ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಫಲದೊಳಗಣ ಮಧುರಗೋಪ್ಯದಂತಿದ್ದಿತ್ತು, ಚಂದ್ರಕಾಂತದ ಉದಕದ ತೆರನಂತಿದ್ದಿತ್ತು, ಮಯೂರನ ತತ್ತಿಯ ಚಿತ್ರದಂತಿದ್ದಿತ್ತು, ಶಿಶುಕಂಡ ಕನಸಿನ ಪರಿಯಂತಿದ್ದಿತ್ತು, ಕೂಡಲಚೆನ್ನಸಂಗಯ್ಯಾ [ನಿಮ್ಮ ನಿಲವು] ಫ ಸದ್ಗುರುಚಿತ್ತದ ಪದದಂತಿದ್ದಿತ್ತು.
--------------
ಚನ್ನಬಸವಣ್ಣ
ಫಲ, ರಸವ ಇರಿಸಿಕೊಂಡಿದ್ದಂತೆ, ನೆಲ, ನಿಧಾನವನಿರಿಸಿಕೊಂಡಿದ್ದಂತೆ, ತಾಯಿ, ಗರ್ಭದ ಶಿಶುವ ಆರೈಕೆಯಲ್ಲಿ ತಾಳಿಕೊಂಡಿಪ್ಪಂತೆ, ಇದ್ದೆಯಲ್ಲಾ ನೀ ಕುರುಹಾಗಿ. ಅರಿವ ಆತ್ಮನ ಮರೆಯಮಾಡಿಕೊಂಡಿದ್ದೆಯಲ್ಲಾ, ಅರಿವನರಿವುದಕ್ಕೆ. ಕುರುಹಿನ ಮೂರ್ತಿಯಲ್ಲಿ ಅಂಗವ ಮರೆದು, ವಸ್ತುವ ಹಿಂಗದಿರು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಫಲವನಳಿದವಂಗೆ ಕುಲದ ಹಂಗೇತಕಯ್ಯಾ? ಗುರುಭಕ್ತನಾದ ಮೇಲೆ ಜಂಗಮದ ಹಂಗೇತಕಯ್ಯಾ? ಪ್ರಾಣಲಿಂಗದ ಹೊಲಬನರಿತವಂಗೆ ಇಷ್ಟಲಿಂಗದ ಹಂಗೇತಕಯ್ಯಾ? ಇಂತೀ ಕರಣಂಗಳನರಿಯದ ಉದಾಸೀನವೆಂದು ಚರಿಸುವ ಬೂಟಕರ ನೋಡಿ ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ

-->