ಅಥವಾ
(19) (3) (1) (1) (3) (0) (0) (0) (0) (1) (1) (0) (0) (0) ಅಂ (10) ಅಃ (10) (19) (0) (9) (1) (0) (1) (0) (7) (0) (0) (0) (0) (0) (0) (0) (8) (0) (0) (3) (4) (11) (0) (4) (3) (9) (0) (3) (0) (1) (8) (2) (0) (6) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಲದೊಳಗಣ ಮತ್ಸ್ಯ, ವನದೊಳಗಣ ಮರ್ಕಟ, ಆಕಾಶದ ಪಕ್ಷಿ, ಇವು ಕೂಡಿ ಮಾತನಾಡುವಲ್ಲಿ, ಶಬರ ಮತ್ಸ್ಯವ ನೋಡಿ, ಜೋಗಿ ವನಚರವ ಕಂಡು, ಅಂಟಿನ ಡೊಂಬ ಹಕ್ಕಿಯ ಕಂಡು, ಇಂತೀ ಮೂವರ ಹಡಹ ಕೆಡಿಸಿತ್ತು. ಕಾರಮಳೆ ಸೋನೆಯೆದ್ದು ಸುರಿಯಿತ್ತು. ಇಂತಿನ್ನಾರ ಕೇಳುವೆ ? ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ ನೀನೆ ಬಲ್ಲೆ.
--------------
ಶಿವಲೆಂಕ ಮಂಚಣ್ಣ
ಜ್ಞಾನಾದ್ವೈತದ ಹೆಚ್ಚುಗೆ, ಭಾವಾದ್ವೈತಕ್ಕೆ ಸಂಬಂಧವಾಗಿಹುದು. ಭಾವಾದ್ವೆ ೈತದ ಹೆಚ್ಚುಗೆ, ಕ್ರಿಯಾದ್ವೈತವ ಸಂಬಂದ್ಥಿಸಿಕೊಂಡಿಹುದು. ಕ್ರಿಯಾದ್ವೈತದ ಹೆಚ್ಚುಗೆ, ಸರ್ವಮಯವಾಗಿ ಘನಲಿಂಗವ ಗಬ್ರ್ಥೀಕರಿಸಿಕೊಂಡಿಪ್ಪುದು. ಇಂತೀ ಭೇದ. ಕ್ರೀ ಜ್ಞಾನಕ್ಕೆ ಒಡಲಾಗಿ, ಮಥನದಿಂದ ವಹ್ನಿ ಕುರುಹಿಗೆ ಬಂದಂತೆ, ಕ್ರೀಯಿಂದ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು, ಸ್ವಯಂಭುವಾಯಿತ್ತು.
--------------
ಶಿವಲೆಂಕ ಮಂಚಣ್ಣ
ಜಲ ಕೆಯ್ಯಿ ಭಾಜನ ವಾಸ ಇವು ಮುಂತಾಗಿ ಭವಿಸಂಗ ಭವಿ ನಿರೀಕ್ಷಣೆ, ಲೌಕಿಕಕ್ಕೆ ಇವ ಬಿಟ್ಟು, ಮನ ಭಾವದಲ್ಲಿ ಶುದ್ಧವಾಗಿ, ಪೂಜಿಸುವ ಲಿಂಗದಲ್ಲಿ, ಪ್ರಮಾಣಿಸುವ ಜಂಗಮದಲ್ಲಿ, ಆರಾಧಿಸುವ ಗುರುವಿನಲ್ಲಿ ಪಂಚಾಚಾರ ಶುದ್ಧವಾಗಿ, ಮನ ವಚನ ಕಾಯ ತ್ರಿಕರಣದಲ್ಲಿ ಶುದ್ಧಾತ್ಮನಾಗಿಪ್ಪುದೆ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಸರ್ವವ್ರತ ಸಂದಿತ್ತು.
--------------
ಶಿವಲೆಂಕ ಮಂಚಣ್ಣ
ಜಂಗಮದ ಪಾದತೀರ್ಥವ ಲಿಂಗಕ್ಕೆ ಮಜ್ಜನವ ಮಾಡಲಾಗಿ, ಲಿಂಗತೀರ್ಥವಾಯಿತ್ತು. ಜಂಗಮದ ಪ್ರಸಾದವ ಲಿಂಗಕ್ಕರ್ಪಿಸಲಾಗಿ, ಲಿಂಗಪ್ರಸಾದವಾಯಿತ್ತು. ಶುದ್ಧ ಗುರುವಿನಲ್ಲಿ, ಸಿದ್ಧ ಲಿಂಗದಲ್ಲಿ, ಪ್ರಸಿದ್ಧ ಜಂಗಮದಲಾದ ಮತ್ತೆ , ಸಿಕ್ಕಿತ್ತು ಪ್ರಸಿದ್ಧ ಸಂಖ್ಯೆಯಲ್ಲಿ. ಇದನರಿತು ಅರ್ಪಿಸಬಲ್ಲಡೆ, ಆತನೇ ಪ್ರಸಾದಕಾಯ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ ಅರ್ಪಿತ ಅವಧಾನಿ.
--------------
ಶಿವಲೆಂಕ ಮಂಚಣ್ಣ
ಜಗಕ್ಕೆ ಹೊರಗಾಗಿ ಅರಿವ ಠಾವಿಲ್ಲ, ಜಗಕ್ಕೆ ಒಳಗಾಗಿ ಮರೆವ ಠಾವಿಲ್ಲ , ಒಳಹೊರಗೆಂಬುದು ಒಂದೇ ಭೇದವಾದ ಕಾರಣ ಕುಡಿಕೆಯ ಘೃತ ಅಗಲಿಕೆ ಬಂದಂತೆ, ಅದು ಮುಂದಣ ಬಯಕೆ. ಇದು ಇಂದಿನ ಇರವು ಎಂಬುದನರಿದಲ್ಲಿ, ಉಂಟು, ಇಲ್ಲಾ ಎಂಬ ಸಂದೇಹ ಹರಿಯಿತ್ತು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿದಲ್ಲಿ.
--------------
ಶಿವಲೆಂಕ ಮಂಚಣ್ಣ
ಜಲದಲ್ಲಿ ಹುಟ್ಟಿದ ಚೇತನ, ಜಲವುಳಿದು ಜೀವಿಸಬಲ್ಲುದೆ ? ಅರಿವನರಿದಲ್ಲಿ, ಕುರುಹಿನ ಮರೆಯಲ್ಲಿ, ಇದೆಯೆಂದು ತೋರಿದ ಮತ್ತೆ , ಕುರುಹುನುಳಿದು, ಅರಿವ ಪರಿಯಿನ್ನೆಂತೊ ? ಆ ಉಭಯ, ಆತ್ಮದೃಷ್ಟಿಯಂತೆ. ಶಿವಲೆಂಕನ ಮಾತು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಉಂಟು ಇಲ್ಲಾ ಎಂಬಲ್ಲಿ ಹಾಕಿದ ಮುಂಡಿಗೆ.
--------------
ಶಿವಲೆಂಕ ಮಂಚಣ್ಣ
ಜ್ಞಾನವುಳ್ಳನ್ನಕ್ಕ ಅರಿವು, ಅರಿವುಳ್ಳನ್ನಕ್ಕ ಆತ್ಮ , ಆತ್ಮವುಳ್ಳನ್ನಕ್ಕ ಜೀವ, ಜೀವವುಳ್ಳನ್ನಕ್ಕ ಕಾಯ, ಕಾಯವುಳ್ಳನ್ನಕ್ಕ ಸಕಲಸುಖಭೋಗಂಗಳು. ಅದೆಂತೆಂದಡೆ : ಬೀಜಳಿದು ಬೆಳೆದು ಪುನರಪಿ ಬೀಜವಾದಂತೆ. ಅದರ ಆಗುಚೇಗೆಯನರಿದಲ್ಲಿ, ಇಷ್ಟಪ್ರಾಣಯೋಗ ಕ್ರಿಯಾದ್ವೈತ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿದುದು.
--------------
ಶಿವಲೆಂಕ ಮಂಚಣ್ಣ