ಅಥವಾ

ಪ್ರಾರಂಭ ಪದದ ಹುಡುಕು

(2486) (1140) (579) (82) (281) (102) (4) (0) (707) (126) (71) (360) (75) (2) ಅಂ (2486) ಅಃ (2486) (1934) (29) (733) (90) (0) (176) (4) (464) (0) (0) (3) (3) (7) (0) (4) (920) (0) (323) (118) (1184) (974) (18) (845) (629) (1413) (73) (161) (0) (469) (511) (703) (31) (1162) (990) (0)

ಪದದಿಂದ ಪ್ರಾರಂಭವಾಗುವ ವಚನಗಳು

ಲಿಂಗಪ್ರಸಾದವ ಜಂಗಮಕ್ಕೆ ಕೊಡುವ ಕರ್ಮಿ ನೀ ಕೇಳಾ ! ಜಂಗಮಪ್ರಸಾದವ ಲಿಂಗಕ್ಕೆ ಕೊಡುವ ಸುಧರ್ಮಿ ನೀ ಕೇಳಾ ! ಲಿಂಗಪ್ರಸಾದವ ಜಂಗಮಕ್ಕೆ ಕೊಡುವದು ಅನಾಚಾರ; ಜಂಗಮದ ಪ್ರಸಾದವ ಲಿಂಗಕ್ಕೆ ಕೊಡುವದು ಸದಾಚಾರ. ಅಅದೆಂತೆಂದಡೆ: ಲಿಂಗಾರ್ಪಿತಂ ಪ್ರಸಾದಂ ಚ ನ ದದ್ಯಾತ್ ಚರಮೂರ್ತಯೇ ಚರಾರ್ಪಿತಂ ಪ್ರಸಾದಂ ಚ ತದ್ದದ್ಯಾತ್ ಲಿಂಗಮೂರ್ತಯೇ ಎಂದುದಾಗಿ, ಇದು ಕಾರಣ, ಕೂಡಲಚೆನ್ನಸಂಗಯ್ಯಾ, ಜಂಗಮ ಮುಖದಲ್ಲಿ ಲಿಂಗ ನಿರಂತರ ಸುಖಿ
--------------
ಚನ್ನಬಸವಣ್ಣ
ಲೆಪ್ಪದ ಬೊಂಬೆ ಒಂದಾದಡೆ ಅವಯವಂಗಳಲ್ಲಿ ಬಣ್ಣ ನಿಂದು ರೂಪುದೋರುವಂತೆ ವಸ್ತು ಭಾವವೊಂದಾದಲ್ಲಿ ಮುಟ್ಟುವ ಸ್ಥಲದಿಂದ ಹಲವಾಯಿತ್ತು. ಕೇಳಿದಲ್ಲಿ ಭಾವನಾಸ್ತಿ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಲೋಕದವರನೊಂದು ಭೂತ ಹಿಡಿದಡೆ, ಆ ಭೂತದಿಚ್ಛೆಯಲ್ಲಿ ನುಡಿವುತ್ತಿಪ್ಪರು. ಲಾಂಛನ ಧಾರಿ ವೇಷವ ಧರಿಸಿ, ಆಸೆಯಿಂದ ಘಾಸಿಯಾಗಲೇಕಯ್ಯಾ ? ಆನೆಯ ಚೋಹವ ತೊಟ್ಟು ನಾಯಾಗಿ ಬೊಗಳುವ ಮಾನವರನೇನೆಂಬೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಲಿಂಗವೇ ಪ್ರಾಣ, ಪ್ರಾಣವೇ ಲಿಂಗವಾದ ಪ್ರಾಣಲಿಂಗಿಯ ಪ್ರಾಣಲಿಂಗಕ್ಕೆ, ಧ್ಯಾನಾಮೃತ ಪಂಚಾಕ್ಷರಂಗಳ ಪಂಚಾಮೃತದಿಂ ಮಜ್ಜನಕ್ಕೆರೆದು, ಆ ಲಿಂಗಕ್ಕೆ ಮನವೇ ಪುಷ್ಪ, ಬುದ್ಧಿಯೆ ಗಂಧ, ಚಿತ್ತವೇ ನೈವೇದ್ಯ. ಅಹಂಕಾರವಳಿದ ನಿರಹಂಕಾರದ ಆರೋಗಣೆಯ ಮಾಡಿಸಿ, ಪರಿಣಾಮದ ವೀಳ್ಯವನಿತ್ತು, ಸ್ನೇಹದಿಂದ ವಂದನೆಯಂ ಮಾಡಿ, ಆ ಪ್ರಾಣಲಿಂಗಕ್ಕೆ ಬಹಿರಂಗದ ಪೂಜೆಯ ಪರಿಯಲಿ ಅಂತರಂಗದ ಪೂಜೆಯ ಮಾಡುವುದು. ಬಹಿರಂಗದ ಪೂಜೆಯ ಪ್ರಾಣಲಿಂಗಕ್ಕೆ ಅಂತರಂಗದ ವಸ್ತುಗಳೆಲ್ಲವನ್ನು ತಂದು, ಬಹಿರಂಗದ ವಸ್ತುವಿನಲ್ಲಿ ಕೂಡಿ, ಅಂತರ್ಬಹಿರುಭಯ ಲಿಂಗಾರ್ಚನೆಯ ಮಾಡಲು, ಅಂತರಂಗ ಬಹಿರಂಗ ಭರಿತನಾಗಿಪ್ಪನಾ ಶಿವನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಲಿಂಗಾನುಭಾವ ಸಿದ್ಧಿಯಾದ ಬಳಿಕ ಮತ್ತೇಕಯ್ಯ ಕೂಟವೆಮಗೆ ಹೆರರೊಡನೆ ? ಹೇಳಿರಯ್ಯಾ, ಎನ್ನದೇವ ಚೆನ್ನಮಲ್ಲಿಕಾರ್ಜುನನು ಕರುಣಿಸಿದ ಬಳಿಕ
--------------
ಅಕ್ಕಮಹಾದೇವಿ
ಲಿಂಗ ಬಂದು ಲಿಂಗಗಳನಳಿಯಿತ್ತಯ್ಯ ಲಿಂಗವೆ. ಲಿಂಗ ಬಂದು ಲಿಂಗಗಳನೀಡಾಡಿತ್ತಯ್ಯ ಲಿಂಗವೆ. ಲಿಂಗ ಬಂದು ಲಿಂಗ ಉಳಿಯಿತ್ತಯ್ಯ. ಲಿಂಗವೆ ಗುರು ಲಿಂಗವೆ ಜಂಗಮ ಲಿಂಗವೆ ನಾನು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಲಿಂಗದಲ್ಲಿ ಹೊಳೆದು ಹೋಹ ಜಂಗಮವ ಕಂಡು ಬಿಟ್ಟಡೆ ಭವ ಹೊದ್ದಿತ್ತಯ್ಯಾ ಎನ್ನ ಭಕ್ತಿಗೆ. ಹಿಂದೆ ಲಿಂಗವನಗಲಿದ ಕಾರಣ ಬಂದೆನೀ ಜನ್ಮಕ್ಕೆ, ಕೂಡಲಸಂಗಯ್ಯ ತಪ್ಪಿಹೋಗದ ಮುನ್ನ ಹಿಡಿದು ತನ್ನಿ.
--------------
ಬಸವಣ್ಣ
ಲಿಂಗವೆಂಬ ಭಾವವಂಗದಲ್ಲರತು, ಅಂಗವೆಂಬ ಭಾವ ಲಿಂಗದಲ್ಲರತು, ಲಿಂಗ ಅಂಗವೆಂಬ ಭಾವ ನಿಜದಲ್ಲರತು, ನಿರ್ವಾಣಪದದಲ್ಲಿ ನಿವಾಸವಾದ ನಿರ್ಭೇದ್ಯಂಗೆ, ನಡೆದುದೇ ಸತ್ಕ್ರಿಯೆ, ನುಡಿದುದೇ ಶಿವಾನುಭಾವ, ಹಿಡಿದುದೇ ಮಹಾಜ್ಞಾನ. ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಶರಣ ಅಪೂರ್ವಚರಿತನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗದ ಅಂಗವದು ಅಳವಡಿರೆ ಸಂಗವ ಮಾಡು ಪುರಾತರ, ಮನವೆ. ಕಂಗಳವರಿಯರೆ ತಿಂಗಳಧರನ ಪೂಜಿಸು ಮನವೆ. ಅಂಗಾಂಗ ಸಮರಸವಾಗದಿರೆ ಗಂಗಾಧರ ಕಪಿಲಸಿದ್ಧಮಲ್ಲಿಕಾರ್ಜುನ ಎನ್ನು, ಮನವೆ.
--------------
ಸಿದ್ಧರಾಮೇಶ್ವರ
ಲಿಂಗವಂತ ಲಿಂಗಭಕ್ತ ಲಿಂಗಾಚಾರಿಯೆನಿಸಿಕೊಂಡ ಬಳಿಕ, ಲಿಂಗದ ನಚ್ಚು, ಲಿಂಗದ ಮಚ್ಚು, ಲಿಂಗವೇ ಪ್ರಾಣವಾಗಿರಬೇಕಲ್ಲದೆ, ಮತ್ತೆ ತಪ್ಪಿ ನಡೆದು, ತಪ್ಪಿ ನುಡಿದು, ಪರಧನ ಪರಸ್ತ್ರೀಯರ ಸಂಗವ ಮಾಡಿ, ದುರ್ಗುಣ ದುರಾಚಾರದಲ್ಲಿ ನಡೆದು, ಮತ್ತೆ ತಾವು ಲಿಂಗವಂತರೆನಿಸಿಕೊಂಬ ಪರಿಯ ನೋಡಾ. ಇದು ಲಿಂಗದ ನಡೆಯಲ್ಲ, ಲಿಂಗದ ನುಡಿಯಲ್ಲ. ಇದ ನಮ್ಮ ಶಿವಶರಣರು ಮೆಚ್ಚರು. ಲಿಂಗವಂತನ ಪರಿ ಬೇರೆ ಕಾಣಿರೆ. ಲಿಂಗಕ್ಕೆ ಲಿಂಗವೆ ಪ್ರಾಣವಾಗಿರಲು ಬಲ್ಲ. ಲಿಂಗಕ್ಕೆ ಲಿಂಗವೆ ಭೋಗವಾಗಿರಲು ಬಲ್ಲ. ಲಿಂಗಕ್ಕೆ ಲಿಂಗವೆ ಸಂಗವಾಗಿ[ರಲು]ಬಲ್ಲ, ಇಂತಪ್ಪ ಲಿಂಗವಂತನ ಸದಾಚಾರಿಯೆಂಬೆನು. ಇಂತಪ್ಪ ಲಿಂಗವಂತನ ಸರ್ವಾಂಗಲಿಂಗಿಯೆಂಬೆನು. ಇಂತಪ್ಪ ಲಿಂಗವಂತನ ಸರ್ವಕರಣ ನಿರ್ಮುಕ್ತನ ಸರ್ವನಿರ್ವಾಣಿಕಾಯೆಂಬೆನು. ಇಂತಪ್ಪ ಮಹಾಮಹಿಮನ ನಿಲವು ಎಲಗಳೆದ ವೃಕ್ಷದಂತೆ, ಉಲುಹಡಗಿಪ್ಪ ಶರಣನ ಪರಿಯ ನೀವೇ ಬಲ್ಲಿರಲ್ಲದೆ, ಮತ್ತೆ ಉಳಿದಾದ ಅಜ್ಞಾನ ಸಂದೇಹಿಮಾನವರೆತ್ತ ಬಲ್ಲರಯ್ಯಾ. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ ನಿಮ್ಮ ಲಿಂಗಾವಧಾನಿಯ ಪರಿಯ ನೀವೇ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಲೋಹ ಪರುಷವ ಮುಟ್ಟುವುದಲ್ಲದೆ, ಪರುಷ ಪರುಷವ ಮುಟ್ಟುವುದೆ ಅಯ್ಯಾ ? ಅಂಗವಿಡಿದಂಗೆ ಪ್ರಸಾದವಲ್ಲದೆ ಲಿಂಗವಿಡಿದಂಗೆ ಪ್ರಸಾದವುಂಟೆ ? `ಅಣೋರಣೀಯಾನ್ ಮಹತೋ ಮಹೀಯಾನ್' ಎಂದುದಾಗಿ ಕಿರಿದಿಂಗೆ ಕಿರಿದು ಹಿರಿದಕ್ಕೆ ಹಿರಿದು, ವಾಙ್ಮನಕ್ಕಗೋಚರ. ಕೂಡಲಚೆನ್ನಸಂಗಮದೇವ [ಕೇಳಯ್ಯಾ] ಸ್ವರೂಪು ಪ್ರಸಾದಿ, ನಿರೂಪು ಲಿಂಗೈಕ್ಯ !
--------------
ಚನ್ನಬಸವಣ್ಣ
ಲಿಂಗಿಗಳ ಸಂಗ ಸಲ್ಲದೆಂದಡೆ, ಉದರದಲ್ಲಿಹ ಲಿಂಗ ಲಿಂಗವಲ್ಲವೆ, ಲಿಂಗಯ್ಯಾ? ಅಂಗಿಗಳ ಭೋಜನ ಸಲ್ಲದೆಂದಡೆ, ಪಶು ಪೃಥ್ವಿಗಳು ಅಂಗವಲ್ಲವೆ, ಲಿಂಗಯ್ಯಾ? `ಲಿಂಗಮಧ್ಯೇ ಜಗತ್ ಸರ್ವಂ' ಎಂದ ಬಳಿಕ ಲಿಂಗವಲ್ಲವೆ, ಕಪಿಲಸಿದ್ಧಮಲ್ಲಿಕಾರ್ಜುನ ಲಿಂಗಯ್ಯಾ?
--------------
ಸಿದ್ಧರಾಮೇಶ್ವರ
ಲಿಂಗಸಂಬಂದ್ಥಿಗಳೆಂದು ಹೇಳಿಕೊಂಬ ಹೆಂಗಳೆ ಹೇಮಲೋಷ್ಠ್ರ ರತಿಸಂಯುಕ್ತ ಮತಿನಾಶ ಮಲಭುಂಜಕರು, ಅತೀತಪ್ರಸಾದವನರಿದರ್ಪಿಸಿಕೊಂಬ ಭೇದವನರಿಯದೆ ಹಸುವಿನೊಡಲಿಗೆ ಹವಣವರಿಯದೆ ಜಿನುಗುವ ಜಿಹ್ವೆಲಂಪಟಗೂಡ್ಥಿ ಕೈದುಡುಕಿಗಳಿಂದೆ ನೆಗೆನೆಗೆದು ಕೊಂಬ ಅಘಬಂಧರೆತ್ತ? ಅಪ್ರತಿಮನೆತ್ತ? ಸಲೆ ತತ್ವವೆತ್ತ? ಗುರುನಿರಂಜನ ಚನ್ನಬಸವಲಿಂಗಕ್ಕಂಗವಾಗಿರ್ದ ಅನುಪಮ ಪ್ರಸಾದಿಯೇ ನಿತ್ಯ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲೋಕದ ಡೊಂಕ ನೀವು ತಿದ್ದುವಿರಯ್ಯ ನಿಮ್ಮ (ತನುಮನದ) ಡೊಂಕ ತಿದ್ದಿ ತೀಡಿಕೊಳಲರಿಯದೆ. ಪುರಾತನರು, ನುಡಿದಂತೆ ನಡೆಯದವರೆಲ್ಲ, ಕಡು ಓದಿದ ಗಿಳಿ ತನ್ನ ಮಲವ ತಾ ತಿಂದಂತೆ. ನೆರೆಮನೆಯವರ ದುಃಖವ ಕೇಳಿ, ಗಡ್ಡ ಮೀಸೆ ಮುಂಡೆಯ ಬೋಳಿಸಿಕೊಂಡು (ಕಡೆಯಲ್ಲಿ) ಹೋಗಿ ಅಳುತಿಪ್ಪವರ ಕಂಡರೆ ಕೂಡಲಚೆನ್ನಸಂಗನ ಶರಣರು ನಗುತಿಪ್ಪರಯ್ಯಾ.
--------------
ಚನ್ನಬಸವಣ್ಣ
ಲಿಂಗಜಂಗಮ ಸಂಗಸನ್ನಿಹಿತನಾದ ಶರಣಂಗೆ ಭಾವವಿಲ್ಲದ ಕಾಯ, ಕಲ್ಪನೆಯಿಲ್ಲದ ಮನ, ಗುಣಶೂನ್ಯ ಪ್ರಾಣ, ಭ್ರಾಂತಿವಿರಹಿತ ಭಾವ, ಧರ್ಮವಿಲ್ಲದ ಇಂದ್ರಿಯ, ಇಂತು ಸಕಲ ವಿಷಯ ಹೊಂದಿ ಶರಣೆಂದು ನೈಷ್ಠೆವೆರೆದು ನಲಿಯುತಿರ್ದವು ಗುರುನಿರಂಜನ ಚನ್ನಬಸವಲಿಂಗಕ್ಕೆ.
--------------
ದೇಶಿಕೇಂದ್ರ ಸಂಗನಬಸವಯ್ಯ

ಇನ್ನಷ್ಟು ...
-->