ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಠಕ್ಕುರಂಗೆ ವಾಚಕ, ಭೂಪತಿಗೆ ದೆಸೆ, ಅಜಾತಂಗೆ ನಿಶ್ಚಯ, ನೇಮಂಗೆ ಖಂಡಿತಭಾವ ನಿರ್ಧರವಾಗಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಠಕ್ಕನ ಠಕ್ಕಿಪ ತೆರನನು ಚದುರೆ ಚದುರಿಸದೆ ನೀನುಸುರಾ ಸತ್ಯವ, ಜಪಿಸಲು ಸಿಕ್ಕುವನಲ್ಲನು, ಸತ್ಯ ಸತ್ಯವು ಕೇಳಾ ಕೆಳದಿ. ಅವನುಂಬಲ್ಲಿ ಉಡುವಲ್ಲಿ ನೇಹವ ಬೆರಸಲು ಸಿಕ್ಕುವ, ಬಿಡದಿರು ಉರಿಲಿಂಗದೇವನ.
--------------
ಉರಿಲಿಂಗದೇವ
ಠಾವಿಲ್ಲ, ಆ ಠಾವಿಂಗೆ ಆ ಠಾವೆ ಮೂಲವಾಯಿತ್ತು. ಮೂಲವಡಗಿದ ರೂಪಿಂಗೆ ಮುಕ್ತಳಾದೆನು. ಮುನ್ನಲೊಂದು ಸುಖವ ಕಂಡು ಮೂಲಾಧಾರ ರೂಪವರಿ. ಎನಗೆ ಪ್ರಣವ ಸ್ವರೂಪೇ ಸಾಧ್ಯವಾಯಿತ್ತು. ನಾನು ಹೆಣ್ಣು ರೂಪವಳಿದು ಮುಕ್ತ್ಯಂಗನೆಯಾದೆನಯ್ಯ ಸಂಗಯ್ಯ.
--------------
ನೀಲಮ್ಮ

-->