಧಿಯೆಂಬೆ. ಇಂತೀ ಉಭಯವನರಿದ ಶರಣ ಸರ್ವಾಂಗಲಿಂಗಸಂಬಂಧಿ. ಆತಂಗೆ ತತ್ತುಗೊತ್ತಿಲ್ಲ, ಇಷ್ಟ ಪ್ರಾಣವೆಂಬ ಗುತ್ತಗೆಯವನಲ್ಲ. ಕರ್ಪುರ ಉರಿ ಉಭಯರೂಪು ತನ್ಮಯವಾದಂತೆ ಕಮಠೇಶ್ವರಲಿಂಗದಲ್ಲಿ ಸದಾಸನ್ನದ್ಭನಾದ ಶರಣನು.
--------------
ಬಾಲಸಂಗಣ್ಣ
ಊರಿನ ಹಾದಿಯಲ್ಲಿ ಹೋಗುತ್ತಿರಲಾಗಿ, ಎಯ್ದಿ ಬಂದಿತ್ತೊಂದು ಹಾವು. ಆರೂ ಇಲ್ಲದ ಠಾವಿನಲ್ಲಿ ಅದ ಮೀರಿ ಹೋಗಲಂಜಿದೆ. ಓಡಿದಡಟ್ಟಿತ್ತು ಮೀರಿ ನಿಂದಡೆ ಕಚ್ಚಿತ್ತು. ಗಾರಾದೆನಯ್ಯಾ ಈ ಹಾವ ಕಂಡು. ಹೋಗಲಿಲ್ಲ ನಿಲ್ಲಲಿಲ್ಲ, ಇದಕ್ಕಾರದೆ ಮೀರಿ ಹಿಡಿದ ಹಾವು ನಟ್ಟನಡುವೆ ಹಿಡಿಗೊಳಗಾಗಿ ಕಚ್ಚಿತ್ತು. [ಆ] ಹಾ[ವಿಗೆ] ತಲೆಯಿದ್ದಂತೆ ಬಾಲದಲ್ಲಿ [ವಿಷ]. ಬಾಲದ ವಿಷ ತಾಗಿ, ಊರೆಲ್ಲರೂ ಸತ್ತರು. ನಾ ಬದುಕಿದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಊರೆಲ್ಲರೂ ಕೂಡಿ, ಬೇಟೆಗೆ ಹೋಗಿ, ಹಾರುವನ ಕೊಂದರು. ತಲೆವುಳಿದು, ಕಾಲ ಕಂಡಿಸಿ, ಕರುಳಡಗಿತ್ತು. ಬೇಟೆ ಬೆಲೆಯಾದುದಿಲ್ಲ. ಕೇಳುವ ಬನ್ನಿ, ಅರ್ಕೇಶ್ವರಲಿಂಗವ.
--------------
ಮಧುವಯ್ಯ

ಇನ್ನಷ್ಟು ...
-->