ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಟಿಕ್ಕೆಯಲ್ಲಿ ಮಾಣಿಕವನರಸಲುಂಟೆ? ರೀತಿಕೆಯಲ್ಲಿ ಸುವರ್ಣವನರಸಲುಂಟೆ? ರಾಮಠದಲ್ಲಿ ಮೃಗನಾಬ್ಥಿಯನರಸಲುಂಟೆ? ಆಬಲಲ್ಲಿ ಪದ್ಮಪತ್ರವನರಸಲುಂಟೆ? ಹಾವುಮೆಕ್ಕೆಯಲ್ಲಿ ದ್ರಾಕ್ಷಾಫಲವನರಸಲುಂಟೆ? ಹೆಮ್ಮರದಲ್ಲಿ ಸುಗಂಧವನರಸಲುಂಟೆ? ಅಂಗಭೇದ ವಿಮೂಢರಲ್ಲಿ ಆತ್ಮಜ್ಞಾನವನರಸಲುಂಟೆ? ದೂರಶ್ರವಣ ದೂರದೃಷ್ಟಿಯವರಲ್ಲಿ ಸಮ್ಯಕ್‍ದೃಕ್ಕನರಸಲುಂಟೆ? ಸಮ್ಯಕ್‍ಜ್ಞಾನವಿಲ್ಲದವರಲ್ಲಿ ಲಿಂಗವನರಸಲುಂಟೆ? ಸೌರಾಷ್ಟ್ರ ಸೋಮೇಶ್ವರನ ನಿಜವನರಿಯದವರಲ್ಲಿ ನಿಜಸುಖವನರಸಲುಂಟೆ?
--------------
ಆದಯ್ಯ
ಟಪ್ಪಣವ ಬರೆದ ಚಿತ್ರಜ್ಞನು ಆ ಘಟಕ್ಕೆ ಅಸುವ ಆಶ್ರಯಿಸಬಲ್ಲನೆ ? ಶಿಲ್ಪನ ಶಿಲೆ ಲೋಹ ಮೊದಲಾಗಿ ಕುರುಹುಗೊಂಡವ ದೇವತಾಕಳೆಯ ತುಂಬುವನೆ ? ಶಿಲೆ ಲೋಹ ಲಕ್ಷಣವ ನೆಲೆ ಶುದ್ಧವ ಮಾಡುವನಲ್ಲದೆ. ತಾ ಕಟ್ಟುವ ಇಷ್ಟಕ್ಕೆ ಕಟ್ಟಿಲ್ಲ, ಮೇಲೆ ರೊಕ್ಕವ ತಾಯೆಂಬವಳಂತೆ ಕಟ್ಟಿಹೋದ ಮನವ ಇಷ್ಟದಲ್ಲಿ ನೆಮ್ಮಿಸದೆ. ಇನ್ನಾರ ಕೇಳುವೆ ? ನೀ ಅಲೇಖಮಯ ಶೂನ್ಯ ಕಲ್ಲಿನ ಮರೆಯಾದೆ
--------------
ವಚನಭಂಡಾರಿ ಶಾಂತರಸ
ಟಿಕ್ಕೆಯೊಳಗೆ ಮಾಣಿಕ್ಯ ಉಂಟೆ ಅಯ್ಯಾ? ರಾಮಠದಲ್ಲಿ ಮೃಗನಾಭಿಯುಂಟೆ ಅಯ್ಯಾ? ಕಲ್ಲಮೊರಡಿಯೊಳಗೆ ಚಿಲುಮೆಯಗ್ಗವಣಿಯುಂಟೆ ಅಯ್ಯಾ? ಸರ್ವ ದುರ್ಗುಣಿಯಾನು, ಎನ್ನಲ್ಲಿ ಆವ ಗುಣವನರಸುವಿರಿರಿ ನೀನೇ ಕೃಪೆ ಮಾಡಯ್ಯಾ, ಸದ್ಗುರುವೆ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ

-->