ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಡಂಭಕರೊಂದು ಲಿಂಗವ ಕೊಂಡು ಮಂಡಲದೊಳಗಾಡುವರಯ್ಯಾ. ಒಡೆಯನ ಪೂಜೆಯ ಮಾಡುವರಯ್ಯಾ. ಹೊತ್ತಾರೆದ್ದು ಕ್ಷೇತ್ರ ಮನೆಕೆಲಸವ ಮುಂದಿಟ್ಟು, ಒಂದೊಂದು ಕುರುಹ ಮುಂದಿಟ್ಟು ಸಂದ್ಥಿಸಿ ಮಾಡಿಕೊಂಬ ಬಂಧಮೋಹಿಗಳ ಪೂಜೆ ಎಂದೆಂದು ನಿಮ್ಮ ಕಾಣಲರಿಯದು. ಮತ್ತೆಂತೆಂದೊಡೆ, ಹಿಂದುಮುಂದಿನ ಸಂದೇಹವಳಿದು ಆನಂದಮುಖನಾಗಿ, ಆಯಾಯ ಕಾಲಕ್ಕೆ ಪೂಜಾರ್ಪಣವ ಪರಿಣಾಮಿಸಿ ನಿರಂತರಸಾವಧಾನಿಯಾದರೆ ಆತ ನಿಜವೆಂಬೆ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಡಂಬು ಮಚ್ಚರ್ಯಕ್ಕೆ ಇಂಬುಗೊಡದಿರಬಲ್ಲಡೆ ಶರಣ. ಶಂಭುಪದಪದ್ಮಭಕ್ತಿನಂಬುಗೆವಿಡಿದು ಅಗಲದಿರಬಲ್ಲಡೆ ಶರಣ. ಸೂಸಲೀಯದೆ ಮನವ ಈಶಪದದಲ್ಲಿ ಮೀಸಲಾಗಿರಿಸಿಕೊಂಡಿರಬಲ್ಲಡೆ ಆ ಶರಣನ ಜಗದೀಶನೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಡಂಬೂ ಡಳುಹೂ ಎನ್ನದಯ್ಯಾ, ಡಂಬಕನೆಂಬವ ನಾನಯ್ಯಾ. ನಿಮ್ಮ ನಂಬಿದ ಶರಣರ [ನಂಬದ] ಡಿಂಗರಿಗ ನಾನು, ಕೂಡಲಸಂಗಮದೇವಾ
--------------
ಬಸವಣ್ಣ
ಡಂಭಕದ ಪೂಜೆ, ಹೋಹ ಹೋತಿನ ಕೇಡು. ಆಡಂಬರದ ಪೂಜೆ, ತಾಮ್ರದ ಮೇಲಣ ಸುವರ್ಣದ bs್ಞಯೆ. ಇಂತೀ ಪೂಜೆಗೆ ಹೂಸೊಪ್ಪನಿಕ್ಕಿ, ಮನವ ಹೂಸಿ ಮಾಡುವ ಪೂಜೆ, ಬೇರು ನೆನೆಯದ ನೀರು, ಆಯವಿಲ್ಲದ ಗಾಯ, ಭಾವವಿಲ್ಲದ ಗರಿ, ಮನಸಂದ ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಡೊಂಬರ ಡೊಳ್ಳಧ್ವನಿ ಕೇಳಬಂದಿತ್ತು. ಪೌಜೆಂದು ಮುಂದೆ ಹರಿವನಂತೆ, ಅದರಂದವ ಕೇಳದೆ, ಹಿಂದು ಮುಂದ ತಿಳಿಯದೆ, ಕಂಡಕಂಡವರೊಳಗೆ ಬಂಧಕ್ಕೆ ಹೋರಿಯಾಡುವ ಬಂಧನಿಗೇಕೆ ಜ್ಞಾನ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಡಂಬಕದ ಪೂಜೆ ಹೋಹ ಹೊತ್ತಿನ ಕೇಡು. ಆಡಂಬರದ ಪೂಜೆ ತಾಮ್ರದ ಮೇಲಣ ಸುವರ್ಣದ ಛಾಯೆ. ಇಂತೀ ಪೂಜೆಗೆ ಹೂ ಸೊಪ್ಪನಿಕ್ಕಿ ಮನ ಹೂಣದೆ ಮಾಡುವ ಪೂಜೆ ಬೇರು ನನೆಯದೆ ನೀರು, ಆಯವಿಲ್ಲದ ಗಾಯ, ಭಾವವಿಲ್ಲದ ಘಟ ವಾಯವೆಂದ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಡೊಂಕನ ಕೊಂಡು ಡೊಂಕನ ಕಾಡುವಡೆ ನಮ್ಮ ಡೊಂಕನೆ ಸಾಲದೆ ? ಕೆಮ್ಮುವನಾದಡೆ ನಮ್ಮವನೆ ಸಾಲದೆ ? ಎಂಬ ಲೋಕದ ಗಾದೆಯ ಮಾತಿನಂತೆ; ಈ ಡೊಂಕನ ಕೊಂಡು ಸಸಿನವ ಕೊಡಬಲ್ಲಡೆ ಅವರ ಹಿರಯರೆಂಬೆ ಗುರುವೆಂಬೆ. ಅವರಿಗೆ ನಮೋ ನಮೋ ಎಂಬೆ. ಈ ಡೊಂಕನ ಕೊಂಡು ಸಸಿನವ ಕೊಡಲರಿಯದಿದ್ದಡೆ, ಆ ಗುರುವಿಂಗೆ ಏಳನೆಯ ನರಕ, ಭವಘೋರದಲ್ಲಿ ಓಲಾಡುತ್ತಿಹ. ಇದು ಕಾರಣ, ಡೊಂಕನ ಕೊಂಡು ಸಸಿನವ ಕೊಡಬಲ್ಲ ಗುರು, ಅಪೂರ್ವ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು

-->