ಅಥವಾ
(19) (3) (1) (1) (3) (0) (0) (0) (0) (1) (1) (0) (0) (0) ಅಂ (10) ಅಃ (10) (19) (0) (9) (1) (0) (1) (0) (7) (0) (0) (0) (0) (0) (0) (0) (8) (0) (0) (3) (4) (11) (0) (4) (3) (9) (0) (3) (0) (1) (8) (2) (0) (6) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆದಿವಸ್ತು, ಅನಾದಿವಸ್ತುವೆಂದು ಭೇದವ ಮಾಡಿದಲ್ಲಿ, ತನ್ನಿರವಿನ ಭೇದವೊ ? ವಸ್ತುವಿನ ಸ್ವಯರೂಪದಂಗವೊ ? ಇಕ್ಷುದಂಡಕ್ಕೆ ಕಡೆ ನಡು ಮೊದಲಲ್ಲದೆ ಸಕ್ಕರೆಗುಂಟೆ? ಆದಿ ಅನಾದಿ ವಸ್ತು ವೆಂಬುದು ತನ್ನಯ ಚಿತ್ತದ ಗೊತ್ತಲ್ಲದೆ ಅದು ನಿಶ್ಚಯ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಏಕಮೂರ್ತಿ ಸ್ವಯಂಭು.
--------------
ಶಿವಲೆಂಕ ಮಂಚಣ್ಣ
ಆರುಸ್ಥಲವಿಟ್ಟು ಬೇರೆ ಕರೆದ ಭಾವವಾವುದಯ್ಯಾ ? ಸಕಲಗುಣಂಗಳನರತು, ಸರ್ವಜೀವಕ್ಕೆ ದಯಾಪರನಾಗಿಪ್ಪುದು, ಭಕ್ತಿಸ್ಥಲ. ಸಕಲದೇಹಭಾವಂಗಳಲ್ಲಿ ಕಲೆದೋರದಿಪ್ಪುದು, ಗುರುಸ್ಥಲ. ಉತ್ಪತ್ಯ ಸ್ಥಿತಿ ಲಯಕ್ಕೆ ಹೊರಗಾದುದು, ಲಿಂಗಸ್ಥಲ. ಆ ಮೂರ ಹೆರೆಹಿಂಗಿ ನಿಂದುದು, ಜಂಗಮಸ್ಥಲ. ಆ ಚತುರ್ವಿಧವನೊಳಕೊಂಡದುದು, ಶರಣಸ್ಥಲ. ಆ ಅಯಿದನವಗವಿಸಿ ನಿಂದುದು, ಐಕ್ಯಸ್ಥಲ. ಇಂತೀ ಷಡುಸ್ಥಲದ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂದು ನಿಂದುದು, ಒಂದೆ ಸ್ಥಲ. ಮರೆದು ಅರಿದಲ್ಲಿ ಆಯಿತ್ತು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು, ಷಡಂಗಲೇಪವಾಗಿ ಸ್ವಯಂಭುವಾಯಿತ್ತು.
--------------
ಶಿವಲೆಂಕ ಮಂಚಣ್ಣ
ಆದಿಶಕ್ತಿ ರೂಪಾಗಿ, ಅನಾದಿಶಕ್ತಿ ಪ್ರಾಣವಾಗಿ, ಚಿದಾದಿತ್ಯದ ಬೆಳಗು ಅರಿವಾಗಿ, ಎನ್ನ ಹೃತ್ಕಮಲಮಧ್ಯದಲ್ಲಿ ತೊಳಗಿ ಬೆಳಗುತ್ತಿರಯ್ಯಾ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ.
--------------
ಶಿವಲೆಂಕ ಮಂಚಣ್ಣ