ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಫಣಿಯ ಹೆಡೆಯ ಮೇಲೆ, ಒಂದು ಮಣಿಮಾಡದ ಮಂಟಪ. ಒಬ್ಬರಿಗಲ್ಲದೆ ಇಬ್ಬರಿಗಿಂಬಿಲ್ಲ. ಗಂಡಹಂಡೆರಿಬ್ಬರಿಗೆ ಇಹ ತೆರನಾವುದು ? ತೆರಪಿಲ್ಲದುದ ಕಂಡು, ಗಂಡನ ಮಂಡೆಯ ಮೇಲೆ ಹೆಂಡತಿ ಅಡಗಿರಲಾಗಿ, ಬಂದಬಂದವರೆಲ್ಲರೂ ಅವಳ ಕಂಡು ಮನ ಸೋತು, ಗಂಡನ ಕೊಂದು, ಅವಳ ಕೊಂಡು ಹೋಹಾಗ, ಹುದುಗು ಹಿಂಗದೆ, ಇವರೆಲ್ಲರೂ ಕೊಂದಾಡಿ ಸತ್ತರು. ಇದರ ಸಂಗವಾರಿಗೂ ಚೋದ್ಯ, ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಫಲ ಒಳಗೆ ಪಕ್ವವಾಗಿಯಲ್ಲದೆ, ಹೊರಗಳ ಸಿಪ್ಪೆ ಒಪ್ಪಗೆಡದು. ಕಾಮನ ಮುದ್ರೆಯ ಕಂಡು ನಿಮಗೆ ನೋವಾದಿಹಿತೆಂದು ಆ ಭಾವದಿಂದ ಮುಚ್ಚಿದೆ. ಇದಕ್ಕೆ ನೋವೇಕೆ ಕಾಡದಿರಣ್ಣಾ, ಚೆನ್ನಮಲ್ಲಿಕಾರ್ಜುನದೇವರದೇವನ ಒಳಗಾದವಳ.
--------------
ಅಕ್ಕಮಹಾದೇವಿ
ಫಲಪದಾದಿಗಳ ಭಕ್ತರಿಗೆ ಕೊಟ್ಟೆನೆಂದೆಂಬೆ; ಅವರವನೊಲ್ಲರು! ಅವರು ನಿನಗೆ ನಿನ್ನ ರೂಪಿಂಗೆ ತನುಮನಧನಾದಿಗಳ ಕೊಡುವರು. ಎಲೆ ವಂಚಕನಾದ ಶಿವನೆ, ನಿರ್ವಂಚಕರೆಮ್ಮವರು! ನಿನ್ನನೇನ ಬೇಡುವರವರು? ನೀನೇನನವರಿಗೆ ಕೊಡುವೆ? ನಿನ್ನ ಕೊಡನೆಮ್ಮವರೊಲ್ಲರು ಕಾಣಾ, ಕೊಡು, ಕೊಡದೆ ಹೋಗು, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಫಲಪದವನತಿಗಳೆದು ಹಲವು ಸೀಮೆಯ ಮೀರಿ ಹೊಲಬುಗೆಟ್ಟಾತನ್ಕ ಬ್ರಹ್ಮವಾದ, ತನ್ನೊಳಗೆ ಜಗವಾಗಿ ಜಗದೊಳಗೆ ತಾನಾಗಿ ತನುಗುಣಕೆ ತಾ ದೂರವಾಗಿ. ಕುರುಹುಗೆಟ್ಟಾ ಸೀಮೆ ಹಲಬರೊಳಗಿದ್ದು ಒಲವು ನೀನಾದೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಫಲವ ಸಲಿಸುವನ್ನಬರ ಬಿತ್ತು ಸಿಪ್ಪೆ ಉಭಯವು ಇರಬೇಕು. ಸಾರವ ಸಲಿಸಿದಲ್ಲಿ ಸಮಯ ಉಳಿಯಿತ್ತು. ನಮ್ಮ ಕೂಡಲಸಂಗಮದೇವರಲ್ಲಿ ಹಾಗರಿಯಬೇಕು, ಎಲೆ ಘಟ್ಟಿವಾಳಯ್ಯಗಳೆ.
--------------
ಬಸವಣ್ಣ
ಫಲಪದವಿಯ ಬಯಸಿ ಮಾಡಲಾಗದು ಗುರುಭಕ್ತಿಯ. ಫಲಪದವಿಯ ಬಯಸಿ ಮಾಡಲಾಗದು ಲಿಂಗಪೂಜೆಯ. ಫಲಪದವಿಯ ಬಯಸಿ ಮಾಡಲಾಗದು ಜಂಗಮಾರ್ಚನೆಯ. ಅದೇನು ಕಾರಣವೆಂದೊಡೆ : ಬಯಕೆಯ ಭಕ್ತಿಯ, ಪೂರ್ವಪುರಾತನರು ಮಚ್ಚರು. ನಮ್ಮ ಅಖಂಡೇಶ್ವರದೇವನು ಹಂಗಿನ ಭಕ್ತರನೊಲ್ಲ ನೋಡಾ.
--------------
ಷಣ್ಮುಖಸ್ವಾಮಿ
ಫೋರಾರಣ್ಯದ ಮಧ್ಯದಲ್ಲಿ ಮೇಲುಗಿರಿ ಪರ್ವತವೆಂಬ ಅಗ್ರದ ಕೊನೆಯ ಮೇಲೆ ಭಕ್ತಿಜ್ಞಾನವೈರಾಗ್ಯವೆಂಬ ಅಂಗಮಂಡಲದೊಳಗೆ ಮೂವತ್ತಾರು ಮಾಣಿಕ್ಯದ ಕಂಬದ ಮಂಟಪದೊಳಗೆ ಸಚ್ಚಿದಾನಂದ ದಿವ್ಯಪರಂಜ್ಯೋತಿಯನಿಕ್ಕಿ ನೋಡಲು ಅದನೇನೆನ್ನಬಹುದು. ಒಳಗೆ ನೆನೆಯದೆ, ಹೊರಗೆ ಮುಟ್ಟದೆ ಬೆಳಗು ಬೆಳಗ ಕೂಡಿದಂತೆ ಆಕಾಶ ಮಹದಾಕಾಶವ ಕೂಡಿದಂತೆ ಆ ನುಡಿಗೆಡೆಯಿಲ್ಲದ ಬೆಡಗಿನ ಕೀಲ ಕಳಚಬಲ್ಲಡೆ ಮತ್ತೆ ಅರಸಲಿಲ್ಲ, ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವ.
--------------
ಬಾಚಿಕಾಯಕದ ಬಸವಣ್ಣ
ಫಲವ ಮೀರಿದ ಪದವು, ಪದವ ಮೀರಿದ ಸೀಮೆ, ಫಲಪದಕೆ ದೂರವಾಗಿಯೆ ಚಿತ್ರಿಸಿ ಕರುಣವ ಹಿಡಿದಾಚಾರ್ಯ ಕರುಣಶುದ್ಧತೆಯಿಂದ ತರುಣಿಯ ಮಸ್ತಕದ ಸಿಂಹಾಸನಾ ಕಾಲಕರ್ಮವ ಕಳೆದು ಬೆಳಗು ಬೆಳಗಿನಲೀಗ ತಿಳಿದ ಬ್ರಹ್ಮಾಂಡದಾ ಸೊಮ್ಮು ಭಕ್ತಿ ವೀರಮಾಹೇಶ್ವತಿರವು ಆರಿಗಾಗದು ದೇವ, ಸೋಹಮೆಂಬುದಕ್ಕತ್ಯ್ಕತಿಷ* ಕಾನನದ ಕಾವೋದ ಕಂಬನಿಯ ಭಾನು ತಾ ಕಪಿಲಸಿದ್ಧಮಲ್ಲೇಶ್ವರಾ
--------------
ಸಿದ್ಧರಾಮೇಶ್ವರ
ಫಳ ಒಳಗೆ ಕೊಳೆತು, ಹೊರಗೆ ಈಡಾದಡೆ, ಮೆಲುವರಿಗೆ ಅಡಹೆ ? ಹೊರಗೊಣಗಿ, ಒಳಗೆ ಫಳ ರಸಭರಿತವಾಗಿ, ಭುಂಜಿಸುವರ ಅಂಗ ಮನೋಹರವಾಗಿಪ್ಪುದು. ಲೌಕಿಕ ಪರಮಾರ್ಥಂಗಳ ಭೇದ, ಉಭಯರೂಪು ನಿಬದ್ಧಿಯಾದಲ್ಲಿ, ಬಂಕೇಶ್ವರಲಿಂಗವು ಎಂತಿದಡೇನು ?
--------------
ಸುಂಕದ ಬಂಕಣ್ಣ
ಫಲ ಪದವನತಿಗಳೆದು ಹೊಲೆಗಲಸಿ ದಲಗೆಟ್ಟು ಕುಲವನಾಳಿದವರಾರೊ ಅಯ್ಯಾ. ನೀ ಸಲ್ಲದಿನ್ನು ನೆಲೆಗಟ್ಟು ಬ್ರಹ್ಮದೊಳಗೆ, ಅಯ್ಯ, ನಿನ್ನ ಹೊಲೆಗಲಸಿ ಹೊರಗಾದೆ. ಅಯ್ಯಾ, ದಲವೆ ಫಲವಾಗಿ ಹೊಲೆಯ ನೆಲೆಯಾದಡೆ ಒಲವು ತಪ್ಪದು ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಫಲ ತರುವಿನಂತೆ, ತಿಲ ಸಾರದಂತೆ ಮಧುರ ದಂಡದಂತೆ, ಶರಧಿಯಲ್ಲಿರುವ ಲಫುವಿನಂತೆ ಭಿನ್ನಭಾವವಿಲ್ಲದಿರಬೇಕು ಅಂಗಲಿಂಗಸಂಬಂಧ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಫಲ ವೃಕ್ಷ ತರು ಲತೆಗಳೆಲ್ಲ ತಮ್ಮ ಸಲಹಿದವರಾದಿ ಸಕಲರುಗಳಿಗೆ ವಂಚನೆಯಿಲ್ಲದೀಯುವಂತೆ ನಿಜತನಿರಸವನು, ಸಮ್ಯಕ್‍ಜ್ಞಾನಗುರುವಿನಿಂದೆ ಜನಿಸಿ ಬೆಳೆದ ಪರಮಸಾವಧಾನಿ ಶರಣನು ತನ್ನ ಸತ್ತುಚಿತ್ತಾನಂದಸ್ವರೂಪವಾದ ಗುರುಲಿಂಗಜಂಗಮಕ್ಕೆ ತನುಮನಧನದ ಚಿದ್ರಸಸ್ವಾದವನು ವಂಚನೆವಿರಹಿತನಾಗಿತ್ತು ಪರಿಣಾಮಿಸಿಕೊಂಡು ಲೀಲಾಲೋಲನಾಗಿರ್ದ ಕಾಣಾ. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಫಣಿ ತನ್ನ ಹೆಡೆಯ ಮಣಿಯ ಕಂಡಹರೆಂದು ಕತ್ತಲೆಗೋಡಿತ್ತಯ್ಯಾ. ಬಳಿ ಬಳಿಯಲ್ಲಿ ಬೆಳಗು ಬರುತ್ತಿರಲು ತಾನಡಗುವ ಠಾವಿನ್ನೆಲ್ಲಿಯಯ್ಯಾ? ತನ್ನರಿವಿನ ಕುರುಹಳಿಯದನ್ನಕ್ಕ ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವೆಲ್ಲಿಯದಯ್ಯಾ?
--------------
ಚಂದಿಮರಸ
ಫಲದ ಸವಿಯ ವೃಕ್ಷವರಿದಡೆ, ಕೊಡುವುದೆ ಇದಿರಿಂಗೆ ? ಅನ್ನದ ಸವಿಯ ಕುಡಿಕೆಯರಿದಡೆ, ಮಿಗುವುದೆ ಇದಿರಿಂಗೆ ? ಲಿಂಗಸಂಗಿಯಾದಡೆ, ಕಂಡಕಂಡವರಲ್ಲಿ ಉಲಿವನೆ ? ನಿಸ್ತರಂಗವನೈದಿದ ಮಂಗಲೋತ್ತರದಂತೆ ಇದರ ಸಂಗವು. ಲಿಂಗೈಕ್ಯವು ಹೀಂಗಿದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಫಲಪದಭವಕ್ಕೆ ತಾರರಯ್ಯಾ ನಿನ್ನ ಧರ್ಮ. ಫಲಪದದಿಂದ ಭವ, ಆ ಭವದ ನರಕ. ಇಂತಪ್ಪವನೆನಗೆಯು ಎನ್ನವರಿಗೆಯು ತೋರರಯ್ಯಾ, ನಿನ್ನ ಧರ್ಮ. ನಾನು ಎನ್ನವರು ನಿನ್ನನೇ ಬೇಡಿಕೊಂಬೆವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ

ಇನ್ನಷ್ಟು ...
-->