ಅಥವಾ
(19) (3) (1) (1) (3) (0) (0) (0) (0) (1) (1) (0) (0) (0) ಅಂ (10) ಅಃ (10) (19) (0) (9) (1) (0) (1) (0) (7) (0) (0) (0) (0) (0) (0) (0) (8) (0) (0) (3) (4) (11) (0) (4) (3) (9) (0) (3) (0) (1) (8) (2) (0) (6) (3) (0)

ಅಂ ಪದದಿಂದ ಪ್ರಾರಂಭವಾಗುವ ವಚನಗಳು:

ಅಂಗದೇಹಿ ಲಿಂಗೋದಕವ ಕೊಳಲಾಗದು. ಪ್ರಕೃತಿಜೀವಿ ಪಾದೋದಕವ ಕೊಳ್ಳಲಾಗದು. ಭವಜೀವ ಪ್ರಸಾದೋದಕವ ಕೊಳಲಾಗದು. ಇಂತೀ ತ್ರಿವಿಧಭೇದಂಗಳಲ್ಲಿ ತ್ರಿವಿಧಶುದ್ಧವಾಗಿ ಕೊಳಬಲ್ಲಡೆ, ತ್ರಿವಿಧೋದಕ ಸಮರ್ಪಣ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಅರ್ಪಿತ.
--------------
ಶಿವಲೆಂಕ ಮಂಚಣ್ಣ
ಅಂಗದಲ್ಲಿ ಸೋಂಕಿದ ಸುಳುಹ ಮನವರಿದು, ಅಲ್ಲ ಅಹುದೆಂದು ಸಂದೇಹ ಬಿಟ್ಟಲ್ಲಿ ಅರ್ಪಿತವಲ್ಲದೆ, ಬಂದುದ ಬಂದಂತೆ, ಕಂಡುದ ಕಂಡಂತೆ, ದೃಕ್ಕಿಂಗೊಳಗಾದುದೆಲ್ಲವು ಲಿಂಗಾರ್ಪಿತವುಂಟೆ ? ಅರ್ಪಿಸಬಲ್ಲಡೆ ಅಲ್ಲ ಅಹುದೆಂಬುದ ಮುನ್ನವೆ ಅರಿದು, ಆ ಮನ ಲಿಂಗದೊಳಗಡಗಿ, ಅಂಬಿನ ಕಣೆಯಂತೆ ಮನ ಲಿಂಗದ ಅನು. ಈಶಾನ್ಯಮೂರ್ತಿ ಮಲ್ಲಿಕಾರ್ಜುನದ ಘನ
--------------
ಶಿವಲೆಂಕ ಮಂಚಣ್ಣ
ಅಂಗಕ್ಕೆ ಲಿಂಗವ ಕೊಟ್ಟವ ಆಚಾರ್ಯನಾದ. ಮನಕ್ಕರಿವ ತೋರಿದಾತ ಮೋಕ್ಷ ಆಚಾರ್ಯನಾದ. ಮೋಕ್ಷ ವಿಮೋಕ್ಷವಾಗಿ ಉಭಯದ ಗೊತ್ತ ತೋರಿ, ಕಾಯದ ಕರ್ಮವ ಕೆಡಿಸಿ, ಜೀವನ ಭವವ ಛೇದಿಸಿ, ತದ್ರೂಪ ತೋರಿದ ಜ್ಞಾನಗುರು. ಆತ ಪ್ರಕಾಶ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ.
--------------
ಶಿವಲೆಂಕ ಮಂಚಣ್ಣ
ಅಂಗದಲ್ಲಿ ಅರಿದು ನಡೆವ ಆಚರಣೆ, ನೆನಹಿನಲ್ಲಿ ಕುರುಹುಗೊಂಡು ನಿಂದು, ಆ ನೆನಹೆ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಸಲೆ ಸಂದುದು.
--------------
ಶಿವಲೆಂಕ ಮಂಚಣ್ಣ
ಅಂಗ ಶಿರದ ಮಲಿನವ ಕಳೆದಲ್ಲಿ, ಮನಕ್ಕೆ ಲಂಘನೆಯಾದಂತೆ, ಶಿವಲಿಂಗಪೂಜೆಯ ಕೈಕೊಂಡನ್ನಬರ, ಕಂಗಳ ಜಲ ತುಂಬುವನ್ನಬರ, ಮನಮೂರ್ತಿ ಧ್ಯಾನ ಜಾಹೆ ಅಹನ್ನಬರ, ಅಂಗಕ್ಕೆ ತೆರಪಿಲ್ಲದೆ, ಮನಕ್ಕೆಡೆಯಿಲ್ಲದೆ, ಅರಿವುದಕ್ಕೆ ಹೆರೆಹಿಂಗದೆ, ಪೂಜಾಲೋಲನಾಗಿರಬೇಕು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವುದಕ್ಕೆ.
--------------
ಶಿವಲೆಂಕ ಮಂಚಣ್ಣ
ಅಂಗವನಳಿವನ್ನಕ್ಕ ಶಿವಲಿಂಗಪೂಜೆಯ ಮಾಡಬೇಕು. ಆತ್ಮನ ಕ್ಷುಧೆಯುಳ್ಳನ್ನಕ್ಕ ಬಂದ ಪದಾರ್ಥವ ಲಿಂಗಾರ್ಪಿತ ಮಾಡಬೇಕು. ಇದು ಅರಿವಿನ ಭಿತ್ತಿ , ಜ್ಞಾನದ ಗೊತ್ತು, ಸರ್ವಮಯದ ಯುಕ್ತಿ. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವ ಶಕ್ತಿ.
--------------
ಶಿವಲೆಂಕ ಮಂಚಣ್ಣ
ಅಂಗದ ಮೇಲಣ ಲಿಂಗ, ಪ್ರಾಣದ ಮೇಲೆ ಬಂದು ನಿಲುವನ್ನಕ್ಕ ಪೂಜಿಸಬೇಕು. ಪ್ರಾಣದ ಮೇಲಣ ಅರಿವು ಕರಿಗೊಂಬನ್ನಕ್ಕ ನೆನೆಯಬೇಕು. ನೆನಹು ನಿಃಪತಿಯಾದ ಮತ್ತೆ, ಈಶಾನ್ಯಮೂರ್ತಿ ಮ ಲ್ಲಿಕಾರ್ಜುನಲಿಂಗವೆಂಬ ನಾಮವಡಗಿತ್ತು.
--------------
ಶಿವಲೆಂಕ ಮಂಚಣ್ಣ
ಅಂಗ ಲಿಂಗವ ಪೂಜಿಸಿ, ಪ್ರಾಣ ಜ್ಞಾನವ ಕಂಡು, ಅಂಗ ಲಿಂಗ ಹಿಂಗಿ, ಪ್ರಾಣಲಿಂಗವಾಗಿ. ಆ ಪ್ರಾಣ ಲಿಂಗದಲ್ಲಿ ನಿಂದು, ಜ್ಞಾನಲಿಂಗವಾಯಿತ್ತು. ಲಿಂಗಭಾವವಳಿದು ಮಹದೊಡಗೂಡಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ
--------------
ಶಿವಲೆಂಕ ಮಂಚಣ್ಣ
ಅಂದಳ ಸತ್ತಿಗೆ ಕರಿ ತುರಗಂಗಳಿಂದ ಮನಗುಂದದೆ, ಗುರುಚರವೆಂದು ಪ್ರಮಾಣಿಸಿ, ಪರಿಯನರಿದೆನೆಂದು ಓಸರಿಸಿದಲ್ಲಿಯೆ, ಸರಿಯಿತ್ತು ಸತ್ಯ. ಮತ್ತೇನ ಮಾಡಿಯೂ ಪರಿಹರಿಸುವುದಿಲ್ಲ. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಅವರಿಗೆ ಒಲವರವಿಲ್ಲ.
--------------
ಶಿವಲೆಂಕ ಮಂಚಣ್ಣ
ಅಂಗ ಮುಟ್ಟಿ ಅಪ್ಪಿ, ಕಂಗಳು ತುಂಬಿ ನೋಡಿ, ಕೈಯಾಟ ಹೆರೆಹಿಂಗದೆ ಪೂಜಿಸಿ, ಮನಕ್ಕೆ ತೆರಪಿಲ್ಲದೆ ಅರಿದು, ಎಡೆಬಿಡುವಿಲ್ಲದ ಸುಖ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವ ಕೂಡುವ ಕೂಟ.
--------------
ಶಿವಲೆಂಕ ಮಂಚಣ್ಣ